ವಿರಾಟ್ ಗೆ ಒಂದು ನ್ಯಾಯ, ಉಳಿದವರಿಗೆ ಒಂದು ನ್ಯಾಯವೇ, ಹೀಗೆ ಮಾಡುವದು ಸರಿಯೇ? ಸುನಿಲ್ ಗಾವಸ್ಕರ್ ಆದರು ಕೆಂಡಾಮಂಡಲ…
ಸದ್ಯ ಭಾರತ ತಂಡ ಆಸ್ಟ್ರೇಲಿಯಾದ ಜೊತೆಗೆ ಅದರದೇ ನೆಲದಲ್ಲಿ ಮಹತ್ವದ ಟೆಸ್ಟ್ ಸರಣಿಯನ್ನು ಆಡುತ್ತಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಹೀನಾಯವಾಗಿ ಸೋತು ಮುಖಭಂಗವನ್ನು ಅನುಭವಿಸಿದೆ. ಅಷ್ಟೇ ಅಲ್ಲ ಭಾರತದ ನಾಯಕ ವಿರಾಟ್ ಅವರು ಮೊದಲ ಟೆಸ್ಟ್ ಪಂದ್ಯವನ್ನು ಆಡಿ ನಂತರ ಸರಣಿಯನ್ನು ಮಧ್ಯದಲ್ಲಿಯೇ ಬಿಟ್ಟು ಸ್ವದೇಶಕ್ಕೆ ಮರಳಿದ್ದಾರೆ. ಇದಕ್ಕೆ ಕಾರಣ ಎಲ್ಲರಿಗೂ ಗೊತ್ತಿರುವ ಹಾಗೆ ವಿರಾಟ್ ಅವರು ಸದ್ಯದಲ್ಲಿಯೇ ಮುಂಬರುವ ಜನೇವರಿಯಲ್ಲಿ ತಮ್ಮ ಮಗುವಿಗೆ ತಂದೆಯಾಗಲಿದ್ದಾರೆ.
ಇದೇ ವಿಷಯವು ಭಾರತದ ಮಾಜಿ ನಾಯಕ ಸುನಿಲ್ ಗಾವಸ್ಕರ್ ಅವರಿಗೆ ಕೆರಳಿಸಿದೆ. ಆದ್ದರಿಂದ ಅವರು ಒಂದು ಪ್ರಶ್ನೆಯನ್ನು ಭಾರತ ಕ್ರಿಕೆಟ್ ಮಂಡಳಿಯ ವ್ಯವಸ್ಥಾಪನೆಗೆ ಕೇಳಿದ್ದಾರೆ, ಯಾರ ಮನೆಯಲ್ಲಿ ಈಗಾಗಲೇ ತೊಟ್ಟಿಲು ತೂಗಿದೆ ಅವರನ್ನು ಅಲ್ಲಿಯೇ (ಆಸ್ಟ್ರೇಲಿಯಾದಲ್ಲಿ) ಇಟ್ಟುಕೊಂಡು ವಿರಾಟ್ ಅವರಿಗೆ ಹೇಗೆ ನೀವು ಭಾರತಕ್ಕೆ ಹೋಗಲು ಅನುಮತಿ ನೀಡಿದಿರಿ? ಯಾಕೆಂದರೆ, ವಿರಾಟ್ ಅವರ ಮನೆಯಲ್ಲಿ ಮಗುವಿನ ಜನ್ಮ ಇನ್ನು ಜನೇವರಿಯಲ್ಲಿ ಆಗಲಿದೆ.

ಗಾವಸ್ಕರ್ ಅವರು ಹೇಳುತ್ತಿರುವುದು T. ನಟರಾಜನ್ ಅವರ ಬಗ್ಗೆ. IPL ಆಡುತ್ತಿರುವಾಗಲೇ ನಟರಾಜನ್ ಅವರಿಗೆ ಹುಡುಗಿಯು ಜನ್ಮಿಸಿದೆ. ಇನ್ನುವರೆಗೆ ನಟರಾಜನ್ ಅವರಿಗೆ ತಮ್ಮ ಮುದ್ದು ಮಗಳ ಮುಖವನ್ನು ನೋಡಲಿಕ್ಕೆ ಸಾಧ್ಯವಾಗಿಲ್ಲ. ಅದಕ್ಕೆ ಕಾರಣ IPL ನಂತರ ನಟರಾಜನ್ ಅವರಿಗೆ ನೆಟ್ ನಲ್ಲಿ ಬಾಲಿಂಗ್ ಪ್ರಾಕ್ಟೀಸ್ ಸಲುವಾಗಿ ಭಾರತದ ತಂಡದಲ್ಲಿ ಸಮಾವೇಶಗೊಳಿಸಲಾಯಿತು. ನಟರಾಜನ್ ಅವರು ನೆಟ್ ಬೌಲರ್ ಇದ್ದರೂ ಅವರಿಗೆ ಆಸ್ಟ್ರೇಲಿಯಾಗೆ ತೆಗೆದುಕೊಂಡು ಒಯ್ಯಲಾಯಿತು. ಆನಂತರ ಅವರಿಗೆ T ಟ್ವೆಂಟಿ ಯಲ್ಲಿ ಆಡುವ ಅವಕಾಶ ಕಲ್ಪಿಸಿ ಕೊಟ್ಟಿರಿ. ಸದ್ಯ ಅವರನ್ನು ಟೆಸ್ಟ್ ನಲ್ಲಿ ಸಮಾವೇಶ ಮಾಡದಿದ್ದರೂ ಅವರನ್ನು ಅಲ್ಲಿಯೇ ಕೂಡಿಸಿದ್ದಿರಾ. ಆದರೆ ಭಾರತದ ಪ್ರಮುಖ ಆಟಗಾರ ಮತ್ತು ನಾಯಕನನ್ನು ಮೊದಲೇ ಅಡ್ವಾನ್ಸ್ ಆಗಿ ಮನೆಗೆ ಬಿಡುತ್ತೀರಾ. ಆದರೆ ನಟರಾಜನ್ ಅವರಿಗೆ ಮಾತ್ರ ಭಾರತದಲ್ಲಿಯ ತಮ್ಮ ಮುದ್ದು ಮಗುವಿನ ಮುಖವನ್ನು ನೋಡಲು ಮನೆಗೆ ಬಿಡಲಿಲ್ಲ. ಈಗ ಅವರಿಗೆ ಜನೇವರಿಯ ಕೊನೆಯ ವಾರದಲ್ಲಿಯೇ ತಮ್ಮ ಮಗುವಿನ ಮುಖ ನೋಡುವ ಭಾಗ್ಯ ಒದಗಲಿದೆ. ಇದು ಯಾವ ಸೀಮೆಯ ನ್ಯಾಯ? ವಿರಾಟ್ ಅವರಿಗೆ ಒಂದು ನ್ಯಾಯ ಮತ್ತು ಉಳಿದವರಿಗೆ ಒಂದು ನ್ಯಾಯವೆ? ಎಂದು ಗಾವಸ್ಕರ್ ಅವರು ಬಿಸಿಸಿಐಗೆ ಪ್ರಶ್ನೆಯನ್ನು ಕೇಳಿದ್ದಾರೆ. ಗಾವಸ್ಕರ್ ಅವರು ಯಾವತ್ತು ತಮ್ಮ ತೀಕ್ಷ್ಣವಾದ ವಿಚಾರಗಳ ಮಂಡನೆಗೆ ಪ್ರಸಿದ್ಧರಾಗಿದ್ದಾರೆ.