ವೈರಲ್ ವಿಡಿಯೋ; ವರನ ಮುಖ ನೋಡುತ್ತಲೇ ವಧುವಿನ BP ಹಾಯ್! ಮದುವೆ ಆಮೇಲೆ; ಮೊದಲು ವರನ ಮುಖಕ್ಕೆ ಕಪಾಳಮೋಕ್ಷ!
ದಿನನಿತ್ಯ ಆಗುತ್ತಿರುವ ಮದುವೆಗಳು ಸೋಶಿಯಲ್ ಮೀಡಿಯಾದಲ್ಲಿ ನೇಟಿಜನ್ಸ್ ಗಳಿಗೆ ಏನಾದರೂ ಹೊಸದನ್ನು ತಂದು ಕೊಡುತ್ತಿವೆ. ಇದರಲ್ಲಿ ಕೆಲವು ವಿಡಿಯೋಗಳು ತುಂಬಾ ತಮಾಷೆಯ ಇನ್ನು ಕೆಲವು ಸಾಮಾಜಿಕ ಜವಾಬ್ದಾರಿ ಮತ್ತು ಬಾಂಧವ್ಯದ, ಭಾವೈಕ್ಯದ ಪಾಠಗಳನ್ನು ನೀಡುವ ವಿಡಿಯೋಗಳು ಆಗಿರುತ್ತವೆ.
ಮದುವೆಯಲ್ಲಿ ಮದುಮಗಳು ನಾಚುತ್ತಾ, ಮುಗುಳು ನಗೆ ಬೀರುತ್ತಾ ಕಣ್ಣಂಚಿನಲ್ಲಿ ತನ್ನ ಭಾವಿ ಗಂಡನಿಗೆ ನೋಡುತ್ತಾ ಹಾಗೂ ಕಣ್ಣುಗಳಲ್ಲಿಯೇ ತನ್ನ ಆಗ ಬಯಸುವ ಗಂಡನಿಗೆ ಕೆಲವೊಂದು ಸೂಚನೆಗಳನ್ನು ನೀಡುವ ಹುಡುಗಿ ಕಣ್ಣ ಮುಂದೆ ಬರುತ್ತಾಳೆ. ಆದರೆ ಈ ವಿಡಿಯೋದಲ್ಲಿ ಮೇಲೆ ಹೇಳಿದ ತದ್ವಿರುದ್ಧವಾದ ಹುಡುಗಿಯೊಬ್ಬಳು ಕಾಣಲಿದ್ದಾಳೆ. ಯಾಕೆಂದರೆ ಈಕೆಯೇ ಬೇರೆ ಈಕೆಯ ಸ್ಟೈಲೇ ಬೇರೆಯಾಗಿದೆ. ಯಾಕೆಂದರೆ ಈಕೆ ತುಂಬಿದ ಕಲ್ಯಾಣ ಮಂಟಪದಲ್ಲಿಯೇ ತನ್ನ ಭವಿಷ್ಯದ ಗಂಡನಿಗೆ ಮೊದಲು ಕಪಾಳಮೋಕ್ಷ ಮಾಡುತ್ತಾಳೆ. ವರನ ಮುಖ ನೋಡುತ್ತಲೇ ಈಕೆಯ ತಲೆ ತಿರುಗಿದೆ. ಹಾಗೂ ಕೋಪದಲ್ಲಿ ಔಟ್ ಆಫ್ ಕಂಟ್ರೋಲ್ ಆಗಿ ವರನ ಕಪಾಳಕ್ಕೆ ಏಟು ಕೊಟ್ಟಿದ್ದಾಳೆ. ಇದನ್ನು ನೋಡಿದ ಅಲ್ಲಿ ನೆರೆದವರು ಒಮ್ಮೆಲೆ ತಬ್ಬಿಬ್ಬಾಗಿದ್ದಾರೆ.
