ವೈರಲ್ ವಿಡಿಯೋ! ರಶಿಯನ್ ಟ್ಯಾಂಕ್ ಇಂಧನವಿಲ್ಲದೆ ಉಕ್ರೇನಿನ ನಡು ರಸ್ತೆಯಲ್ಲಿ ಹತಾಶವಾಗಿ ನಿಂತಾಗ ಅಲ್ಲಿಗೆ ಬಂದ ಉಕ್ರೇನಿನ ಕಾರು ಚಾಲಕ ರಶಿಯನ್ ಸೈನಿಕರಿಗೆ ಉದ್ದೇಶಿಸಿ, “ನಾನು ನಿಮಗೆ…”
ಸದ್ಯ ಜಗತ್ತಿನ ತುಂಬಾ ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದ ಬಗ್ಗೆಯೇ ಚರ್ಚೆ ನಡೆದಿದೆ. ಸೋಶಿಯಲ್ ಮೀಡಿಯಾದಲ್ಲಿ ಯುದ್ಧಕ್ಕೆ ಸಂಬಂಧಿಸಿದಂತೆ ಅನೇಕ ಸುದ್ದಿಗಳು ಬಂದೇ ಬರುತ್ತಲಿವೆ. ಯುದ್ಧ ಪ್ರಾರಂಭವಾಗಿ 5 ದಿನಗಳಾಗಿವೆ. ಆದರೆ ಬಲಾಢ್ಯ ರಷ್ಯಾಗೆ ಉಕ್ರೇನಿನ ಸೈನ್ಯದ ಜೊತೆಗೆ ಅಲ್ಲಿಯ ಸರ್ವಸಾಮಾನ್ಯ ಮನುಷ್ಯನು ಸಹ ವಿರೋಧಿಸುತ್ತಿದ್ದಾನೆ. ಈ ವಿರೋಧವೂ ಅಲ್ಲಿಯ ಜನರು ಸಾಮರ್ಥ್ಯದೊಂದಿಗೆ ಮತ್ತು ಅಷ್ಟೇ ಯುಕ್ತಿಯಿಂದಲೂ ಜೊತೆಗೆ ತಮಾಷೆಯಿಂದಲೂ ಮಾಡುತ್ತಿದ್ದಾರೆ. ಸದ್ಯ ಇಂಥದ್ದೇ ಒಂದು ತಮಾಷೆಯ ಪ್ರಸಂಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ವಿಸ್ತೃತ ವರದಿಯ ಪ್ರಕಾರ, ಉಕ್ರೇನಿನ ರಾಜಧಾನಿಯಾದ ಕೀವ್ ಪಟ್ಟಣದ ಹತ್ತಿರ ರಷ್ಯನ್ ಸೈನ್ಯದ ಟ್ಯಾಂಕ್ ಇಂಧನವಿಲ್ಲದೆ ನಡು ರಸ್ತೆಯಲ್ಲಿಯೇ ನಿಂತುಬಿಟ್ಟಿತ್ತು. ನಡುರಸ್ತೆಯಲ್ಲಿ ಟ್ಯಾಂಕ್ ಬಂದ್ ಆಗಿ ನಿಂತಿರುವ ಕಾರಣದಿಂದಾಗಿ ರಷ್ಯಾ ಸೈನಿಕರು ಸಹ ರಸ್ತೆಯ ಮಧ್ಯದಲ್ಲಿ ಹತಾಶರಾಗಿ ನಿಂತಿದ್ದರು. ಸರಿಯಾಗಿ ಅದೇ ಸಮಯಕ್ಕೆ ಉಕ್ರೇನಿನ ನಾಗರಿಕನೊಬ್ಬ ತನ್ನ ಕಾರಿನಲ್ಲಿ ಕುಳಿತು ಹೋಗುತ್ತಿದ್ದವನು ಅವರ ಹತ್ತಿರವಾಗುತ್ತಿದ್ದಂತೆ ಅಲ್ಲಿಯೇ ಕಾರು ನಿಲ್ಲಿಸಿದ್ದಾನೆ. ಆತ ಅಲ್ಲಿ ನಿಂತಿರುವ ರಶಿಯಾ ಸೈನಿಕರಿಗೆ ಒಂದು ಆಫರ್ ನೀಡಿದ್ದಾನೆ. ಆ ಆಫರ್ ಯಾವುದೆಂದರೆ, ಆ ಸೈನಿಕರಿಗೆ ಮರಳಿ ರಷ್ಯಾಕ್ಕೆ ಒಯ್ದು ಬಿಡುವದು.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಉಕ್ರೇನಿನ ನಾಗರಿಕನಾದ ಈ ಕಾರು ಚಾಲಕ ರಸ್ತೆಯ ಮಧ್ಯದಲ್ಲಿ ಇಂಧನವಿಲ್ಲದೆ ನಿಂತಿರುವ ಟ್ಯಾಂಕ್ ಹತ್ತಿರ ಬಂದು ನಿಲ್ಲುತ್ತಾನೆ. ಆಮೇಲೆ ರಶಿಯನ್ ಸೈನಿಕರ ಜೊತೆಗೆ ಮಾತನಾಡುತ್ತಾ ಟ್ಯಾಂಕ್ ಕೆಟ್ಟು ನಿಂತಿರುವ ಕಾರಣವನ್ನು ಕೇಳುತ್ತಾನೆ. ಆಗ ರಷ್ಯಾ ಸೈನಿಕರು ಟ್ಯಾಂಕಿನಲ್ಲಿಯ ಇಂಧನ ಮುಗಿದಿದೆ ಎಂದು ಉತ್ತರಿಸುತ್ತಾರೆ. ಅದಕ್ಕೆ ಆ ಕಾರುಚಾಲಕ ನಗುತ್ತಾ, ನಾನು ನಿಮಗೆ ಮರಳಿ ರಶಿಯಾ ದೇಶಕ್ಕೆ ಬಿಟ್ಟು ಬರಲಾ? ಎಂದು ಪ್ರಶ್ನಿಸುತ್ತಾನೆ. ಆತನ ಈ ಪ್ರಶ್ನೆಯನ್ನು ಕೇಳಿ ರಶಿಯನ್ ಸೈನಿಕರು ನಗಲು ಪ್ರಾರಂಭಿಸುತ್ತಾರೆ. ನಂತರ ಕಾರು ಚಾಲಕನು ರಷ್ಯಾ ಸೈನಿಕರಿಗೆ, ‘ನಿಮಗೆ ನಿರ್ದಿಷ್ಟವಾಗಿ ಎಲ್ಲಿಗೆ ಹೋಗಬೇಕು’ ಎಂದು ಮತ್ತೆ ಕೇಳುತ್ತಾನೆ. ಅದಕ್ಕೆ ರಶಿಯನ್ ಸೈನಿಕರಿಗೆ ಸರಿಯಾದ ಉತ್ತರ ನೀಡಲು ಸಾಧ್ಯವಾಗಿಲ್ಲ. ಹಾಗೂ ನಿರ್ದಿಷ್ಟ ಸ್ಥಳದ ಹೆಸರು ಹೇಳಲು ಸಾಧ್ಯವಾಗಿಲ್ಲ. ಆಗ ಕಾರು ಚಾಲಕ ನೀವು ಉಕ್ರೇನಿನ ರಾಜಧಾನಿಯಾದ ಕೀವ್ ಪಟ್ಟಣಕ್ಕೆ ಹೋಗುವ ಹೆದ್ದಾರಿಯ ಮೇಲೆ ಇದ್ದೀರಿ ಎಂದು ಹೇಳುತ್ತಾನೆ. ಆಗ ರಶಿಯನ್ ಸೈನಿಕರು ಕಾರು ಚಾಲಕನಿಗೆ ಯುದ್ಧದ ಸ್ಥಿತಿಯ ಬಗ್ಗೆ ಪ್ರಶ್ನಿಸುತ್ತಾರೆ. ಅದಕ್ಕೆ ಆ ಕಾರು ಚಾಲಕ ಉಕ್ರೇನ್ ಜಯ ಗಳಿಸುತ್ತದೆ ಮತ್ತು ರಶಿಯಾ ಶರಣಾಗುತ್ತದೆ ಎಂದು ಹೇಳುತ್ತಾನೆ.
ಆತನ ಈ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿಯ ನೇಟಿಜನ್ಸ್ ಗಳಿಗೆ ತುಂಬಾ ಸ್ಪೂರ್ತಿ ನೀಡಿದೆ. ಯಾರೇ ಆಗಲಿ ತಮ್ಮ ದೇಶದ ಬಗ್ಗೆ ಪ್ರೀತಿ ಮತ್ತು ಅಭಿಮಾನವನ್ನು ಹೊಂದಿರಬೇಕು ಎಂದು ಹೊಗಳಿದ್ದಾರೆ. ಇದಕ್ಕೂ ಮೊದಲು ಉಕ್ರೇನಿನ ಅಜ್ಜಿಯೊಬ್ಬಳು ರಶಿಯನ್ ಸೈನಿಕನಿಗೆ ಸರ್ಕಲ್ ನಲ್ಲಿಯೇ ಚೆನ್ನಾಗಿ ಬೈದು ಬೆಂಡೆತ್ತಿರುವ ವಿಡಿಯೋ ಒಂದು ವೈರಲ್ ಆಗಿತ್ತು. ಅಜ್ಜಿಯು ರಶಿಯನ್ ಸೈನಿಕನಿಗೆ ಇಲ್ಲಿ ನಿನ್ನ ಕೆಲಸವೇನು? ಯಾಕೆ ಬಂದಿರುವೆ? ಎಂದು ಕೇಳಿದ್ದಳು. ನಂತರ ಅಜ್ಜಿಯು ಸೂರ್ಯಕಾಂತಿಯ ಕೆಲವು ಬೀಜಗಳನ್ನು ರಶಿಯನ್ ಸೈನಿಕನಿಗೆ ನೀಡುತ್ತ, “ಇವುಗಳನ್ನೆಲ್ಲ ನಿನ್ನ ಜೇಬಿನಲ್ಲಿ ಇಡು, ನೀನು ಸತ್ತು ಹೋಗ್ತೀಯಾ ಆಗ ನಮ್ಮ ದೇಶದಲ್ಲಿ ಇದರಿಂದ ಸೂರ್ಯಕಾಂತಿಯ ಗಿಡಗಳು ಹುಟ್ಟುತ್ತವೆ” ಎಂದು ಸೈನಿಕನಿಗೆ ಹೇಳಿದ್ದಳು.
ವಿಡಿಯೋ ನೋಡಿ
A priceless exchange of a brave Ukrainian citizen with Russian army stuck out of fuel. ENGLISH SUBTITLES.
— Ali 🇺🇦🕊 (@aliostad) February 26, 2022
[Thanks to my Ukrainian friend for transcription and translation] pic.twitter.com/Rar3WRXEwD