ವ್ಯಕ್ತಿಯ ಕಣ್ಣಿನಲ್ಲಿ ಅಪ್ಪಿ ತಪ್ಪಿ ‘ಫೆವಿಕ್ವಿಕ್’ ಬಿದ್ದರೆ ಏನು ಮಾಡಬೇಕು?
ನಾವು ಅನೇಕ ಸಂದರ್ಭಗಳಲ್ಲಿ ಏನಾದರೂ ಅಂಟಿಸುವ ಸಲುವಾಗಿ ಫೆವಿಕ್ವಿಕ್ ದ ಉಪಯೋಗ ಸರಾಗವಾಗಿ ಮಾಡುತ್ತೇವೆ. ಈ ಫೆವಿಕ್ವಿಕ್ ನಿಂದ ಯಾವುದೇ ವಸ್ತು ಚೆನ್ನಾಗಿ ಅಂಟಿಕೊಳ್ಳುತ್ತದೆ.
ಹೀಗೆ ಮಾಡುವಾಗ ಅದನ್ನು ತೆಗೆಯುವಾಗ ಸೀಲ್ ಒಡೆಯುವಾಗ ಅಥವಾ ನಮ್ಮ ಅಜಾಗರೂಕತೆಯಿಂದ ಫೆವಿಕ್ವಿಕ್ ತುಂಬಾ ನಾಜೂಕಾದ ಅವಯವವಾದ ನಮ್ಮ ಕಣ್ಣುಗಳಲ್ಲಿ ಬೀಳುವ ಇಲ್ಲ ಸಿಡಿಯುವ ಭಯವಿರುತ್ತದೆ. ಒಂದು ವೇಳೆ ಫೆವಿಕ್ವಿಕ್ ಕಣ್ಣಲ್ಲಿ ಬಿದ್ದರೆ ಯಾವ ಉಪಾಯವನ್ನು ಕೈಗೊಳ್ಳಬೇಕು, ಎನ್ನುವದನ್ನು ತಿಳಿಯುವಾ.
ಫೆವಿಕ್ವಿಕ್ ನ್ನು ಮೊದಲು ಕಾಳಜಿಪೂರ್ವಕವಾಗಿ ಹ್ಯಾಂಡಲ್ ಮಾಡಿ, ಮತ್ತು ಚಿಕ್ಕ ಮಕ್ಕಳಿಂದ ಆದಷ್ಟು ದೂರವಿಡಬೇಕು. ಫೆವಿಕ್ವಿಕ್ ಉಪಯೋಗಿಸುವ ವ್ಯಕ್ತಿ ತನ್ನ ಕೈಗಳನ್ನು ಒದ್ದೆಯಾಗಿಟ್ಟುಕೊಳ್ಳಬೇಕು. ಅದರ ಸೀಲ್ ಒಡೆಯುವಾಗ ಬಾಯಿಯ ಉಪಯೋಗ ಮಾಡದೆ ಇರುವದು ಬಹಳ ಒಳ್ಳೆಯದು.

ಇಷ್ಟೆಲ್ಲ ಮಾಡುವಾಗ ಯಾವುದೋ ತಪ್ಪಿನಿಂದ ಅಥವಾ ಇನ್ಯಾವದೋ ಅಜಾಗರೂಕತೆಯಿಂದ ಒಂದು ವೇಳೆ ನಮ್ಮ ಕಣ್ಣಲ್ಲಿ ಫೆವಿಕ್ವಿಕ್ ಬಿದ್ದರೆ ಮೊದಲು ಹೆದರಬೇಡಿ. ಆ ಸಮಯದಲ್ಲಿ ಮೊದಲು ಮಾಡುವ ಉಪಾಯವೆಂದರೆ, ಬಾಧಿತ ಸ್ಥಳದಲ್ಲಿ ತಣ್ಣೀರನ್ನು ಸಿಂಪಡಿಸಿ. ಆ ನಂತರ ಶೀಘ್ರದಲ್ಲಿ ಡಾಕ್ಟರ್ ಕಡೆಗೆ ಹೋಗಿ. ರೆಪ್ಪೆಗಳು ಒಂದನ್ನೊಂದು ಕೂಡದಂತೆ ಎಚ್ಚರವಹಿಸಿ. ಕಣ್ಣಿನ ಮೇಲಿನ ಮತ್ತು ಕೆಳಗಿನ ರೆಪ್ಪೆಗಳನ್ನು ಹಿಡಿದಿಡಿ. ಒಟ್ಟಿನಲ್ಲಿ ಕಣ್ಣುಗಳು ಅಂಟದಂತೆ ಜಾಗೃತೆ ವಹಿಸಿ, ಹಾಗೂ ಕಣ್ಣುಗಳನ್ನು ಮೇಲಿಂದ ಮೇಲೆ ಉಜ್ಜಬೇಡಿ.
ಉದಾಹರಣೆಗಾಗಿ, ಕಣ್ಣಿನಲ್ಲಿ ದೊಡ್ಡ ಗಾಯವಾಗಿ ಕಣ್ಣುಗಳು ನೋಡುವ ಶಕ್ತಿಯನ್ನೇ ಕಳೆದುಕೊಳ್ಳುವ ಅಪಾಯ ಎದುರಾಗಬಹುದು.