ವೈರಲ್ ವಿಡಿಯೋ! ಇಕ್ಕಟ್ಟಾದ ದಾರೀಲಿ ದೊಡ್ಡ ಕಂಟೇನರ್ ಬರುತ್ತಿದ್ದರೂ ಬದಿಗೆ ಸರಿಯದ ಈ ವ್ಯಕ್ತಿಯ ದೇಹದಲ್ಲಿ ಅದೆಷ್ಟು ಕೊಬ್ಬು ತುಂಬಿರಬಹುದು?

ಸೋಶಿಯಲ್ ಮೀಡಿಯಾದಲ್ಲಿ ದಿನನಿತ್ಯ ಅನೇಕ ಪ್ರಕಾರದ ವಿಡಿಯೋಗಳು ಮತ್ತು ಫೋಟೋಗಳು ಓಡಾಡುತ್ತವೆ. ಅವುಗಳಲ್ಲಿ ತುಂಬಾ ವಿಚಿತ್ರವಾದ ವಿಡಿಯೋಗಳು ಸಹ ಇರುತ್ತವೆ. ಸದ್ಯ ಇಲ್ಲಿ ನೋಡುವ ವಿಡಿಯೋ ಇದೇ ರೀತಿಯಾಗಿದೆ.

ಈ ವಿಡಿಯೋ ನೋಡಿದ ನಂತರ, ವ್ಯಕ್ತಿಯೊಬ್ಬನು ತನ್ನ ದೇಹದಲ್ಲಿ ಎಷ್ಟೊಂದು ಕೊಬ್ಬು ತುಂಬಿದೆ ಎಂಬುದರ ಪರಿಚಯವನ್ನು ನೀಡಿದ್ದಾನೆನೋ ಎಂದೆನಿಸುತ್ತದೆ. ವಿಡಿಯೋದಲ್ಲಿ ಮನೆಗಳ ಮುಂದೆ ಒಂದು ಚಿಕ್ಕ ದಾರಿ ಕಂಡುಬರುತ್ತದೆ. ಅದೇನು ದೊಡ್ಡ ಹೈವೇ ರಸ್ತೆ ಅಲ್ಲವೆಂಬುದು ನೋಡಿದ ಮೇಲೆ ಗೊತ್ತಾಗುತ್ತದೆ. ಆ ಪುಟ್ಟ ದಾರಿಯಿಂದ ದೊಡ್ಡದಾದ ಕಂಟೇನರ್ ಹೋಗುತ್ತಿದೆ. ಹೋಗುತ್ತಿರುವ ಕಂಟೇನರ್ ಗೆ ಇನ್ನಷ್ಟು ಸಮಸ್ಯೆ ಎಂಬಂತೆ ಬದಿಗೆ ಪಿಕಪ್ ಒಂದು ನಿಂತಿದೆ. ಆದರೂ ಸಹ ಕಂಟೇನರ್ ಡ್ರೈವರ್ ಪಿಕಪ್ ಮಗ್ಗುಲಿನಿಂದ ಹಾಯ್ದು ಸರಿಯಾಗಿ ತನ್ನ ಕಂಟೇನರ್ ನಿಧಾನವಾಗಿ ಮುಂದೆ ಕೊಂಡೊಯ್ಯುತ್ತಿದ್ದಾನೆ.

