ವೈರಲ್ ವೀಡಿಯೊ; ಟ್ರಕ್ಕಿನಿಂದ ರಸ್ತೆಯ ಮೇಲೆ ನೋಟುಗಳ ಸುರಿಮಳೆ….. ಜನರು ಅಕ್ಷರಶಃ ಚೀಲ ತುಂಬಿ ಹಣ ಮಾಡಿದರು ಲೂಟಿ;

ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿಯ ತುಂಬಾ ಜನನಿಬಿಡ ಮುಖ್ಯ ರಸ್ತೆಯೊಂದು ಸದ್ಯ ಸಾಕಷ್ಟು ಚರ್ಚೆಯಲ್ಲಿದೆ. ಕಾರಣ ಈ ರಸ್ತೆಯ ಮೇಲೆ ಆಕಸ್ಮಿಕ ನೋಟಿನ ಮಳೆ ಸುರಿದಿದೆ. ಶಸ್ತ್ರ ಸುಸಜ್ಜಿತ ಟ್ರಕ್ ನಿಂದ ಒಮ್ಮೆಲೆ ನೋಟುಗಳು ರಸ್ತೆಯ ಮೇಲೆ ಬಿದ್ದು ಚೆಲ್ಲಾಪಿಲ್ಲಿಯಾಗಿವೆ.

ತುಂಬಾ ವೈರಲ್ ಆದ ಈ ವಿಡಿಯೋದಲ್ಲಿ ಯಾವ ರೀತಿ ರಸ್ತೆಯ ಮೇಲೆ ಚೆಲ್ಲಾಪಿಲ್ಲಿಯಾದ ನೋಟುಗಳನ್ನು ಜನರು ಆಯ್ದುಕೊಳ್ಳುತ್ತಿದ್ದಾರೆ ಎಂಬುದು ಕಂಡುಬರುತ್ತದೆ. ಕ್ಯಾಲಿಫೋರ್ನಿಯ ಹೈವೇಯ ಉಸ್ತುವಾರಿಯು ಸಿಎನ್ಎನ್ ಗೆ ನೀಡಿದ ಸಂದರ್ಶನದಲ್ಲಿ ಹೀಗೆ ಹೇಳಿದ್ದಾನೆ, ಈ ಹೈವೇ ಮೇಲೆ ಎಲ್ಲಿ ನೋಡಿದಲ್ಲಿಯೂ ನೋಟುಗಳೇ ಬಿದ್ದಿದ್ದವು. ತಮ್ಮ ವಾಹನಗಳನ್ನು ನಿಲ್ಲಿಸಿ ರಸ್ತೆಯುದ್ದಕ್ಕೂ ಜನರು ತಮ್ಮ ಕೈ ಚೀಲಗಳಲ್ಲಿ ನೋಟುಗಳನ್ನು ತುಂಬಲು ಅಣಿಯಾಗಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಇಬ್ಬರನ್ನು ಅರೆಸ್ಟ್ ಸಹ ಮಾಡಲಾಗಿದೆ ಎಂದು ಹೇಳಲಾಗಿದೆ.

ಸಿ ಎಚ್ ಪಿ ನೀಡಿದ ರಿಪೋರ್ಟ್ ಪ್ರಕಾರ, ನಾವು ಈಗ FBI ಜೊತೆಗೂಡಿ ಸಂಯುಕ್ತವಾಗಿ ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಲಾಗಿದೆ.

ವಿಡಿಯೋ ನೋಡಿ

ಯಾರೇ ಆಗಲಿ ಇಲ್ಲಿಂದ ಹಣವನ್ನು ತೆಗೆದುಕೊಂಡವರೆಲ್ಲರೂ ಆದಷ್ಟು ಬೇಗ ಸಿ ಎಚ್ ಪಿ ಆಫೀಸ್ನಲ್ಲಿ ಹಣವನ್ನು ವಾಪಸ್ ಕೊಡಿ ಎಂದು ಸೂಚಿಸಲಾಗಿದೆ. ಏಕೆಂದರೆ ನಮ್ಮ ಕಡೆ ಕಾನೂನಿನ ಕ್ರಮ ಕೈಗೊಳ್ಳಲು ಅನೇಕ ಸಾಕ್ಷಾಧಾರಗಳು ಇವೆ ಎಂದಿದ್ದಾರೆ. ಅವುಗಳಲ್ಲಿಯ ಕೆಲವು ವಿಡಿಯೋಗಳಲ್ಲಿ ಸ್ಕ್ರೀನ್ ಶಾಟ್ ಶುಕ್ರವಾರ ತಡರಾತ್ರಿ ಸಿ ಎಚ್ ಪಿ ಜಾರಿ ಮಾಡಿದೆ. ಅದು FBI ಜೊತೆಗೂಡಿ ಪ್ರಸ್ತುತ ಘಟನೆಯ ತನಿಖೆ ನಡೆಸುತ್ತಿದೆ. ಏಜೆನ್ಸಿ ನೀಡಿದ ರಿಪೋರ್ಟ್ ಪ್ರಕಾರ ಫೋಟೋನಲ್ಲಿ ವಾಹನ ಚಾಲಕನ ಗುರುತು ನಿಶ್ಚಿತ ಮಾಡುವ ಸಲುವಾಗಿ ಪ್ರಯತ್ನಿಸಲಾಗಿತ್ತು. ಮತ್ತು ಎಲ್ಲರಿಗೂ ಕಾನೂನಿಂದ ಬಚಾವಾಗಲು 48 ಗಂಟೆಗಳ ಸಮಯಅವಕಾಶ ನೀಡಲಾಗಿದೆ