ವಿಶ್ವಸುಂದರಿ ಐಶ್ವರ್ಯ ರೈ ಅವರಂತೆಯೇ ಕಾಣುವ 5 ಮಹಿಳೆಯರು ಇಲ್ಲಿದ್ದಾರೆ ನೋಡಿ!
ವಿಶ್ವದ ಅತ್ಯಂತ ಸುಂದರ ಮಹಿಳೆಯರ ಪಟ್ಟಿಯಲ್ಲಿ ಭಾರತೀಯರಾದ ಮಾಜಿ ಭುವನ ಸುಂದರಿ ಬಾಲಿವುಡ್ ನ ಸ್ಟಾರ್ ನಟಿ ಐಶ್ವರ್ಯ ರೈ ಬಚ್ಚನ್ ಅವರ ಹೆಸರು ಸದಾ ಇದ್ದೇ ಇರುತ್ತದೆ. ಬಾಲಿವುಡ್ ನ ಅತ್ಯಂತ ಜನಪ್ರಿಯ ನಟಿಯೆನ್ನುವ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿರುವ ಐಶ್ವರ್ಯ ರೈ ಅವರು ಹಾಗೂ ಅವರ ಅಂದದ ಕುರಿತಾಗಿ ಭಾರತದಲ್ಲಿ ಮಾತ್ರವೇ ಅಲ್ಲದೆ ವಿದೇಶಗಳಲ್ಲಿ ಕೂಡ ಚರ್ಚೆಗೆ ಕಾರಣವಾಗುತ್ತದೆ.
ಅಂದವನ್ನು ಅಭಿಮಾನಿಸುವ ಅದೆಷ್ಟೋ ಜನರು ನಟಿ ಐಶ್ವರ್ಯ ರೈ ಅವರಷ್ಟು ಅಂದಗಾತಿ ಇಡೀ ಜಗತ್ತಿನಲ್ಲೇ ಇಲ್ಲವೇ ಇಲ್ಲ ಎಂದು ಹೇಳುವುದು ಕೂಡ ಸುಳ್ಳಲ್ಲ .ನೀವು ಸಹಾ ಇದೇ ರೀತಿ ಯೋಚಿಸುವಿರಾ? ಹಾಗಿದ್ದರೆ ಇನ್ನೊಮ್ಮೆ ಇದನ್ನು ಆಲೋಚಿಸಿ ನೋಡಿ, ಏಕೆಂದರೆ ಜಗತ್ತಿನಲ್ಲಿ ಐಶ್ವರ್ಯ ರೈ ಅವರ ಹೋಲಿಕೆಯುಳ್ಳ ಒಬ್ಬರು ಇಬ್ಬರಲ್ಲ ಒಟ್ಟು ಐದು ಜನ ಮಹಿಳೆಯರು ಇದ್ದಾರೆ!
ಈ ವಿಷಯ ಕೇಳಿದಾಗ ಬಹುಶಃ ಆಶ್ಚರ್ಯವೆನಿಸಬಹುದು, ಆದರೆ ಇಲ್ಲಿದೆ ಆ ಐದು ಮಹಿಳೆಯರ ಕುರಿತಾದ ರೋಚಕ ಮಾಹಿತಿ.
ಆಮ್ನಾ ಇಮ್ರಾನ್ :

