ವೈರಲ್ ವಿಡಿಯೋ; ಈ ಮುಗ್ಧ ಮುದ್ದು ಮಗು ಬೀಚ್ ನಲ್ಲಿ ಆಡಿದ ಮೋಜಿನ ಚೆಲ್ಲಾಟ ನೋಡಿದ ಮೇಲೆ ಆಗುವಿರಿ ಫುಲ್ ಫ್ರೆಶ್.
ಮಕ್ಕಳು ದೇವರ ಕೈತೋಟದಲ್ಲಿಯ ಹೂಗಳಿದ್ದಂತೆ. ಅಷ್ಟೊಂದು ಪವಿತ್ರ, ಮುಗ್ಧ ಸೌಮ್ಯ ಕೋಮಲಾಗಿರುತ್ತವೆ. ಮಕ್ಕಳ ಆಟ ದೇವರಿಗೂ ಅರ್ಥವಾಗುವುದಿಲ್ಲವಂತೆ. ಅಷ್ಟೊಂದು ವಿಶೇಷವಾದ ಆಟಗಳನ್ನು ಈ ಮಕ್ಕಳು ತಮ್ಮಷ್ಟಕ್ಕೆ ತಾವೇ ಆಡಿಕೊಂಡಿರುತ್ತವೆ. ಸೋಶಿಯಲ್ ಮೀಡಿಯಾದಲ್ಲಿ ಮಕ್ಕಳ ಅನೇಕ ರೀತಿಯ ವಿಡಿಯೋಗಳು ನೋಡಲು ಸಿಗುತ್ತವೆ. ಅವುಗಳಲ್ಲಿ ಕೆಲವು ವೀಡಿಯೊಗಳನ್ನು ನೋಡುಗರ ಮನಸ್ಸನ್ನೇ ಸೋರೆಗೊಳ್ಳುತ್ತವೆ. ಸದ್ಯ ಮುಗ್ಧ ಮಗುವಿನ ಒಂದು ವಿಶೇಷ ವಿಡಿಯೋ ಇಂಟರ್ನೆಟ್ ನಲ್ಲಿ ನೋಡಲು ಸಿಗುತ್ತಿದೆ, ಬನ್ನಿ ನೋಡೋಣ.
ಪ್ರಸ್ತುತ ವಿಡಿಯೋದಲ್ಲಿ ಒಂದೇ ಒಂದು ವರ್ಷದ ಮಗುವೊಂದು ಬೀಚ್ ನಲ್ಲಿ ತುಂಬಾ ಮಜಾ ಮಾಡುತ್ತಿದೆ. ಈ ವಿಡಿಯೋ ನೋಡಿದವರು ಯಾರೇ ಆಗಲಿ ಫುಲ್ ಫ್ರೆಶ್ ಆಗುತ್ತಾರೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಈ ದೃಶ್ಯದಲ್ಲಿ ಮಗು ಬೀಚ್ ನಲ್ಲಿ ಬರುವ ಸೌಮ್ಯ ತೆರೆಗಳ ಜೊತೆಗೆ ಆಡುತ್ತಿದ್ದಾನೆ. ಈ ಸಂದರ್ಭದಲ್ಲಿ ಕಾಲ್ಕೆಳಗಿನ ಮರಳು ಸರಿದಾಗ ಮಗುವಿನ ಭಾವ ನೋಟಿಸ್ ಮಾಡುವಂತಿದೆ. ತದನಂತರ ಮಗು ಹಾಗೆಯೇ ನೀರಿನಲ್ಲಿ ಆಡುವಲ್ಲಿ ತುಂಬಾ ತಲ್ಲಿನವಾಗಿದೆ. ಕ್ಷಣ ಕ್ಷಣ ಮಗುವಿನ ಬದಲಾಗುವ ಭಾವನೆಗಳು ಆ ಮಗು ಎಷ್ಟೊಂದು ಖುಷಿ ಪಡುತ್ತಿದೆ ಎಂಬುದನ್ನು ಇಲ್ಲಿ ನೋಡಬಹುದು. ವಿಡಿಯೋದ ಕೊನೆಯಲ್ಲಿ ಮಗು ಖುಷಿ ಹೆಚ್ಚಾಗಿ ನೀರಿನಲ್ಲಿಯೇ ಬಿದ್ದು ಆನಂದ ಪಡುವ ದೃಶ್ಯವಂತೂ ಮನಸ್ಸಿಗೆ ಮುದನೀಡವ ಅದ್ಭುತ ಕ್ಷಣಗಳಾಗಿವೆ.
ನೋಡಿ ಈ ವಿಡಿಯೋ…
View this post on Instagram
ಪ್ರಸ್ತುತ ಮಂತ್ರ ಮುಗ್ಧ ಮಾಡುವ ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ravivolpato ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದ್ದು ಮಿಲಿಯನ್ ಮಿಲಿಯನ್ ಜನರು ವೀಕ್ಷಿಸಿದ್ದಾರೆ. ಹಾಗೂ ಲಕ್ಷಾವಧಿ ಜನರು ವಿಡಿಯೋ ಲೈಕ್ಸ್ ಮಾಡಿದ್ದಾರೆ. ಈ ಮುದ್ದಾದ ವಿಡಿಯೋ ನೋಡಿದ ನಂತರ ಹೇಳಿ ನಿಮ್ ಮೂಡ್ ಸಹ ಫ್ರೆಶ್ ಆಯಿತೋ ಅಥವಾ ಇಲ್ವಾ?