ವಿಷಕಾರಿ ಸರ್ಪಗಳ ಜೊತೆಗಿನ ಸರಸ ತಂದಿತು ಆಪತ್ತು! ಯುವಕ ನೇರ ಆಸ್ಪತ್ರೆಗೆ ದಾಖಲು! ನಾಗ ಕಾಲಿಗೆ ಮು ತ್ತು ಕೊಟ್ಟ ವಿಡಿಯೋ ವೈರಲ್!
ಮಜಾ ಯಾವತ್ತೂ ಸಜಾ ಆಗಬಾರದು. ನಮ್ಮಲ್ಲಿ ಯಾವುದೋ ಒಂದು ಕಲೆ ಇದೆ ಎಂದ ಮಾತ್ರಕ್ಕೆ ಅದರ ದುರುಪಯೋಗ ಆದಾಗ ಅದರ ಪರಿಣಾಮ ವಿನಾಶ ನಿಶ್ಚಿತ. ವಿಷಕಾರಿ ಹಾವಿನ ಜೊತೆಗಿನ ಆಟ ಇಲ್ಲಿ ಯುವಕನಿಗೆ ದುಬಾರಿಯಾಗಿ ಪರಿಣಮಿಸಿದೆ. ಹಾವು ಹಿಡಿಯುವ ಕಲೆ ಕಲಿತ ನಂತರ ಅದನ್ನು ಸಮಾಜಕ್ಕೆ ಉಪಯೋಗವಾಗಲು, ಜನರಿಗೆ ಸಹಾಯವಾಗಲು ಹಾಗೂ ನಿಸರ್ಗದ ಒಳಿತಿಗಾಗಿ, ಹಾವುಗಳ ವೃದ್ಧಿ ಮತ್ತು ಒಳ್ಳೆಯದಕ್ಕಾಗಿ ಅವಶ್ಯವಿದ್ದಷ್ಟು ಉಪಯೋಗ ಮಾಡಬೇಕು, ಅದನ್ನು ಬಿಟ್ಟು ಅದರ ಜೊತೆಗೆ ಆಟ ಆಡುವದು, ಮಜಾ ಮಾಡುವದು ಎಂದಾಗ ಆ ಮಜಾ ಒಮ್ಮೆಯಾದರೂ ಸಜೆಯಲ್ಲಿ ಬದಲಾಗುವದರಲ್ಲಿ ಸಂಶಯವಿಲ್ಲ. ಪ್ರೊಫೆಷನಲ್ ಸರ್ಪಮಿತ್ರರೂ ಸಹ ಇಂಥ ಭಯಾನಕ ಹಾಗೂ ಜೀವಕ್ಕೆ ಕುತ್ತು ತರುವ ಹಾವುಗಳನ್ನು ಹಿಡಿಯಲು ತುಂಬಾ ಜಾಗರೂಕತೆಯಿಂದ ಹೆಜ್ಜೆ ಇಡುತ್ತಾರೆ. ಸದ್ಯ ಇದೇ ರೀತಿಯ ಘಟನೆಯೊಂದು ಒಬ್ಬ ಯುವಕನ ಜೊತೆಗೆ ನಡೆದದ್ದು ಈಗ ವಿಡಿಯೋ ರೂಪದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ ಕಂಡು ಬರುವ ಹಾಗೆ ಯುವಕನೊಬ್ಬ ಒಂದೇ ಸಮಯಕ್ಕೆ ಮೂರು ವಿಷಕಾರಿ ಸರ್ಪಗಳ ಎದುರು ಕುಳಿತು ಮೋಜು ಮಾಡುತ್ತಿದ್ದಾನೆ. ಆ ಮೂರು ಹಾವುಗಳು ಆತನ ಎದುರು ಹೆಡೆ ಬಿಚ್ಚಿ, ಯಾವಾಗ ಸಮಯ ಸಿಗುತ್ತೆ ಯಾವಾಗ ಈತನಿಗೆ ಕಚ್ಚಲಿ ಎಂಬಂತೆ ಸನ್ನದ್ದವಾಗಿ ಕುಳಿತಿವೆ. ಆದರೂ ಆ ವ್ಯಕ್ತಿ ಸ್ವಲ್ಪವೂ ಹೆದರದೆ ಹಾಗೆಯೇ ಅವುಗಳ ಜೊತೆಗೆ ಆಟ ಆಡುವಲ್ಲಿ ಮಗ್ನನಾಗಿದ್ದಾನೆ. ಈ ಸಂದರ್ಭದಲ್ಲಿ ಒಂದು ಹಾವಿಗೆ ಕಂಟ್ರೋಲ್ ಮಾಡುತ್ತಾನೆ, ಇನ್ನೊಂದಕ್ಕೆ ತನ್ನ ಕೈಗಳ ಸನ್ನೆಯ ಮೇಲೆ ಆಡಿಸುತ್ತಿದ್ದಾನೆ ಎನ್ನುವಷ್ಟರಲ್ಲಿ ಮೂರನೆಯ ಹಾವು ಕ್ಷಣಾರ್ಧದಲ್ಲಿ ಆತನ ಮೊಳಕಾಲಿನ ಮೇಲೆ ಅಟ್ಯಾಕ್ ಮಾಡಿ ಕಚ್ಚಿ ಬಿಟ್ಟಿದೆ. ಆತ ಮೂರು ಹಾವುಗಳನ್ನು ತನ್ನ ಕಂಟ್ರೋಲ್ ನಲ್ಲಿ ತೆಗೆದುಕೊಳ್ಳುವ ಹುಚ್ಚು ಪ್ರಯತ್ನ ಮಾಡುತ್ತಿದ್ದನು. ಈ ಹುಚ್ಚು ಪ್ರಯತ್ನದಲ್ಲಿ ಆತನಿಗೆ ತಕ್ಷಣ ಆಸ್ಪತ್ರೆಗೆ ದಾಖಲಿಸುವ ಪರಿಸ್ಥಿತಿ ಬಂದಿತು. ಈ ವಿಡಿಯೋದಲ್ಲಿ ನಾಗ ಕಣ್ಮುಚ್ಚಿ ತೆಗೆಯುವಷ್ಟರಲ್ಲಿ ಯುವಕನಿಗೆ ದಂಶ ಮಾಡುವಲ್ಲಿ ಸಫಲವಾಗಿತ್ತು. ಕಚ್ಚಿದ ಮೇಲೆ ಯುವಕ ಆ ಹಾವನ್ನು ತನ್ನಿಂದ ದೂರ ಮಾಡಲು ಪ್ರಯತ್ನಿಸಿದ್ದಾನೆ.
ವಿಡಿಯೋ ನೋಡಿ
Don’t try to be smart always..!#snake #sarpmitra @MahaForest pic.twitter.com/Daoxo7pftf
— Arun Sahay (@arsh_ved) March 16, 2022
ಈ ವೀಡಿಯೋವನ್ನು @arsh_ved ಹೆಸರಿನ ಯೂಸರ್ ಟ್ವಿಟರ್ ಮುಖಾಂತರ ಶೇರ್ ಮಾಡಿದ್ದಾನೆ. ಜೊತೆಗೆ ಕ್ಯಾಪ್ಶನ್ ನಲ್ಲಿ “ಪ್ರತಿ ಸಲ ಜಾಣತನ ತೋರಿಸುವ ಪ್ರಯತ್ನ ಮಾಡಬೇಡಿ” ಎಂದಿದ್ದಾನೆ. ಈ ಕ್ಲಿಪ್ ಜೊತೆಗೆ ‘ಮಹಾರಾಷ್ಟ್ರ ಫಾರೆಸ್ಟ್’ ಹೀಗೆ ಟ್ಯಾಗ್ ಮಾಡಿದ್ದಾನೆ. ಪ್ರಸ್ತುತ ವಿಡಿಯೋ ಎಲ್ಲಿ ಶೂಟ್ ಮಾಡಲಾಗಿದೆ ಎಂಬುದರ ಬಗ್ಗೆ ತಿಳಿದು ಬಂದಿಲ್ಲ. ಆದರೆ ನೆಟಿಜನ್ಸ್ ಗಳು ಮಾತ್ರ ಹೆಚ್ಚುವರಿಯಾಗಿ ಪ್ರತಿಕ್ರಿಯಿಸುತ್ತಿದ್ದಾರೆ.