ವೈರಲ್ ಸಾಡಿ; ಆದರೆ ಇದನ್ನು ತೊಟ್ಟುಕೊಂಡು ಹೋಗುವದೆಲ್ಲಿ? ಈ ಅದ್ಭುತ ಸೀರೆಯ ವಿಡಿಯೋ ನೋಡಿದ ನೆಟ್ಟಿಗರ ಪ್ರಶ್ನೆಗೆ ನೀವಾದರೂ ಉತ್ತರಿಸಿ…
ಒಂದು ಮೂಲ ವಸ್ತುವಿನಿಂದ ಇನ್ನೊಂದು ಬೇರೆ ವಸ್ತುವನ್ನು ತಯಾರಿಸುವದರಲ್ಲಿ ಭಾರತೀಯರ ಕೈ ಹಿಡಿಯಲು ಯಾರಿಗೂ ಸಾಧ್ಯವಿಲ್ಲ. ಇದಕ್ಕೆ ಉದಾಹರಣೆ ಎಂಬಂತೆ ಚಿಪ್ಸ್ ಗಳನ್ನು ತಿಂದ ನಂತರ ಉಳಿದ ರ್ಯಾಪರ್ಸ್ (ಪ್ಲಾಸ್ಟಿಕ್ ಕವರ್) ಏನು ಮಾಡುವಿರಿ ಎಂದು ಕೇಳಿದರೆ ಸಹಜವಾಗಿಯೇ ಕಸದ ಡಬ್ಬಿಗೆ ಹಾಕುತ್ತೇವೆ ಎಂದು ಉತ್ತರ ಸಿಗುತ್ತದೆ. ಆದರಿಲ್ಲಿ ಮಹಿಳೆಯೊಬ್ಬಳು ತಯಾರಿಸಿದ ಸೀರೆಯನ್ನು ನೋಡಿ ಸೋಶಿಯಲ್ ಮೀಡಿಯಾದಲ್ಲಿಯ ನೇಟಿಜನ್ಸ್ ಗಳು ತಲೆಗೆ ಕೈ ಹಚ್ಚಿದ್ದಾರೆ.
ವೈರಲ್ ಆದ ಈ ವಿಡಿಯೋದಲ್ಲಿ ಮಹಿಳೆಯು ಚಿಪ್ಸ್ ಪ್ಯಾಕೆಟ್ ಅಥವಾ ರ್ಯಾಪರ್ ನಿಂದ ತಯಾರಿಸಿದ ಸೀರೆಯನ್ನು ತೊಟ್ಟಿದ್ದಾಳೆ. ಹೌದು ಇದು ನೂರಕ್ಕೆ 100 ರಷ್ಟು ಸತ್ಯ. ಹಾಗೆಯೇ ಕೈಯಲ್ಲಿ ಒಂದು ಚಿಪ್ಸ್ ಪ್ಯಾಕೆಟ್ ಸಹ ಹಿಡಿದಿದ್ದಾಳೆ. ವಿಡಿಯೋ ನೋಡಿದ ನೆಟ್ಟಿಗರು ಆಶ್ಚರ್ಯವಾಗಿದ್ದಾರೆ. ಮತ್ತು ತಮ್ಮ ವಿವಿಧ ಪ್ರತಿಕ್ರಿಯೆಗಳನ್ನು ನೊಂದಾಯಿಸುತ್ತಿದ್ದಾರೆ.
ನೀವು ನೋಡಿ ಈ ವಿಡಿಯೋ…
ಈ ಅಪರೂಪದ ಸೀರೆಯ ವಿಚಿತ್ರ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ BeBadass.in ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಜನವರಿ 21 ರಂದು ಅಪ್ಲೋಡ್ ಮಾಡಿದ ಈ ವೀಡಿಯೋವನ್ನು ಇಲ್ಲಿಯವರೆಗೆ ಸಾಕಷ್ಟು ಜನರು ನೋಡಿದ್ದಾರೆ ಹಾಗೂ ಬೇರೆಬೇರೆ ಕಾಮೆಂಟ್ಗಳನ್ನು ಮಾಡಿದ್ದಾರೆ. ಹೆಚ್ಚುವರಿ ಜನರು ಸಿರೆಯೇನೋ ತಯಾರಾಯ್ತು, ಆದರೆ ಇದನ್ನು ತೊಟ್ಟುಕೊಂಡು ಹೋಗುವದೆಲ್ಲಿ? ಎಂಬ ಪ್ರಶ್ನೆ ಕೇಳುತ್ತಿದ್ದಾರೆ.