ವೆಸ್ಟ್ ಇಂಡೀಸ್ ತಂಡದಲ್ಲಿಯ ಅನೇಕ ಆಟಗಾರರ ಹೆಸರುಗಳು ಭಾರತೀಯವಾಗಿವೆ ಏಕೆ? ತಿಳಿದುಕೊಳ್ಳಿ ಇದರ ಹಿಂದಿನ ಸ್ವಾರಸ್ಯಕರ ಸಂಗತಿ…
ಕ್ರಿಕೆಟ್ ನಲ್ಲಿ ವೆಸ್ಟ್ ಇಂಡೀಸ್ ತಂಡಕ್ಕೆ ತುಂಬಾ ಮಹತ್ವವಿದೆ. ಮೊದಲಿನಿಂದಲೂ ಅನೇಕ ಫಾಸ್ಟ್ ಬೌಲರ್ ಗಳು ಮತ್ತು ಭರ್ಜರಿ ಬ್ಯಾಟ್ಸ್ಮನ್ ಗಳು ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಹೆಸರನ್ನು ಮೆರೆಯಿಸಿದ್ದಾರೆ. ಇವರಲ್ಲಿ ಅನೇಕ ಆಟಗಾರರ ಹೆಸರು ಭಾರತೀಯ ಹೆಸರುಗಳಂತೆ ಕಂಡುಬರುತ್ತದೆ. ಇವುಗಳಲ್ಲಿ ಆಲ್ವಿನ್ ಕಾಲಿಚರನ್, ಶಿವನಾರಾಯಣ್ ಚಂದ್ರಪಾಲ್, ದಿನೇಶ್ ರಾಮದೀನ್, ರಾಮನರೇಶ್ ಸರವಣ್, ಸುನಿಲ್ ನಾರಾಯಣ್ ಹೀಗೆ ಅನೇಕ ಹೆಸರುಗಳು ಭಾರತದ ದೇವ-ದೇವತೆಗಳ ಹೆಸರಿನ ಹಾಗೆ ಸಾಮ್ಯವಿದ್ದದ್ದು ಕಂಡುಬರುತ್ತವೆ. ಇವರ ಹೆಸರಿನಲ್ಲಿ ಸುನಿಲ್, ದಿನೇಶ್, ರಾಮ್, ಶಿವ ನಾರಾಯಣ, ಚಂದ್ರ ಮತ್ತು ಸೂರ್ಯ ಕೇಳಲು ಸಿಗುತ್ತವೆ. ಇಷ್ಟೇ ಅಲ್ಲದೆ ಇವರು ಭಾರತೀಯ ಪರಂಪರೆಯಂತೆ, ಪದ್ಧತಿಯಂತೆ ಮದುವೆಯನ್ನು ಸಹ ಮಾಡಿಕೊಳ್ಳುತ್ತಾರೆ. ಹಾಗಾದರೆ ಈ ಜನ ನಿಜವಾಗಿಯೂ ಯಾರಿದ್ದಾರೆ? ಎಂಬ ಪ್ರಶ್ನೆಗೆ ಇಲ್ಲಿದೆ ತುಂಬಾ ಸ್ವಾರಸ್ಯಕರವಾದ ಉತ್ತರ, ಓದಿ ಹಾಗಾದರೆ…

ಮಿತ್ರರೇ ಇದರ ಪ್ರಾರಂಭ ಬ್ರಿಟಿಷ್ ಕಾಲದಿಂದ ಅಂದರೆ ಬ್ರಿಟಿಷರು ಭಾರತದ ಮೇಲೆ ರಾಜ್ಯ ಮಾಡುತ್ತಿರುವಾಗಿನ ಸಮಯದಲ್ಲಿ ಆಯಿತು. ಆಗ ಬರೀ ಭಾರತವಷ್ಟೇ ಅಲ್ಲ ಅನೇಕ ದೇಶಗಳು ಬ್ರಿಟಿಷರ ಸ್ವತ್ತಿನಲ್ಲಿ ಇದ್ದವು. ಎಲ್ಲಿ ಜನರ ಮತ್ತು ಕೆಲಸಗಾರರ ಅವಶ್ಯಕತೆ ಬೀಳುತ್ತಿತ್ತೋ ಅಲ್ಲಿ ಬ್ರಿಟಿಷರು ಭಾರತೀಯ ಜನರನ್ನು ಕೆಲಸಕ್ಕಾಗಿ ತೆಗೆದುಕೊಂಡು ಹೋಗುತ್ತಿದ್ದರು. ಇದಕ್ಕೆ ಬದಲಾಗಿ ಬ್ರಿಟಿಷರು ಅವರಿಗೆ ಕೈ ತುಂಬಾ ಹಣವನ್ನು ನೀಡುತ್ತಿದ್ದರು. ಇದನ್ನು ತಿಳಿದ ಅನೇಕ ಭಾರತೀಯರು ಹಡಗಿನ ಮುಖಾಂತರ ದೇಶ-ವಿದೇಶಗಳಲ್ಲಿ ಹೋಗಿ ಕೆಲಸ ಮಾಡತೊಡಗಿದರು. ಕೆಲವು ದಿನಗಳ ನಂತರ ನಿಧಾನವಾಗಿ ಈ ಕೆಲಸಗಾರರಿಗೆ ದುಡಿಮೆ ಹೆಚ್ಚಾಗಿ ಹಣ ಕಡಿಮೆ ದೊರೆಯಲಾರಂಭಿಸಿತು. ಇಂಥ ಕೆಲಸಗಾರರಿಗೆ ‘ಗಿರಿಮಿಟಿಯಾ’ ಅಥವಾ ‘ಜಹಾಜಿ’ ಎಂದು ಸಂಬೋಧಿಸುತ್ತಿದ್ದರು. ಈ ಭಾರತೀಯ ಕೆಲಸಗಾರರಿಗೆ ಬ್ರಿಟಿಷರು ಫಿಜಿ, ಮಾರಿಷಿಯಸ್, ದಕ್ಷಿಣ ಆಫ್ರಿಕಾ ಮತ್ತು ಕೆರೆಬಿಯನ್ ದೇಶಕ್ಕೆ ಕಳಿಸುತ್ತಿದ್ದರು. ಮುಂದೆ ಈ ಕೆಲಸಗಾರರು ಬ್ರಿಟಿಷರ ದಬ್ಬಾಳಿಕೆಗೆ ಮಣಿದು ಅಲ್ಲಿಯೇ ವಾಸಿಸುವ ನಿರ್ಣಯವನ್ನು ತೆಗೆದುಕೊಂಡರು. ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡವು ಕರೆಬಿಯನ್ ಪ್ರದೇಶದಲ್ಲಿಯ ಹದಿನೈದು ಚಿಕ್ಕ-ದೊಡ್ಡ ದ್ವೀಪಗಳನ್ನು ಕೂಡಿ ಒಂದು ತಂಡವಾಗಿದೆ. ಈ ದೇಶಗಳಲ್ಲಿ ಪ್ರಾಮುಖ್ಯವಾಗಿ ಬ್ರಿಟಿಷ್ ವಸಹಾತುಗಳು ಮತ್ತು ಕಾಮನ್ವೆಲ್ತ್ ರಾಷ್ಟ್ರಗಳು ಸಮಾವೇಶವಾಗಿವೆ. ಇಲ್ಲಿ ಆಡುವ ಅನೇಕ ಕ್ರಿಕೆಟಿಗರು ಕೆರೆಬಿಯನ್ ನಿವಾಸಿಗಳಾದ ಭಾರತೀಯ ಮತ್ತು ಹಿಂದೂಗಳೇ ಆಗಿದ್ದಾರೆ. ಹೀಗಾಗಿ ಅನೇಕ ಕೆರೆಬಿಯನ್ ಹಾಡುಗಳಲ್ಲಿ ರಾಮ ಮತ್ತು ಶಿವ ಈ ದೇವರ ಹೆಸರಿನ ಶಬ್ದಗಳು ಕೇಳಲು ಸಿಗುತ್ತವೆ.

ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ ಕಡೆಗೆ ಒಂದು ಸಮಯದಲ್ಲಿ ಕ್ರಿಕೆಟ್ ಆಡಲು ಹಣವೂ ಸಹ ಇರಲಿಲ್ಲ. ಆಗ ಭಾರತವು ಸಹಾಯ ಮಾಡಿತು. ಯಾವಾಗ ವೆಸ್ಟ್ ಇಂಡೀಸ್ ತಂಡವು t20 ವರ್ಲ್ಡ್ ಕಪ್ ಗೆದ್ದಿತು ಆಗ ತಂಡವು ನಮ್ಮ ಜನರೇ ನಮಗೆ ಸಹಾಯ ಮಾಡಿದ್ದರಿಂದ ಈ ಗೆಲುವು ಸಾಧ್ಯವಾಯಿತು ಎಂದು ಹೇಳಿಕೊಂಡಿದ್ದರು. ಐಪಿಎಲ್ ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟ್ ಆಟಗಾರರು ಹೆಚ್ಚಾಗಿ ಕಾಣಿಸುವ ಹಿಂದಿನ ಕಾರಣ ಇದೇ ಆಗಿದೆ. ಇನ್ನೂ ಹೇಳಬೇಕೆಂದರೆ ಎಷ್ಟೋ ಕ್ರಿಕೆಟ್ ಆಟಗಾರರು ಭಾರತೀಯ ಹುಡುಗಿಯರನ್ನು ಮದುವೆಯಾಗಿದ್ದಾರೆ. ನಮಗೆ ಅಷ್ಟೊಂದು ಇತಿಹಾಸ ಗೊತ್ತಿರದ ಕಾರಣ ಇದೆಲ್ಲಾ ಹಣದ ಕಾರಣಕ್ಕಾಗಿ ನಡೆದಿದೆ ಎಂದೆನಿಸುತ್ತದೆ. ಆದರಿದು ಶುದ್ಧ ಸುಳ್ಳು. ಏನೇ ಆಗಲಿ ಒಟ್ಟಿನಲ್ಲಿ ಅವರೂ ನಮ್ಮ ಸಹೋದರರಾಗಿದ್ದಾರೆ. ಕರೇಬಿಯನ್ ಪ್ರದೇಶದಲ್ಲಿಯ ಈ 15 ದೀಪಗಳು ಕೂಡಿ ತಯಾರಾದ ಈ ತಂಡಕ್ಕೆ t20 ವರ್ಲ್ಡ್ ಕಪ್ ಸಲುವಾಗಿ ಅನಂತ ಶುಭಾಶಯಗಳು.