ವಿರಾಟ್ ಕೊಹ್ಲಿಯ ಮಗಳ ಮೇಲೆ ಅತ್ಯಾ#ಚಾರ ಮಾಡುವ ಬೆದರಿಕೆ ನೀಡಿರುವ ಪಾಪಿಯನ್ನು ಬಂಧಿಸಿದ ಪೊಲೀಸ್ ಅಧಿಕಾರಿಗಳು!

ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಮಗಳ ಮೇಲೆ ಅತ್ಯಾಚಾರ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಮುಂಬೈ ಪೊಲೀಸ್ ಸೈಬರ್ ಸೆಲ್ ಈ ಕಾರ್ಯಾಚರಣೆ ನಡೆಸಿದ್ದು, ಬಂಧಿತ ಆರೋಪಿಯನ್ನು ಮುಂಬೈಗೆ ಕರೆತರಲಾಗುತ್ತಿದೆ. ದೊರೆತ ವರದಿಯ ಪ್ರಕಾರ, ಬಂಧಿತ ಆರೋಪಿಯ ಹೆಸರು ರಾಮನಾಗೇಶ್ ಅಲಿಬತ್ತಿನಿ ಇದ್ದು ಈತನ ವಯಸ್ಸು 23 ಇದ್ದು. ಖಚಿತ ಮಾಹಿತಿ ಮೇರೆಗೆ ಹೈದರಾಬಾದ್‌ನಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಇಂತಹ ನಾಚಿಕೆಗೇಡಿನ ಕೃ#ತ್ಯ ಎಸಗಿದ ಆರೋಪಿ ಸುಶಿಕ್ಷಿತನಾಗಿದ್ದು, ಸದ್ಯ ಶಿಕ್ಷಣ ಪಡೆಯುತ್ತಿದ್ದಾನೆ.

ಈ ಹಿಂದೆ ಬಂಧಿತ ವ್ಯಕ್ತಿ ಫುಡ್ ಡೆಲಿವರಿ ಆ್ಯಪ್‌ ಸಲುವಾಗಿ ಸಾಫ್ಟ್‌ವೇರ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಆರೋಪಿಯನ್ನು ಸಾಫ್ಟ್‌ವೇರ್ ಇಂಜಿನಿಯರ್ ಎಂದು ಗುರುತಿಸಲಾಗಿದೆ. ವಿಶ್ವಕಪ್‌ನಲ್ಲಿ ಭಾರತ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಸೋತಿತ್ತು.

ಪಾಕಿಸ್ತಾನ ವಿರುದ್ಧ ಭಾರತ ಸೋಲಿನ ನಂತರ ಈ ಘಟನೆಗೆ ಧಾರ್ಮಿಕ ಹೋಲಿಕೆ ಮಾಡಿ ಮೊಹಮ್ಮದ್ ಶಮಿಯವರನ್ನು ಟೀ#ಕೆ ಮಾಡಲಾಯಿತು. ತದನಂತರ ಅನೇಕ ಆಟಗರಾರು ಶಮಿಯ ಪರ ನಿಂತು ಅವರಿಗೆ ಸಪೋರ್ಟ್ ಮಾಡಿದರು. ಈ ಆಟಗಾರರರಲ್ಲಿ ಕೊಹ್ಲಿ ಸಹ ಒಬ್ಬರಾಗಿದ್ದರು. ಭಾರತ ತಂಡದ ನಾಯಕ ಕೊಹ್ಲಿ ಸಹ ಮೊಹಮ್ಮದ್ ಶಾಮೀ ಯವರಿಗೆ ಸಪೋರ್ಟ್ ಮಾಡಿದ್ದಕಾಗಿ ಕೆಲವು ತಲೆತಿರುಕರು ಕೊಹ್ಲಿಯವರನ್ನು ಟೀಕಿಸಲು ಪ್ರಾರಂಭಿಸಿದರು.

ತದನಂತರ ವಿರಾಟ್ ಕೊಹ್ಲಿಯವರ 10 ತಿಂಗಳ ಮಗುವಿನ ಮೇಲೆ ಬಲ#ತ್ಕಾರ ಮಾಡುವ ಬೆದರಿಕೆ ಟ್ವಿಟ್ಟರ್ ಮೂಲಕ ಬೆಳಕಿಗೆ ಬಂದಿತು. ಈ ಪ್ರಕರಣದ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಒಂದು ಸ್ಕ್ರೀನ್ ಶಾಟ್ ಫೋಟೋ ತುಂಬಾನೇ ವೈರಲ್ ಆಗುತ್ತಿತ್ತು. ಅದರಲ್ಲಿ ವಿರಾಟ್ ಮತ್ತು ಅನುಷ್ಕಾ ಅವರ ಮಗಳು ವಾಮಿಕಾ ಮೇಲೆ ಅತ್ಯಾ#ಚಾರ ಮಾಡುವ ಬೆದರಿಕೆ ಆ ಫೋಟೋದಲ್ಲಿ ಕಾಣಿಸುತ್ತಿತ್ತು. ಅಷ್ಟೇ ಅಲ್ಲ ವಿರಾಟ್ ಮತ್ತು ಅನುಷ್ಕಾ ಕುರಿತು ಸಹ ಅಸಹ್ಯವಾಗಿ ಟೀಕೆ ಮಾಡಿರುವದು ಸಹ ಅದರಲ್ಲಿತ್ತು. ಈ ವೈರಲ್ ಆಗುತ್ತಿರುವ ಫೋಟೋ ಕಂಡು ಅನೇಕ ನೆಟ್ಟಿಗರು ಕೋಪ ವ್ಯಕ್ತ ಪಡಿಸಿದರು.

ತದನಂತರ ಈ ಪ್ರಕರಣ ಕುರಿತು ತನಿಖೆ ನಡೆಸಿರುವ ಸೈಬರ್ ಸೆಲ್ ಪೊಲೀಸ್ ಅಧಿಕಾರಿಗಳು ಆರೋಪಿಯನ್ನು ಬಂಧಿಸಿದ್ದಾರೆ. ಇಂಥ ನಾಚಿಕೆಗೇಡಿ ಕೃ#ತ್ಯ ಮಾಡುವ ವ್ಯಕ್ತಿಗಳಿಗೆ ಸರಿಯಾದ ಶಿಕ್ಷೆ ಆಗಲೇಬೇಕು. ವೃತ್ತಿಯಲ್ಲಿ ಒಬ್ಬ ಇಂಜಿನಿಯರ್ ಆಗಿದ್ದರು ಸಹ ಇಂತ ನೀಚ ಕೆಲಸ ಈತ ಮಾಡಿದ್ದಾನೆ.