ಐಶ್ವರ್ಯ ರೈ ಯಂತೆ ಕಾಣುವ ಮಹಿಳೆಯರ ಪಟ್ಟಿಗೆ ಆಮ್ನ ಇಮ್ರಾನ್ ಇತ್ತೀಚಿನ ಸೇರ್ಪಡೆಯಾಗಿದ್ದಾರೆ. ಈಕೆ ಪಾಕಿಸ್ತಾನದವರಾಗಿದ್ದು ಅಲ್ಲಿ ಮೆಡಿಕಲ್ ಪ್ರೊಫೆಷನಲ್ ನಲ್ಲಿ ತೊಡಗಿಕೊಂಡಿದ್ದಾರೆ. ಈಕೆ ಅಕ್ಷರಶಃ ಐಶ್ವರ್ಯ ರೈ ಅವರ ಹೋಲಿಕೆಯನ್ನು ಹೊಂದಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಆಮ್ನ ಇಮ್ರಾನ್ ಅವರ ಫೋಟೋಗಳು ಸೋಶಿಯಲ್ ಮೀಡಿಯಾ ಗಳಲ್ಲಿ ವೈರಲಾಗಿದ್ದವು.
ಆಗ ನೆಟ್ಟಿಗರು ಕೂಡಾ ಐಶ್ವರ್ಯ ರೈ ಅವರ ನಕಲು ಎಂದು ಹೇಳಿದ್ದರು. ಆಮ್ನಾ ಅವರ ಅಜ್ಜಿ-ತಾತ ಭಾರತೀಯರಾಗಿದ್ದರು, ಆಕೆಯ ತಂದೆ ಪಾಕಿಸ್ತಾನಿಯಾಗಿದ್ದು, ತಂದೆ ತಾಯಿ ಆಫ್ಘಾನಿಸ್ತಾನದಲ್ಲಿ ನೆಲೆಸಿದ್ದರು ಎನ್ನುವ ಆಮ್ನಾ, ತನಗೆ ಇಂಗ್ಲಿಷ್, ಪರ್ಷಿಯನ್, ಪಂಜಾಬಿ, ಹಾಗೂ ಉರ್ದು ಭಾಷೆಗಳು ಬರುತ್ತವೆ ಎನ್ನುತ್ತಾರೆ.
ಮಹ್ಲಾಗ ಜಬೇರಿ :

ಇರಾನಿನಲ್ಲಿ ರೂಪದರ್ಶಿಯಾಗಿ ಜನಪ್ರಿಯತೆ ಪಡೆದಿರುವ ಮಹ್ಲಾಗ ಜಬೇರಿ ಅವರನ್ನು ಐಶ್ವರ್ಯ ರೈ ಅವರ ಹೋಲಿಕೆಯುಳ್ಳ ಮಹಿಳೆಯಿಂದು ಗುರುತಿಸಲಾಗಿದೆ. ಕಣ್ಣಿನಿಂದ ಹಿಡಿದು ತುಟಿಗಳ ವರೆಗೂ ಐಶ್ವರ್ಯ ರೈ ಅವರ ಹೋಲಿಕೆಯನ್ನು ಮಹ್ಲಾಗಾ ಅವರಲ್ಲಿ ಕಾಣಬಹುದು. ಈಕೆ 2019 ಭಾರತಕ್ಕೆ ಬಂದಿದ್ದರು.
ಆಗ ಇವರು ಮಂದಿರವೊಂದರ ಹೊರಗಡೆ ಫೋಟೋ ತೆಗೆಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದಾಗ ಜನ ಇವರನ್ನು ನೋಡಿ ಆಶ್ಚರ್ಯ ಪಟ್ಟಿದ್ದರು. ಇನ್ಸ್ಟಾಗ್ರಾಮ್ ನಲ್ಲಿ ಮೂವತ್ತು ಲಕ್ಷ ಜನ ಹಿಂಬಾಲಕ ರನ್ನು ಈಕೆ ಹೊಂದಿದ್ದಾರೆ.
ಅಮೂಜ್ ಅಮೃತ :

ಸೋಶಿಯಲ್ ಮೀಡಿಯಾ ಸ್ಟಾರ್ ಆಗಿರುವ ಅಮೂಜ್ ಅಮೃತ ಅವರ ಲುಕ್ಸ್ ಅನ್ನು ಜನರು ಐಶ್ವರ್ಯ ರೈ ಜೊತೆಗೆ ಹೋಲಿಕೆ ಮಾಡುವುದು ವಾಸ್ತವ. ಐಶ್ವರ್ಯ ರೈ ತಮಿಳು ಚಿತ್ರವೊಂದರಲ್ಲಿ ನಟಿಸಿದ್ದ ಹಾಡಾದ ಕಂಡು ಕೊಂಡೈ ಹಾಡನ್ನು ಅಮೃತ ರೀ ಕ್ರಿಯೇಟ್ ಮಾಡಿ ಪೋಸ್ಟ್ ಮಾಡಿದ ನಂತರ ಐಶ್ವರ್ಯ ರೈ ರೀತಿಯಲ್ಲೇ ನಟಿಸಿ, ಹಾಗೇ ಕಂಡಿದ್ದ ಅಮೃತ ಅವರ ಬಗ್ಗೆ ಬಹಳಷ್ಟು ಜನರ ಮೆಚ್ಚುಗೆ ಸೂಚಿಸಿದ್ದರು. ಅಮೂಜ್ ಅಮೃತ ದೊಡ್ಡಮಟ್ಟದ ಜನಪ್ರಿಯತೆಯನ್ನು ಪಡೆದುಕೊಂಡರು.
ಮಾನ್ಸಿ ನಾಯಿಕ :