ಮದುವೆ ಮಂಟಪದಲ್ಲಿ ವಧು-ವರರಿಬ್ಬರೂ ಕುಳಿತಿದ್ದಾರೆ. ಮದುವೆಯ ವಿಧಿ ವಿಧಾನಗಳು ಪ್ರಾರಂಭವಾಗಿರುತ್ತವೆ. ಅದೇ ಸಂದರ್ಭದಲ್ಲಿ ವಧು ವರನ ಕಡೆಗೆ ನೋಡುತ್ತಾಳೆ. ವರನು ಗುಟ್ಕಾ ತಿನ್ನುತ್ತಿರುವುದು ಕಂಡುಬರುತ್ತದೆ. ಆ ದೃಶ್ಯ ನೋಡಿ ವಧುವಿನ ತಲೆ ಗರಂ ಆಗಿ ಸ್ವಲ್ಪವೂ ಸಮಯ ವ್ಯರ್ಥ ಮಾಡದೆ ವರನ ಕಪಾಳಕ್ಕೆ ಏಟು ಕೊಟ್ಟೆ ಬಿಡುತ್ತಾಳೆ. ವಧು ಅಷ್ಟಕ್ಕೆ ನಿಲ್ಲದೆ ಮೊದಲು ಆತನನ್ನು ಕುಳಿತ ಜಾಗದಿಂದ ಎಬ್ಬಿಸಿ ಬಾಯಿಯಲ್ಲಿಯ ಗುಟ್ಕಾ ಉಗುಳಿ ಬರಲು ಹೇಳುತ್ತಾಳೆ. ಆಕೆಯ ರುದ್ರಾವತಾರವನ್ನು ನೋಡಿ ವರ ಸ್ವಲ್ಪವೂ ತಡ ಮಾಡದೆ ಅಲ್ಲಿಂದ ಗಪ್ ಚುಪ್ ಹೋಗಿ ಗುಟ್ಕಾ ಉಗುಳಿ ಬರುವುದೇ ಲೇಸು ಎಂದು ತಿಳಿದುಕೊಂಡನು.
ಈ ವಿಡಿಯೋವನ್ನು @santoshsaagr ಹೆಸರಿನ ಟ್ವಿಟರ್ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಈ ದೃಶ್ಯವನ್ನು ನೋಡಿದ ಅನೇಕ ಜನರು ತಮ್ಮ ಬೇರೆಬೇರೆ ತಮಾಷೆಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಸೆರೆ ಕುಡಿಯುವವರಿಗೆ ಮತ್ತು ಗುಟ್ಕಾ ತಿನ್ನುವವರಿಗೆ ಇದೇ ರೀತಿ ಹೆಂಡತಿ ಸಿಗಲಿ ಎಂದು ಬೇಡಿಕೊಂಡಿದ್ದಾರೆ. ‘ಭಾರತೀಯ ನಾರಿ ಎಲ್ಲರಿಗಿಂತಲೂ ಭಾರಿ’ ಎಂದು ಕ್ಯಾಪ್ಷನ್ ಬೇರೆ ನೀಡಿದ್ದಾರೆ.
ವಿಡಿಯೋ ನೋಡಿ
गुटखा खाकर शादी के मंडप मे बैठा था, दुल्हन ने थप्पड़ मारकर दूल्हे से गुटखा थूकवाया।अच्छा हुआ की दूल्हे ने शराब नहीं पी पता नहीं कहाँ से निकालता 😁
— Santosh Sagar (@santoshsaagr) December 23, 2021
मेरी प्रभु से अर्ज है 🙏
सभी नशेड़ी ,गँजेड़ी ,घुटकाखोरो को ऐसी पत्नी मिले
भारतीये नारी सब पर भरी @rupin1992 pic.twitter.com/fL7yXl90QZ
ಮದುಮಗ ತನ್ನ ಮದುವೆ ದಿನದಂದೇ ಗುಟ್ಕಾ ತಿನ್ನುತ್ತಿರುವುದು ಹೆಂಡತಿಗೆ ಸರಿಬರಲಿಲ್ಲ. ಅದರಲ್ಲಿಯೂ ಮದುವೆಯ ವಿಧಿ ವಿಧಾನಗಳು ನಡೆದಿರುವಾಗ ಈತನ ಬಾಯಿಯಲ್ಲಿ ಗುಟ್ಕಾ ತಿನ್ನುವದು ನಡೆದೇ ಇತ್ತು. ಇದು ವಧುವಿಗೆ ಸ್ವಲ್ಪವೂ ಸರಿಬರಲಿಲ್ಲ ಮತ್ತು ವರನಿಗೆ ಅಲ್ಲಿಯೇ ಪಾಠ ಕಲಿಸಿದಳು. ಯಾರ ಮುಲಾಜಿಲ್ಲದೆ ಯಾರಿಗೂ ಹೆದರದೆ ವಧು ತನ್ನ ಆಗಬಯಸುವ ಗಂಡನಿಗೆ ಕಲ್ಯಾಣ ಮಂಟಪದಲ್ಲಿಯೇ ಚೆನ್ನಾಗಿ ಪಾಠ ಕಲಿಸಿದಳು. ಅದಕ್ಕೆ ಗಂಡನೂ ಸಹ ಸಿಟ್ಟಾಗದೆ ಮತ್ತು ವಿರೋಧಿಸದೆ ನಮ್ರತೆಯಿಂದ ಆಕೆಯ ಮಾತಿಗೆ ಬೆಲೆಕೊಟ್ಟು ಹೇಳಿದಂತೆ ಕೇಳಿ ಚೆನ್ನಾಗಿ ಸ್ಪಂದಿಸಿದ್ದಾನೆ.