ವೇದಿಕೆಯ ಮೇಲೆ ಲಂಚದ ವಿರುದ್ಧ ಭಾಷಣ ನೀಡಿದ ASP; ಒಂದು ಗಂಟೆಯ ನಂತರ ಲಂಚ ಸ್ವೀಕರಿಸುವಾಗಲೇ ಅರೆಸ್ಟ್!
ಇಂದು ನಮ್ಮ ದೇಶವನ್ನು ಬಾ ಧಿ ಸುತ್ತಿರುವ ಬಹು ದೊಡ್ಡ ಸಮಸ್ಯೆಗಳಲ್ಲಿ ಲಂಚ ಕೂಡ ಒಂದಾಗಿದೆ. ಲಂಚ ಎನ್ನುವ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರ ಈಗಾಗಲೇ ಅನೇಕ ಕ್ರಮಗಳನ್ನು ಕೂಡಾ ಕೈಗೊಂಡಿದೆ ಹಾಗೂ ಲಂಚ ಮತ್ತು ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ವಿಶೇಷ ಅಧಿಕಾರಿಗಳ ಪಡೆ ಹಾಗೂ ಇಲಾಖೆಗಳನ್ನು ಕೂಡಾ ರಚಿಸಿದೆ. ಆದರೆ ಇದರ ಹೊರತಾಗಿಯೂ ದೇಶದ ಪ್ರತಿಯೊಂದು ಕ್ಷೇತ್ರದಲ್ಲಿ ಕೂಡಾ ಇಂದಿಗೂ ಲಂಚ ಎನ್ನುವುದು ಮಾತ್ರ ಹಾಗೆ ಉಳಿದುಕೊಂಡಿದೆ. ಲಂಚಾವತಾರದ ಸ್ವರೂಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು ಯಾವ ಮಟ್ಟಕ್ಕೆ ಹೋಗಿದೆ ಎಂದರೆ ಲಂಚವೆಂಬ ಅ ಪ ರಾ ಧ ವನ್ನು ನಿಗ್ರಹಿಸಬೇಕಾದ ಅಧಿಕಾರಿಯೇ ಲಂಚದ ಪ್ರಕರಣದಲ್ಲಿ ಸಿಲುಕಿಕೊಂಡ ಘಟನೆಯೊಂದು ವರದಿಯಾಗಿದೆ.
ಭ್ರ ಷ್ಟಾ ಚಾ ರ ವಿ ರೋ ಧ ದಿನದಂದು ಜೈಪುರದ ಎಸಿಬಿ ತಂಡವು ಸವಾಯಿ ಮಾಧೋಪುರ ಎಂಬಲ್ಲಿ ಒಂದು ದೊಡ್ಡ ಕಾರ್ಯಾಚರಣೆಯನ್ನು ಮಾಡುತ್ತಾ ಮಾಧೋಪುರದ ಎಸಿಬಿ ಯ ಅಡಿಷನಲ್ ಎಸ್ ಪಿ ಭೇರುಲಾಲ್ ಎಂಬುವವರನ್ನು 80 ಸಾವಿರ ರೂಪಾಯಿಗಳ ಲಂಚ ಪಡೆಯುವಾಗ ರೆಡ್ ಹ್ಯಾಂಡಡ್ ಆಗಿ ಹಿಡಿಯಲಾಗಿದೆ. ಡಿಜಿ ಬಿಎಲ್ ಸೋನಿ ಮತ್ತು ಎಡಿಜಿ ಎಂಎಂ ದಿನೇಶ್ ಅವರ ನಿರ್ದೇಶನದಲ್ಲಿ ಜೈಪುರದ ಎಸಿಬಿ ತಂಡ ಎ ಎಸ್ ಪಿ ಪುಷ್ಪೇಂದ್ರ ಸಿಂಗ್ ಅವರ ನೇತೃತ್ವದಲ್ಲಿ ಇಂತಹುದೊಂದು ಕಾರ್ಯಚರಣೆಯನ್ನು ಮಾಡಿದೆ ಎನ್ನಲಾಗಿದ್ದು, ಆ ರೋ ಪಿಯನ್ನು ಸಾಕ್ಷಿ ಸಮೇತ ಹಿಡಿದಿದ್ದಾರೆ.

