ವೈರಲ್ ಆಯಿತು ವಿಡಿಯೋ…ಗಾರ್ಡನ್ ನಲ್ಲಿ ಆಡುತ್ತಿದ್ದ ಪುಟ್ಟ ಮಗುವಿನ ಮೇಲೆ ಅಟ್ಯಾಕ್ ಮಾಡಿ ಕ್ಷಣದಲ್ಲಿ ಮೇಲೆತ್ತಿಕೊಂಡು ಹೊರಟ ಹದ್ದು! ಮುಂದೆ…?
ಪ್ರತಿಯೊಂದು ವ್ಯಕ್ತಿಗೆ ಗಾರ್ಡನ್ನಲ್ಲಿ, ಮುಕ್ತವಾದ ವಾತಾವರಣದಲ್ಲಿ ಪಟ್ಟಣದಿಂದ ದೂರ ಅಥವಾ ನ್ಯಾಷನಲ್ ಪಾರ್ಕುಗಳಲ್ಲಿ ಹೋಗಿ ಆಡಲು, ಕುಳಿತುಕೊಳ್ಳಲು ತುಂಬಾ ಇಷ್ಟವಾಗುತ್ತದೆ. ಪಟ್ಟಣದಲ್ಲಿ ವಾಸಿಸುವವರಿಗಂತೂ ಇದು ತುಂಬಾ ಅಪ್ಯಾಯಮಾನವಾಗುತ್ತವೆ. ಎಷ್ಟೋ ಜನರು ಕಾಡು, ಗಾರ್ಡನ್ ಮತ್ತು ನ್ಯಾಷನಲ್ ಪಾರ್ಕುಗಳ ಹತ್ತಿರವೇ ಮನೆ ಮಾಡಿ ವಾಸಿಸಲು ಯತ್ನಿಸುತ್ತಾರೆ. ಅಂಥವರ ಮನೆ ಪರಿಸರಗಳಲ್ಲಿ ಎಷ್ಟೋ ಸಲ ಹುಲಿ, ಸಿಂಹ, ಚಿರತೆಗಳಂತಹ ಕ್ರೂರ ಮೃಗಗಳು ಬಂದು ಅವರ ಪುಟ್ಟ ಮಕ್ಕಳನ್ನು ಮತ್ತು ಅವರು ಸಲುಹಿದ ಸಾಕುಪ್ರಾಣಿಗಳನ್ನು ಎತ್ತಿಕೊಂಡು ಹೋಗುತ್ತವೆ. ಅಥವಾ ಈ ಪ್ರಾಣಿಗಳು ಮಾನವರ ಮೇಲೆ ಹಲ್ಲೆ ಮಾಡಿದ್ದನ್ನು ಸುದ್ದಿ-ಸಮಾಚಾರಗಳಲ್ಲಿ ಓದುತ್ತೇವೆ. ಈಗ ಇದೇ ರೀತಿಯ ಸ್ವಲ್ಪ ಭಿನ್ನವಾದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಈ ವಿಡಿಯೋವನ್ನು ನೇಚರ್ ಹೆಸರಿನ ಇನ್ಸ್ಟಾಗ್ರಾಮ್ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ತಂದೆಯ ಜೊತೆಗೆ ಗಾರ್ಡನ್ ನಲ್ಲಿ ಆಟ ಆಡಲು ಮಗುವೊಂದು ಬಂದಿದೆ. ತಂದೆಯು ಅಲ್ಲಿಯೇ ಮಗುವಿನಿಂದ ಸ್ವಲ್ಪ ಅಂತರದಲ್ಲಿ ಬೇರೊಂದು ಕೆಲಸದಲ್ಲಿ ತೊಡಗಿರುವಾಗ ಸರಿಯಾಗಿ ಅದೇ ಸಮಯಕ್ಕೆ ಹದ್ದಿನ ದೃಷ್ಟಿ ಪುಟ್ಟ ಮಗುವಿನ ಮೇಲೆ ಬಿದ್ದು ತಕ್ಷಣ ಅಟ್ಯಾಕ್ ಮಾಡಿಯೇ ಬಿಟ್ಟಿದೆ. ಮಗುವಿಗೆ ತನ್ನ ಬಲವಾದ ಕಾಲಿನ ಉಗುರುಗಳಲ್ಲಿ ಹಿಡಿದು ಈ ಹದ್ದು ಭೂಮಿಯಿಂದ ಆಕಾಶದಲ್ಲಿ ಹಾರಲು ಪ್ರಯತ್ನಿಸಿದೆ. ಅಷ್ಟರಲ್ಲಿ ಮಗುವಿನ ತಂದೆಯ ದೃಷ್ಟಿ ಅದರ ಮೇಲೆ ಬಿದ್ದಾಕ್ಷಣ ಮಗುವಿಗೆ ಹದ್ದಿನ ಹಿಡಿತದಿಂದ ಬಚಾವ್ ಮಾಡಿಕೊಳ್ಳಲು ಆಕ್ಟಿವ್ ಆಗಿದ್ದಾನೆ. ಇದನ್ನು ನೋಡಿದ ಗರುಡ ಪಕ್ಷಿಯು ಒಮ್ಮೆಲೆ ಹೆದರಿ ಮಗುವಿಗೆ ತನ್ನ ಬಿಗಿಯಾದ ಹಿಡಿತದಿಂದ ಮುಕ್ತ ಮಾಡಿದೆ. ಹದ್ದು ಮಗುವಿಗೆ ಬಿಡುತ್ತಲೇ ಸುಮಾರು ಒಂದೆರಡು ಅಡಿ ಎತ್ತರದ ಮೇಲಿಂದ ಮಗು ಕೆಳಗೆ ಬಿದ್ದದೆ. ಜಾಸ್ತಿ ಅಂತರವಿರದ ಕಾರಣ ಮಗುವಿಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ. ತಂದೆ ತಕ್ಷಣ ಮಗುವಿನ ಹತ್ತಿರ ಹೋಗಿ ಮಗುವನ್ನು ತನ್ನ ಮಡಿಲಲ್ಲಿ ತೆಗೆದುಕೊಳ್ಳುತ್ತಾನೆ. ಪ್ರಸ್ತುತ ವಿಡಿಯೋವನ್ನು ನೋಡಿ ನೇಟಿಜನ್ಸ್ ಗಳು ಆಶ್ಚರ್ಯವನ್ನು ವ್ಯಕ್ತ ಮಾಡಿದ್ದಾರೆ.
ವಿಡಿಯೋ ನೋಡಿ
View this post on Instagram