ವೈರಲ್ ಆಯ್ತು ವಿಡಿಯೋ; ಡಾಕ್ಟರ್ ಜೋಡಿಯೊಂದು ಈ ಫೇಮಸ್ ಹಾಡಿಗೆ ಹೊಡೆದರು ಸಖತ್ ಡಾನ್ಸ್!
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಡಾಕ್ಟರ್ ಜೋಡಿ ಎಂದು ತಮ್ಮ ಡಾನ್ಸ್ ಮುಖಾಂತರ ನೆಟ್ಟಿಗರ ಮನವನ್ನು ಗೆಲ್ಲಲು ಯಶಸ್ವಿಯಾಗಿದ್ದಾರೆ. ಅವರ ಪರ್ಫಾರ್ಮೆನ್ಸ್ ನೇಟಿಜನ್ಸ್ ಗಳಿಗೆ ತುಂಬಾನೇ ಇಷ್ಟವಾಗಿದೆ. ಪ್ರಸ್ತುತ ಜೋಡಿ ಮಲಯಾಳಂ ನ ಸೂಪರ್ ಸಾಂಗ್ ‘ಪಲಾ ಪಲ್ಲಿ ತಿರುಪಲ್ಲಿ’ ಹಾಡಿಗೆ ತಮ್ಮ ಹೆಜ್ಜೆಗಳನ್ನು ಹಾಕಿದ್ದಾರೆ.
ವೈನಾಡಿನ ಬುಡಕಟ್ಟು ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವ ಡಾಕ್ಟರ್ ಗಳ ಈ ಸುಂದರ ಜೋಡಿಯ ಈ ವಿಡಿಯೋವನ್ನು ರಾಜ್ಯದ ಆರೋಗ್ಯ ಸಚಿವೆಯಾದ ವೀಣಾ ಜಾರ್ಜ್ ಅವರೇ ಸ್ವತಃ ತಮ್ಮ ಫೇಸ್ಬುಕ್ ಅಕೌಂಟ್ ನಿಂದ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಅದರ ಜೊತೆಗೆ ವೀಣಾ ಜಾರ್ಜ್ ಅವರು, ಅಧೀಕ್ಷಕರಾದ ಡಾಕ್ಟರ್ ಸಾವನ್ ಸರಾಹ್ ಮ್ಯಾಥ್ಯೂ ಹಾಗೂ ಮೆಡಿಕಲ್ ಆಫೀಸರ್ ಡಾಕ್ಟರ ಸಾಫೀಸ್ ಅಲಿ ಜೊತೆ ಪ್ರಸ್ತುತ ಡಾಕ್ಟರ್ ಗಳ ತಂಡ ಹಾಸ್ಪಿಟಲ್ ನಲ್ಲಿ ತುಂಬಾ ಅದ್ಭುತವಾಗಿ ಸಾವಿರಾರು ಪೇಷಂಟ್ ಗಳಿಗೆ ಒಳ್ಳೆಯ ಸೇವೆಯನ್ನು ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಕಳೆದ ತಿಂಗಳು ತೆರೆಕಂಡ ಕಡುವ ಚಿತ್ರದಲ್ಲಿಯ ವಿಕಲಚೇತನ ಮಕ್ಕಳಿಗೆ ಸಂಬಂಧಿಸಿದ ಒಂದು ದೃಶ್ಯ ತುಂಬಾ ಕೋಲಾಹಲ ಎಬ್ಬಿಸಿತ್ತು. ಟೀಕೆಗಳಿಗೆ ಪ್ರತಿಕ್ರಿಸಿದ ನಂತರ ನಟ ಪೃಥ್ವಿರಾಜ್ ಸುಕುಮಾರನ್ ಕ್ಷಮೆಯಾಚಿಸಿ ಚಿತ್ರದಿಂದ ಆ ದೃಶ್ಯವನ್ನು ತೆಗೆದುಹಾಕಿದ್ದರು.
ವಿಡಿಯೋ ನೋಡಿ
View this post on Instagram
ಸದ್ಯ ಇಬ್ಬರು ಡಾಕ್ಟರ್ ಗಳು ಇದೇ ಚಿತ್ರದ ಹಾಡಿಗೆ ಬಿಂದಾಸ್ ಆಗಿ ಕುಣಿದು ಸೋಶಿಯಲ್ ಮೀಡಿಯಾದಲ್ಲಿ ಗುರುತಿಸಿಕೊಂಡಿದ್ದಾರೆ. ಡಾಕ್ಟರ್ ಗಳ ನೃತ್ಯ ಮಾತ್ರ ನೆಟ್ಟಿಗರಿಗೆ ತುಂಬಾ ಇಷ್ಟವಾಗಿದೆ.