ಎಸಿಬಿ ಯಿಂದ ದೊರೆತಿರುವ ಮಾಹಿತಿಯ ಪ್ರಕಾರ ಸವಾಯಿ ಮಾಧೋಪುರ ಎಸಿಬಿ ಹೆಚ್ಚುವರಿ ಎಸ್ ಪಿ ಭೇರುಲಾಲ್ ಅವರು ಸವಾಯಿ ಮಾಧೋಪುರದ ಡಿಟಿಓ ಮಹೇಶ್ ಚಂದ್ ಅವರಿಂದ ಮಾಸಿಕ 80 ಸಾವಿರ ರೂಪಾಯಿಗಳ ಲಂಚ ವನ್ನು ಸ್ವೀಕಾರ ಮಾಡಿದ್ದಾರೆ ಎನ್ನಲಾಗಿದೆ. ಇದರಿಂದ ರೋಸಿ ಹೋಗಿದ್ದ ಮಹೇಶ್ ಚಂದ್ ಈ ವಿಚಾರವಾಗಿ ಎಸಿಬಿಯ ಮುಖ್ಯ ಕಛೇರಿಗೆ ದೂರನ್ನು ನೀಡಿದ್ದರು ಎನ್ನಲಾಗಿದೆ. ಡಿಟಿಓ ನೀಡಿದ ದೂರಿನ ಹಿನ್ನೆಲೆಯಲ್ಲಿ ಜೈಪುರ ಎಸಿಬಿಯ ತಂಡವು ಅಡಿಷನಲ್ ಎಸ್ ಪಿ ಭೇರುಲಾಲ್ ಅವರ ಬಂಗಲೆಯ ಮೇಲೆ ಧಾ ಳಿ ಮಾಡಿ ತನ್ನ ಕಾರ್ಯಾಚರಣೆಯನ್ನು ನಡೆಸಿದೆ.
ಈ ಧಾ ಳಿಗೆ ಒಂದು ಗಂಟೆ ಮೊದಲು ಎ ಎಸ್ ಪಿ ಭೇರುಲಾಲ್ ಅವರು ಒಂದು ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಷಣವನ್ನು ಮಾಡುತ್ತಾ ಲಂಚದ ವಿ ರು ದ್ಧ ಹೋರಾಟ ಮಾಡಬೇಕಿದೆ, ಯಾರಾದರೂ ಲಂಚವನ್ನು ಕೇಳಿದರೆ 1064 ನಂಬರಿಗೆ ಕರೆ ಮಾಡಿ ಎಂದೂ, ಲಂಚದ ನಿರ್ಮೂಲನೆಗೆ ಜನರ ಸಹಾಯ ಸಹಕಾರ ಹಾಗೂ ಜಾಗೃತಿ ಅತಿ ಮುಖ್ಯವೆಂದು ವೇದಿಕೆಯ ಮೇಲೆ ಮಾತನಾಡಿ ಬಂದಿದ್ದರು.
ಬುಧವಾರದಂದು ಭೇರುಲಾಲ್ ಡಿಟಿಓ ಮಹೇಶ್ ಚಂದ್ ಅವರಿಂದ ತಮ್ಮ ಮಾಸಿಕ ಲಂಚ 80 ಸಾವಿರ ಪಡೆಯುವಾಗಲೇ ಅವರ ಬಂಗಲೆ ಮೇಲೆ ಧಾ ಳಿ ನಡೆಸಿದ ಎಸಿಬಿ ಅಧಿಕಾರಿಗಳು ಭೇರುಲಾಲರನ್ನು ರೆಡ್ ಹ್ಯಾಂಡಡ್ ಆಗಿ ಹಿಡಿಯುವಲ್ಲಿ ಯಶಸ್ವಿ ಆಗಿದ್ದಾರೆ.

ಈ ಘಟನೆಯನ್ನು ನೋಡಿದಾಗ ನಿಜಕ್ಕೂ ಇಂದಿನ ಪರಿಸ್ಥಿತಿ ಹೇಗಿದೆ ಎಂಬುದರ ಅರಿವು ನಮಗಾಗುತ್ತದೆ. ಬೇಲಿಯೇ ಎದ್ದು ಹೊಲ ಮೇಯುವಂತ ಪರಿಸ್ಥಿತಿ ಇರುವಾಗ ಭ್ರ ಷ್ಟಾ ಚಾರವನ್ನು ನಿರ್ಮೂಲನೆ ಮಾಡುವುದು ಅಸಾಧ್ಯವೆಂದೇ ನಾವು ಹೇಳಬಹುದು. ನೈತಿಕತೆ ಎನ್ನುವುದನ್ನು ಮರೆತಿರುವ ಅಧಿಕಾರಿಗಳೇ ಲಂಚವನ್ನು ಸ್ವೀಕರಿಸುವಾಗ ಅದನ್ನು ನಿ ರ್ನಾ ಮ ಮಾಡುವುದು ಅಥವಾ ಅದಕ್ಕೊಂದು ಅಂತ್ಯ ಹಾಡುವುದು ಅಸಾಧ್ಯವೇ ಸರಿ. ಒಂದೆಡೆ ಜನಜಾಗೃತಿಯೂ ಇಲ್ಲದೇ ಮತ್ತೊಂದೆಡೆ ಕಠಿಣವಾದ ಶಿ ಕ್ಷೆ ಇಲ್ಲದ ಕಾರಣ ಇಂದು ಲಂಚಾವತಾರವು ಎಲ್ಲೆಡೆ ರು ದ್ರ ನ ರ್ತ ನವನ್ನು ಮಾಡುತ್ತಿದೆ.