ವೀಡಿಯೊ; ಹರಿದ ಚಪ್ಪಲಿಗಳು, ಒಣಗಿದ ರೊಟ್ಟಿಗಳು, ರಕ್ತದ ಕಲೆಗಳು! ಟ್ರ್ಯಾಕ್ ಮೇಲೆ ಹೃದಯ ವಿದ್ರಾವಕ ದೃಶ್ಯಗಳು!!

ದೇಶದಲ್ಲಿ ಲಾಕ್ಡೌನ್ ದಿಂದಾಗಿ ಅನೇಕ ಕಂಪನಿಗಳು ಹಾಗೂ ಕೆಲಸಗಳು ಬಂದ್ ಆಗಿವೆ. ಇದರಿಂದ ಎಷ್ಟೋ ಜನರು ಮನೆಯಲ್ಲಿಯೇ ಕುಳಿತುಕೊಳ್ಳುವ ಪರಸ್ಥಿತಿ ಬಂದೊದಗಿದೆ. ಆದರೆ ತಮ್ಮ ಊರನ್ನು ಬಿಟ್ಟು ಪಟ್ಟಣಕ್ಕೆ ಬಂದ ಎಷ್ಟೋ ಕಾರ್ಮಿಕರು ಈಗ ತಮ್ಮ ಊರಿನ ಕಡೆಗೆ ಹೋಗಲು ಪ್ರಾರಂಭಿಸಿದ್ದಾರೆ ಅವರಿಗೆ ಯಾವುದೇ ಪ್ರಕಾರದ ಸಾರಿಗೆ ಸೌಲಭ್ಯಗಳು ಲಭ್ಯವಾಗದ ಕಾರಣ ನಡೆದುಕೊಂಡು ಹೋಗುತ್ತಿದ್ದಾರೆ. ಹೀಗೆ ನಿನ್ನೆ ನಡೆದ ಒಂದು ಘಟನೆ ದೇಶದ ತುಂಬೆಲ್ಲ ದುಃಖದ ವಾತಾವರಣ ನಿರ್ಮಾಣ ಮಾಡಿದೆ.

ನಡೆದದ್ದು ಏನೆಂದರೆ, ಮಹಾರಾಷ್ಟ್ರ ರಾಜ್ಯದ ಔರಂಗಾಬಾದ ಜಿಲ್ಲೆಯಲ್ಲಿ 16 ಕ್ಕಿಂತ ಹೆಚ್ಚು ಕಾರ್ಮಿಕರು ತಮ್ಮ ಊರಿನ ಕಡೆಗೆ ಅಂದರೆ ಮಧ್ಯಪ್ರದೇಶದ ಕಡೆಗೆ ನಡೆದುಕೊಂಡು ಹೊರಟಿದ್ದರು. ಅವರು ತಮಗೆ ಬೇಕಾಗುವಷ್ಟು ರೊಟ್ಟಿ ಹಾಗೂ ಚಟ್ನಿಪುಡಿ , ನೀರು, ಅವಶ್ಯಕ ವಸ್ತುಗಳು, ಬ್ಯಾಗು ಗಳು ಹೀಗೆ ಎಲ್ಲವನ್ನು ತಮ್ಮ ಬ್ಯಾಗಿನಲ್ಲಿ ಹಾಕಿಕೊಂಡು ಕಾಲ್ನಡಿಗೆಯ ಪ್ರವಾಸ ಮಾಡುತ್ತಿದ್ದರು. ಹೀಗೆ ಹೋಗುತ್ತಿದ್ದಾಗ ರಾತ್ರಿಯ ಸಮಯವಾಯಿತು ತದನಂತರ ಅವರು ಔರಂಗಾಬಾದ ಜಿಲ್ಲೆಯ ಬದನಾಪುರ್ ಹಾಗೂ ಕರಮಾಡ್ ರೈಲು ಸ್ಟೇಷನ್ ಗಳ ನಡುವೆ ವಿಶ್ರಾಂತಿ ತಗೆದುಕೊಳ್ಳಲು ನಿರ್ಧರಿಸಿದರು ತದನಂತರ ನಿರ್ಧಸಿದ ಹಾಗೆ ರೈಲು ಹಳಿಯ ಮಗ್ಗುಲಲ್ಲೇ ಊಟ ಮಾಡಿ ತಮ್ಮ ಬ್ಯಾಗ್ ಗಳನ್ನು ಅಲ್ಲಿಯೇ ಇಟ್ಟರು. ಲಾಕ್ಡೌನ್ ಇದ್ದುದರಿಂದ ಯಾವುದೇ ರೈಲು ಬರುವದಿಲ್ಲ ಎಂದು ವಿಚಾರ ಮಾಡಿ ಅವರು ರೈಲು ಟ್ರ್ಯಾಕ್ ಮೇಲೆ ಮಲಗಿಕೊಂಡರು ಪಾಪ ಅವರಿಗೇನು ಗೊತ್ತು ಅದು ಅವರ ಜೀವನದ ಕೊನೆಯ ಕ್ಷಣವಾಗಿತ್ತು ಅಂತ ಹಾಗೆ ಮಲಗಿಕೊಂಡರು. ಮುಂಜಾನೆಯ 5.15 ಕ್ಕೆ ಒಂದು ಗೂಡ್ಸ್ ರೈಲು ಅಲ್ಲಿಂದ ಪಾಸಾಗುವದಿತ್ತು ಅದನ್ನು ಅರಿಯದ ಈ ಕಾರ್ಮಿಕರು ಹಾಗೆ ಮಲಗಿಕೊಂಡಿದ್ದರು, ಯಾವುದೇ ಸಿಗ್ನಲ್ ಇರದ ಕಾರಣ ರೈಲು ಚಾಲಕ ಆ ರೈಲನ್ನು ಭರದಿಂದ ಓಡಿಸುತ್ತಿದನು ರಾತ್ರಿಯ ಸಮಯದಲ್ಲಿ ಏನು ಕಾಣದೆ ಹಾಗೆ ಓಡಿ ಬರುತ್ತಿದ್ದ ಟ್ರೈನ್ ಈ ಮಲಗಿಕೊಂಡವರನ್ನು ಕೊಚ್ಚಿಕೊಂಡು ಹೋಯಿತು. ಏನು ಅರಿಯದ ಆ ಜೀವಗಳು ಕ್ಷಣದಲ್ಲೇ ಸಂಹಾರ ವಾದವು. ಆ ಘಟನೆಯಾದ ನಂತರ ಟ್ರ್ಯಾಕ್ ತುಂಬೆಲ್ಲಾ ಬರೀ ಹೆಣಗಳ ರಾಶಿ ಹಾಗೂ ಅವರ ಜೊತೆಗಿದ್ದ ರೊಟ್ಟಿಯಿಂದ ತುಂಬಿತ್ತು. ನಿಜವಾಗಲೂ ಈ ವಿಡಿಯೋ ನೋಡಿದರೆ ನೀವು ಸಹ ಆಶ್ಚರ್ಯ ಪಡುವಿರಿ……