ಶಕ್ತಿಗಿಂತ ಯುಕ್ತಿ ಮೇಲು; ಕ್ಷಣಾರ್ಧದಲ್ಲಿ ಸಿಂಹಕ್ಕೆ ಮಂಗ ಮಾಡಿದ ಜಿಂಕೆ! ಜಿಂಕೆಯ ಈ ಚಾಣಕ್ಷತನಕ್ಕೆ ನೆಟ್ಟಿಗರು ಫುಲ್ ಫಿದಾ!

ಶಕ್ತಿಗಿಂತ ಯುಕ್ತಿ ಮೇಲು ಎಂದು ಹಿರಿಯರು ಹೇಳಿದ ಮಾತು ಎಂದಿಗೂ ಸುಳ್ಳಲ್ಲ. ಈ ಮಾತಿನ ಪ್ರತ್ಯಕ್ಷ ಅನುಭವ ಪ್ರಸ್ತುತ ವಿಡಿಯೋ ನೋಡಿದಾಗ ತಿಳಿದು ಬರುತ್ತದೆ. ನೀರಿನ ಕೊಳದ ಹತ್ತಿರ ಜಿಂಕೆಯೊಂದು ನೀರು ಕುಡಿಯಲು ಬಂದಿರುತ್ತದೆ. ಸರಿಯಾಗಿ ಅದೇ ಸಮಯಕ್ಕೆ ಹೆಣ್ಣು ಸಿಂಹವೊಂದು ದಡದಲ್ಲಿ ಹೊಂಚು ಹಾಕಿ ಕುಳಿತಿರುತ್ತದೆ. ಒಂದು ಕ್ಷಣ ಜಿಂಕೆಗೆ ತನ್ನ ಮೇಲೆ ಯಾರಾದರೂ ಕಣ್ಣಿಟ್ಟಿದ್ದಾರೆ ಎಂಬ ವಿಚಾರ ಗಮನಕ್ಕೆ ಬರುತ್ತದೆ. ನಂತರ ಮತ್ತೆ ಅದು ನೀರು ಕುಡಿಯಲು ಮುಂದಾಗುತ್ತದೆ. ಅಷ್ಟರಲ್ಲಿ ಹೊಂಚು ಹಾಕಿ ಕುಳಿತ ಸಿಂಹ ಜಿಂಕೆಯ ಮೇಲೆ ಹಠಾತ್ ದಾಳಿ ಮಾಡುತ್ತದೆ. ಈ ಮಿಂಚಿನ ವೇಗದ ದಾಳಿಯನ್ನು ಜಿಂಕೆಯು ತುಂಬಾ ಚಾಣಾಕ್ಷತನದಿಂದ ಎದುರಿಸಿ ಬಂದ ಸಂಕಟದಿಂದ ಆರಾಮಾಗಿ ಪಾರಾಗಿ ಬಿಡುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋದ ಮತ್ತು ಜಿಂಕೆಯ ಚಾಣಾಕ್ಷತನದ ಬಗ್ಗೆಯೇ ಚರ್ಚೆಯಾಗುತ್ತಿದೆ.

ವಿಡಿಯೋ ನೋಡಿ

ಜಿಂಕೆಯ ಕುಶಾಗ್ರ ಬುದ್ಧಿಮತ್ತೆಯ ಮುಂದೆ ಕಾಡಿನ ರಾಣಿಯ ಮಿಂಚಿನ ವೇಗ ಮತ್ತು ಪ್ಲಾನ್ ಮಣ್ಣುಗೂಡಿತು. ಪ್ರಸ್ತುತ ವಿಡಿಯೋವನ್ನು ನೆಟ್ಟಿಗರು ಶೋಯೆಬ್ ಅಕ್ತರ್ ಅವರ ವೇಗದ ಬೌಲಿಂಗ್ ಮತ್ತು ಅದಕ್ಕೆ ಅಷ್ಟೇ ಸರಿಯಾಗಿ ಡಿಫೆನ್ಸ್ ಗೆ ಪ್ರಸಿದ್ಧರಾದ ರಾಹುಲ್ ದ್ರಾವಿಡ್ ಅವರ ಬ್ಯಾಟಿಂಗ್ ಗೆ ಹೋಲಿಸಿದ್ದಾರೆ.

ಈ ವೀಡಿಯೋವನ್ನು ರಂಬಲ್ ವೈರಲ್ ಹೆಸರಿನ ಯೂಟ್ಯೂಬ್ ಚಾನೆಲ್ ಮುಖಾಂತರ ಶೇರ್ ಮಾಡಲಾಗಿದೆ. ಈ ವಿಡಿಯೋದಿಂದ ಶಕ್ತಿಗಿಂತ ಯುಕ್ತಿ ಯಾವತ್ತೂ ಮೇಲು ಎಂಬುದರ ಅರಿವು ನೋಡುಗರಿಗೆ ಆಗುತ್ತದೆ.