ವೈರಲ್ ವಿಡಿಯೋ! ಕಾಲೇಜ್ ಅಂಗಳದಲ್ಲಿಯೇ ಇಬ್ಬರು ಕಾಲೇಜ್ ಹುಡುಗಿಯರ ಫ್ರೀಸ್ಟೈಲ್ ಬಾಕ್ಸಿಂಗ್!
ಕಾಲೇಜುಗಳಲ್ಲಿ ಯುವಕ ಯುವಕರಲ್ಲಿ ಜಗಳ, ಹೊಡೆದಾಟ, ದಾದಾಗಿರಿ ನಡೆಯುವುದನ್ನು ಎಷ್ಟೋ ಸಲ ಕೇಳಿದ್ದೇವೆ ಮತ್ತು ನೋಡಿದ್ದೇವೆ. ಆದರೆ ಜುಜುಬಿ ಕಾರಣಕ್ಕಾಗಿ ಕಾಲೇಜೊಂದರಲ್ಲಿ ಹುಡುಗಿಯರು ಫ್ರೀಸ್ಟೈಲ್ ಬಾಕ್ಸಿಂಗ್ ಹೊಡೆದಾಟ ಮಾಡಿದ ವಿಡಿಯೋ ಒಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿದೆ.
ಪ್ರಸ್ತುತ ಘಟನೆಯು ಮಹಾರಾಷ್ಟ್ರದ ನಾಸಿಕ್ ಪಟ್ಟಣದಲ್ಲಿಯ ಹೆಸರಾಂತ ಕಾಲೇಜ್ ಒಂದರಲ್ಲಿ ನಡೆದಿದೆ. ಮಧ್ಯಾಹ್ನದ ಸುಮಾರು ಒಂದು ಗಂಟೆಯ ಹೊತ್ತಿಗೆ ಕಾಲೇಜ್ ಮೈದಾನದಲ್ಲಿ ಇಬ್ಬರು ಹುಡುಗಿಯರ ಮಧ್ಯೆ ಯಾವುದೋ ಒಂದು ಕಾರಣಕ್ಕಾಗಿ ಜಗಳ ಶುರುವಾಗಿದೆ ನಂತರ ಅದು ಹೊಡೆದಾಟದಲ್ಲಿ ಮುಕ್ತಾಯವಾಗಿದೆ.
ವಿಡಿಯೋ ನೋಡಿ.
ಜಗಳವು ನೋಡನೋಡುತ್ತಲೇ ಹೊಡೆದಾಟದಲ್ಲಿ ಮಾರ್ಪಾಡಾಯಿತು. ಇಬ್ಬರೂ ಒಬ್ಬರಿಗೊಬ್ಬರು ಹೊಡೆಯಲು ಮತ್ತು ಓದೆಯಲು ಶುರುಮಾಡಿದರು. ನಂತರ ಇಬ್ಬರೂ ಒಬ್ಬರಿಗೊಬ್ಬರ ಕೂದಲು ಹಿಡಿದು ಜಗ್ಗಾಡಲು ಶುರು ಮಾಡಿದ್ದಾರೆ. ಇದನ್ನು ನೋಡಿದ ಅಲ್ಲಿಯೇ ಇದ್ದ ಇಬ್ಬರ ಗೆಳತಿಯರು ಈ ಜಗಳವನ್ನು ಬಿಡಿಸಲು ಯತ್ನಿಸಿದ್ದಾರೆ. ಯಾವ ಕಾರಣಕ್ಕಾಗಿ ಇಬ್ಬರಲ್ಲಿ ಜಗಳ ಶುರುವಾಯಿತು ಎಂಬುದು ಮಾತ್ರ ತಿಳಿದುಬಂದಿಲ್ಲ. ವಿಶೇಷವೆಂದರೆ ಇದನ್ನು ನೋಡಲು ಹುಡುಗರು ಮಾತ್ರ ಸಾಕಷ್ಟು ಪ್ರಮಾಣದಲ್ಲಿ ಉಪಸ್ಥಿತರಿದ್ದರು. ಆದರೆ ಇವರಲ್ಲಿ ಯಾರು ಜಗಳ ಬಿಡಿಸಲು ಮಾತ್ರ ಮುಂದೆ ಬಂದಿಲ್ಲ. ಅಷ್ಟೇ ಅಲ್ಲ ಹುಡುಗರು ಚಪ್ಪಾಳೆ ತಟ್ಟುತ್ತಾ ಹಾಗೂ ಸಿಳ್ಳೆಹೊಡೆಯುತ್ತಾ ಜಗಳದ ಆನಂದ ತೆಗೆದುಕೊಳ್ಳುತ್ತಿದ್ದರು. ಜೊತೆಗೆ ಕೆಲವರು ಈ ಜಗಳದ ವಿಡಿಯೋ ಸಹ ಮಾಡಿಕೊಂಡಿದ್ದಾರೆ.