ಮರಾಠಿ ಭಾಷೆಯ ನಟಿ ಮಾನ್ಸಿ ನಾಯಿಕಾ ಕೂಡಾ ಐಶ್ವರ್ಯ ರೈ ಅವರ ಹೋಲಿಕೆಯುಳ್ಳ ಮಹಿಳೆಯೆಂದು ಜನಪ್ರಿಯತೆ ಪಡೆದಿದ್ದಾರೆ. ಅಂತರ್ಜಾಲದಲ್ಲಿ ಮಾನ್ಸಿಯನ್ನು ಐಶ್ವರ್ಯ ರೈ ಅವರ ಕಾಫಿ ಎಂದು ಸಾಕಷ್ಟು ಮೆಚ್ಚುಗೆಯನ್ನು ಜನ ಸೂಚಿಸುತ್ತಾರೆ. ತನ್ನ ಲುಕ್ಸ್ ಐಶ್ವರ್ಯ ರೈ ಅವರನ್ನು ಹೋಲುತ್ತದೆ ಎಂದು ಒಪ್ಪುವ ಮಾನ್ಸಿ ಐಶ್ವರ್ಯ ರೈ ಅವರ ಜನಪ್ರಿಯ ಲುಕ್ಸ್ ಗಳನ್ನು ರೀ ಕ್ರಿಯೇಟ್ ಮಾಡುತ್ತಾರೆ. ಹಾಗೆ ಆಕೆ ಮಾಡಿದ ಜೋಧಾ ಅಕ್ಬರ್ ಸಿನಿಮಾದ ಐಶ್ವರ್ಯ ರೈ ಲುಕ್ ನೋಡಿ ಜನ ಬಹಳಷ್ಟು ಮೆಚ್ಚಿ ಶ್ಲಾಘಿಸಿದ್ದರು.
ಸ್ನೇಹಾ ಉಲ್ಲಾಳ್ :

ಬಾಲಿವುಡ್ ನಟ ಸಲ್ಮಾನ್ ಖಾನ್ ಪರಿಚಿಯಿಸಿದ ಈ ನಟಿ ಬಹಳ ಜನಪ್ರಿಯ. 2005 ರಲ್ಲಿ ಸಲ್ಮಾನ್ ಖಾನ್ ಅವರ ಲಕ್ಕಿ ಸಿನಿಮಾದಲ್ಲಿ ಸ್ನೇಹ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿದ್ದರು. ಆದರೆ ಸಿನಿಮಾ ಹಿಟ್ ಆಗಲಿಲ್ಲ. ಆದರೂ ಸ್ನೇಹ ಜನಪ್ರಿಯರಾದರು. ಜನರು ಸ್ನೇಹ ಅವರನ್ನು ಐಶ್ವರ್ಯ ರೈ ಗೆ ಹೋಲಿಕೆ ಮಾಡಿದರು.
ಅನಂತರ ಬಾಲಿವುಡ್ ಸಿನಿಮಾಗಳಲ್ಲಿ ಅವರು ಕಾಣದೇ ಇದ್ದರೂ ದಕ್ಷಿಣದ ಸಿನಿಮಾಗಳಲ್ಲಿ ನಟಿಸಿ ಹೆಸರಾದರು. ಈಗ ಬಾಲಿವುಡ್ ಗೆ ಕಮ್ ಬ್ಯಾಕ್ ಮಾಡಿದ್ದಾರಾದರೂ ಅಷ್ಟಾಗಿ ಸುದ್ದಿಯಾಗಿಲ್ಲ.
-Team Infotrend