ವಿರಾಟ್ ಸರ್ ಗೆ ಜಿಮ್ ನಲ್ಲಿ ಕಸರತ್ತು ಮಾಡುವಾಗ ನೋಡಿದ್ದೀರಾ; ಈಗ ರಿಸೆಪ್ಶನ್ ನಲ್ಲಿ ಸಕ್ಕತ್ ಡ್ಯಾನ್ಸ್ ಮಾಡುವಾಗ ನೋಡದಿದ್ದರೆ ಹೇಗೆ…?

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಸದಾ ಸುದ್ದಿಯಲ್ಲಿರುವ ವ್ಯಕ್ತಿ. ಇವರು ಏನೇ ಮಾಡಿದರು ಅದೊಂದು ದೊಡ್ಡ ಸುದ್ದಿಯಾಗಿ ಬಿಡುತ್ತದೆ. ಇನ್ನು ಸೊಂಟ ಬಳುಕಿಸಿ ಡ್ಯಾನ್ಸ್ ಮಾಡಿದ ಮೇಲೆ ಸುದ್ದಿಯಾಗದಿದ್ದರೆ ಹೇಗೆ?

ವಿರಾಟ್ ಅವರು ಜಿಮ್ ನಲ್ಲಿ ಅನೇಕ ರೀತಿಯ ಕಸರತ್ತುಗಳನ್ನು ಮಾಡಿದ ವಿಡಿಯೋಗಳು ಯಾವಾಗಲೂ ವೈರಲ್ ಆಗುತ್ತವೆ. ಈಗ ಮೊನ್ನೆ ನಡೆದ ಗ್ಲೆನ್ ಮ್ಯಾಕ್ಸ್ವೆಲ್ ಅವರ ರಿಸೆಪ್ಶನ್ ನಲ್ಲಿ ವಿರಾಟ್ ಕೊಹ್ಲಿ ಅವರು ಮುಕ್ತವಾಗಿ ಸೊಂಟ ಬಳುಕಿಸಿದ್ದಾರೆ. ವಿರಾಟ್ ಹಾಗೂ ಇನ್ನಿತರ ಸದಸ್ಯರು ಜೊತೆಗೂಡಿ ಪುಷ್ಪ ಚಿತ್ರದ ಹಾಡಿಗೆ ಸ್ಟೆಪ್ಸ್ ಗಳನ್ನು ಹಾಕಿದ್ದಾರೆ. ರಿಸೆಪ್ಶನ್ ನಲ್ಲಿ ವಿರಾಟ್ ಕೊಹ್ಲಿ ಅವರು ಭಾರತೀಯ ಉಡುಗೆಯಲ್ಲಿ ಹಾಜರಿದ್ದರು. ವಿರಾಟ್ ಅಷ್ಟೇ ಅಲ್ಲ ಇನ್ನಿತರ ಭಾರತೀಯ ಆಟಗಾರರು ಸಹ ಭಾರತೀಯ ಪೋಷಾಕಿನಲ್ಲಿ ತುಂಬಾ ಚೆನ್ನಾಗಿ ಕಾಣಿಸುತ್ತಿದ್ದರು.

ಗ್ಲೆನ್ ಮ್ಯಾಕ್ಸ್ವೆಲ್ ಅವರ ರಿಸೆಪ್ಶನ್ ಸಂದರ್ಭದಲ್ಲಿ ವಿರಾಟ್ ಅವರು ಕೆಲವೇ ಕ್ಷಣಗಳ ಡಾನ್ಸ್ ಮಾಡಿದ್ದು ನೇಟಿಜನ್ಸ್ ಗಳಿಗೆ ಈ ಡಾನ್ಸ್ ತುಂಬಾನೇ ಇಷ್ಟವಾಗಿದೆ. ಹೀಗಾಗಿ ಅವರು ಡ್ಯಾನ್ಸ್ ಮಾಡಿದ ಕ್ಲಿಪ್ ಸೋಶಿಯಲ್ ಮೀಡಿಯಾದಲ್ಲಿ ಈಗ ವೈರಲ್ ಆಗುತ್ತಿದೆ.

ನೋಡಿ ಈ ವಿಡಿಯೋ…

ಪ್ರಸ್ತುತ ವಿಡಿಯೋವನ್ನು pushpa ಹೆಸರಿನ ಅಕೌಂಟಿನಿಂದ ಟ್ವೀಟರ್ ನಲ್ಲಿ ಶೇರ್ ಮಾಡಲಾಗಿದೆ. ಶೇರ್ ಮಾಡಿದ ಈ ವಿಡಿಯೋವನ್ನು ಇಲ್ಲಿಯವರೆಗೆ ಸುಮಾರು ಮೂರು ಲಕ್ಷ ಜನರು ನೋಡಿದ್ದಾರೆ.