ವೈರಲ್ ವೀಡಿಯೊ; ಆಕಾಶದಿಂದ ಬಿದ್ದಿತು ಮಹಾಕಾಯ ಹೆಬ್ಬಾವು, ಜನರು ಗಾಬರಿಯಿಂದ ದಿಕ್ಕೆಟ್ಟು ಚೆಲ್ಲಾಪಿಲ್ಲಿ…
ಆಕಾಶದಿಂದ ಹಾವುಗಳ ಮಳೆ ಸುರಿದರೆ ಜನರದ್ದು ಯಾವ ಗತಿ ಆದೀತು? ಬರೀ ಕಲ್ಪನೆ ಮಾಡಿದರೆ ಸಾಕು ಮೈಯೆಲ್ಲಾ ನವಿರೇಳುತ್ತದೆ. ಆದರೆ ಸದ್ಯ ಇದೇ ರೀತಿಯ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ. ಕೇಳಿದರೆ ಬಹುಶಃ ನೀವು ವಿಶ್ವಾಸವಿಡಲಿಕ್ಕಿಲ್ಲ. ಅದಕ್ಕಾಗಿ ಒಂದು ಸಲ ಈ ವಿಡಿಯೋವನ್ನು ನೋಡಿ.
ಮನುಷ್ಯ ಮತ್ತು ಪ್ರಾಣಿಗಳ ಸಂಬಂಧ ಮೊದಲಿನಿಂದಲೂ ಬಂದಿದೆ. ಮೊದಲಿನಿಂದಲೂ ಮನುಷ್ಯನು ಪ್ರಾಣಿಗಳ ಜೊತೆಗೆ ಜೀವಿಸುತ್ತಾ ಬಂದಿದ್ದಾನೆ. ಹೀಗಿರುವಾಗ ಕೆಲವೊಂದು ಪ್ರಾಣಿಗಳಿಂದ ಮನುಷ್ಯನು ಸತತವಾಗಿ ಅಂತರ ಕಾಯುತ್ತಾ ಅಥವಾ ದೂರವಿಡುತ್ತಲೇ ಬಂದಿದ್ದಾನೆ. ಕೆಲವೊಂದು ಕಾಡುಮೃಗಗಳು ಹಾಗೂ ವಿಷಕಾರಿಯಾದ ಹಾವುಗಳು ಮನುಷ್ಯನಿಗೆ ತುಂಬಾ ಅಪಾಯಕರಯಾಗಿವೆ. ಅದರಲ್ಲೂ ವಿಶೇಷವಾಗಿ ಹಾವಿನ ಬಗ್ಗೆ ವಿಚಾರ ಮಾಡಿದಾಗ ಭಯವು ಆವರಿಸಿಬಿಡುತ್ತದೆ. ಇದೇ ಕಾರಣದಿಂದ ಮನುಷ್ಯನು ಹಾವಿನಿಂದ ದೂರವಿರಲು ಇಷ್ಟಪಡುತ್ತಾನೆ.
ಇಂಥ ಭಯಾನಕವಾದ ಹಾವೊಂದು ಜನರಿಂದ ಕಿಕ್ಕಿರಿದು ತುಂಬಿದ ಸ್ಥಳದಲ್ಲಿ ಮೇಲಿನಿಂದ ಬಿದ್ದಾಗ ಏನಾಗಿರಬೇಡ? ಈ ವಿಡಿಯೋ ನೋಡಿದಾಗ ಅಲ್ಲಿಯ ಪರಿಸ್ಥಿತಿ ಹೇಗಾಗಿರಬೇಕು ಎಂಬುದರ ಅರಿವು ಆಗುತ್ತದೆ.
ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ತುಂಬಾ ದೊಡ್ಡ ಪ್ರಮಾಣದಲ್ಲಿ ಶೇರ್ ಮಾಡಲಾಗುತ್ತಿದೆ. ಇದರಲ್ಲಿ ಜನರಿಂದ ಕಿಕ್ಕಿರಿದು ತುಂಬಿದ ಸ್ಥಳದಲ್ಲಿ ತಲೆಯ ಮೇಲೆ ಹಾವೊಂದು ಚಲನವಲನ ಮಾಡುತ್ತಿರುವುದು ಕಂಡುಬರುತ್ತಿದೆ. ಮೊದಮೊದಲು ಈ ವಿಡಿಯೋ ನೋಡಿದಾಗ ಹಾವೊಂದು ಆಕಾಶದಲ್ಲಿ ತೇಲಾಡುತ್ತಿದೆ ಎಂಬಂತೆ ಭಾಸವಾಗುತ್ತದೆ. ಆದರೆ ಪ್ರತ್ಯಕ್ಷದಲ್ಲಿ ಹಾವೊಂದು ತಂತಿಯ ಮೇಲೆ ನೇತಾಡುತ್ತಿರುವುದು ಗೊತ್ತಾಗುತ್ತದೆ. ಇದನ್ನು ನೋಡಿದ ಕೆಳಗಿನ ಜನರು ಭ#ಯಭೀತರಾಗಿ ಒಂದೇಸವನೆ ಕಿರುಚುತ್ತಾ ದಾರಿ ಸಿಕ್ಕ ಕಡೆಗೆ ಓಡಾಡುತ್ತಿದ್ದಾರೆ. ಇಂಥ ಮಹಾಕಾಯ ಹೆಬ್ಬಾವನ್ನು ನೋಡಿದ ನಂತರ ಎಲ್ಲರೂ ಇನ್ನೇನು ನಾವು ಸತ್ತೆ ಹೋಗುತ್ತೇವೆ ಎಂಬಂತೆ ಭ#ಯದಿಂದ ತತ್ತರಿಸಿದ್ದಾರೆ.
ವಿಡಿಯೋ ನೋಡಿ
A massive snake falling from the sky is my worst nightmare 🐍😨#viralhog #snake #spooktober #nope #nightmarefuel pic.twitter.com/VS9P6q9Spy
— ViralHog (@ViralHog) October 15, 2021
ಸ್ವಲ್ಪ ಸಮಯ ಹಾವು ಅಲ್ಲಿಯೇ ಸುತ್ತಿಕೊಂಡು ನೇತಾಡಿ ನಂತರ ಒಮ್ಮೆಲೆ ಭೂಮಿಯ ಮೇಲೆ ದಪ್ಪನೆ ಬಿದ್ದಿದೆ. ಅದು ಬಿದ್ದ ನಂತರವೂ ಜನರು ಮತ್ತಷ್ಟು ಭಯದಿಂದ ಅತ್ತಿಂದಿತ್ತ ಇತ್ತಿಂದತ್ತ ಓಡಾಡಲು ಶುರು ಮಾಡಿದ್ದಾರೆ. ಕೆಲವರು ಈ ಘಟನೆಯ ವಿಡಿಯೋವನ್ನು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಅದರ ಜೊತೆಗೆ ಆಕಾಶದಿಂದ ಹಾವು ಬಿತ್ತು ಎಂಬ ಕ್ಯಾಪ್ಷನ್ ನೊಂದಿಗೆ ಶೇರ್ ಮಾಡಿದ್ದಾರೆ. ಹೀಗಾಗಿ ಈ ವಿಡಿಯೋ ಸ್ವಲ್ಪ ಸಮಯದಲ್ಲಿ ತುಂಬಾ ವೈರಲ್ ಆಗಿದೆ. ಪ್ರತ್ಯಕ್ಷದಲ್ಲಿ ಹಾವು ಆಕಾಶದಿಂದ ಬೀಳದೆ ಮೇಲಿದ್ದ ತಂತಿಗೆ ನೇತಾಡಿ ನಂತರ ಕೆಳಗೆ ಬಿದ್ದಿದೆ. ಸ್ವಲ್ಪ ಸಮಯದ ನಂತರ ರೆಸ್ಕ್ಯೂ ಆಪರೇಷನ್ ಟೀಮ್ ನವರು ಬಂದು ಹಾವನ್ನು ಹಿಡಿದುಕೊಂಡು ಹೋಗಿದ್ದಾರೆ. ಪ್ರಸ್ತುತ ವಿಡಿಯೋ ಎಲ್ಲಿಯದು ಎಂಬುದು ಮಾತ್ರ ಗೊತ್ತಾಗಿಲ್ಲ. ಪ್ರಸ್ತುತ ವಿಡಿಯೋವನ್ನು ‘ViralHog’ ಹೆಸರಿನ ಟ್ವಿಟರ್ ಅಕೌಂಟ್ ನಿಂದ ಶೇರ್ ಮಾಡಲಾಗಿದೆ.