ಅದೇ ಸಮಯದಲ್ಲಿ ಅಲ್ಲಿಯೇ ಮನೆಯ ಮುಂದೆ ನಿಂತ ಬೈಕೊಂದನ್ನು ವ್ಯಕ್ತಿಯು ಸ್ಟಾರ್ಟ್ ಮಾಡಿ ಯುಟರ್ನ್ ತೆಗೆದುಕೊಂಡು ಎದುರಿನಿಂದ ಬರುತ್ತಿರುವ ಕಂಟೇನರ್ ಮುಂದೆ ಹೋಗಿ ನಿಲ್ಲುತ್ತಾನೆ. ವ್ಯಕ್ತಿಯು ಎದುರಿನಿಂದ ದೊಡ್ಡದಾದ ಕಂಟೇನರ್ ಬರುವುದನ್ನು ನೋಡಿಯೂ ಬದಿಗೆ ಸರಿಯದೆ ಹಾಗೆಯೇ ಸೊಕ್ಕಿನಿಂದ ಅಲ್ಲಿಯೇ ಬೈಕ್ ಮೇಲೆ ನಿಲ್ಲುತ್ತಾನೆ. ಅಷ್ಟೊತ್ತಿಗಾಗಲೇ ಕಂಟೇನರ್ ನಿಂದ ಕ್ಲೀನರ್ ಇಳಿದು ಡ್ರೈವರ್ಗೆ ಹಿಂದಿನಿಂದ ಗೈಡ್ ಮಾಡುತ್ತಿರುತ್ತಾನೆ. ಕಂಟೇನರ್ ಪಾಸ್ ಮಾಡಿಕೊಂಡು ಬರುವುದೇ ಕಷ್ಟವಾಗುತ್ತಿರುವಾಗ ಬೈಕ್ ಮೇಲೆ ಇರುವ ವ್ಯಕ್ತಿ ಬದಿಗೆ ಸರಿದು ಕಂಟೇನರ್ ಪಾಸ್ ಆಗಿ ಹೋದ ನಂತರ ತಾನು ಹೋಗಬೇಕು ಎಂದು ಸ್ವಲ್ಪವೂ ವಿಚಾರ ಮಾಡುವದು ಬಿಡಿ ಸಹಕರಿಸುವದು ಇಲ್ಲ.

ಅದರ ಪರಿಣಾಮ ಮುಂದೆ ಏನಾಗುತ್ತದೆ ನೋಡಿ ಈ ವಿಡಿಯೋದಲ್ಲಿ…

ಬೈಕ್ ಮೇಲಿನ ವ್ಯಕ್ತಿಯು ಹಾಗೆ ಸೊಕ್ಕಿನಿಂದ ಅಲ್ಲಿಯೇ ನಿಂತಿರುವಾಗ ಕಂಟೇನರ್ ಆತನಿಗೆ ತಿಕ್ಕುತ್ತಾ, ಹೊಸೆಯುತ್ತ ನಂತರ ಕೆಳಗೆ ಬೀಳಿಸಿ ಹಾಗೆಯೇ ಮುಂದೆ ಸಾಗುತ್ತದೆ. ಇಲ್ಲಿ ಬೈಕ್ ಸವಾರನ ಅದೃಷ್ಟ ತುಂಬಾ ಚೆನ್ನಾಗಿತ್ತು. ಏಕೆಂದರೆ ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರೂ ಬೈಕ್ ಸವಾರ ಕಂಟೇನರ್ ಕೆಳಗೆ ಸಿಕ್ಕು ಅಲ್ಲಿಯೇ ಚಟ್ನಿಯಾಗುತ್ತಿದ್ದ.

ಎಲ್ಲವೂ ತಿಳಿದುಕೊಳ್ಳುವ ಜ್ಞಾನ ಮತ್ತು ಅರಿವು ಇದ್ದರೂ ಕೆಲವೊಂದು ವ್ಯಕ್ತಿಗಳು ಈ ರೀತಿಯಾಗಿ ಯಾಕಾದರೂ ವರ್ತಿಸುತ್ತಾರೆ? ಎಂಬುದೇ ಗೊತ್ತಾಗುವುದಿಲ್ಲ.

ವಿಡಿಯೋ ನೋಡಿ

ಈ ವಿಡಿಯೋವನ್ನು ಇನ್ಸ್ಟಾಗ್ರಾಂ ನಲ್ಲಿ discovery.engenharia ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಈ ವಿಡಿಯೋಗೆ ಇಲ್ಲಿಯವರೆಗೆ ಲಕ್ಷ ಲಕ್ಷ ಜನರು ವೀಕ್ಷಿಸಿದ್ದಾರೆ ಮತ್ತು ಲೈಕ್ ಸಹ ಮಾಡಿದ್ದಾರೆ. ಜೊತೆಗೆ ತಮ್ಮ ಪ್ರತಿಕ್ರಿಯೆಗಳಲ್ಲಿ ವ್ಯಕ್ತಿಯು ನಡೆದುಕೊಂಡ ರೀತಿಯ ಬಗ್ಗೆ ತುಂಬಾ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.