ಶರವೇಗದಲ್ಲಿ ನುಗ್ಗಿ ಬಂದ ರಾಜಧಾನಿ ಎಕ್ಸಪ್ರೆಸ್ ಹೊಡೆತದಿಂದ ಅದೃಷ್ಟವಶಾತ್ ಬದುಕುಳಿದ ಯುವಕನ ರೋಚಕ ವೀಡಿಯೊ ವೈರಲ್! ಬೈಕ್ ಧೂಳಿಪಟ!
ಸೋಶಿಯಲ್ ಮೀಡಿಯಾದಲ್ಲಿ ಸದ್ಯ ರಾಜಧಾನಿ ಎಕ್ಸಪ್ರೆಸ್ ಮತ್ತು ಬೈಕ್ ಸವಾರನ ಮಧ್ಯೆ ಡಿಕ್ಕಿಯಾದ ವಿಡಿಯೋ ಒಂದು ಸಖತ್ ವೈರಲ್ ಆಗುತ್ತಿದೆ. ಪ್ರಸ್ತುತ ಘಟನೆ ಮುಂಬಯಿಯಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ. ಈ ಭಯಂಕರ ದುರ್ಘಟನೆಯಲ್ಲಿ ಬೈಕ್ ಸವಾರ ಬದುಕುಳಿದಿದ್ದು ಮಾತ್ರ ನೆಟಿಜನ್ಸ್ ಗಳಿಗೆ ಆಶ್ಚರ್ಯ ತಂದಿದೆ. ಆತನ ಬೈಕ್ ಮಾತ್ರ ಇಲ್ಲಿ ಧೂಳಿಪಟವಾಗಿದೆ.
ವಿಡಿಯೋದಲ್ಲಿ ಕಾಣುವ ಹಾಗೆ ಜನರು ಅಲ್ಲ, ನಾನಿಲ್ಲಿ ಮೂರ್ಖ ಜನರು ಎನ್ನುತ್ತೇನೆ. ಇವರು ಕೆಲವೇ ನಿಮಿಷಗಳನ್ನು ಉಳಿಸಿಕೊಳ್ಳಲು ತಮ್ಮ ಜೀವವನ್ನೇ ಅಪಾಯದಲ್ಲಿ ಸಿಲುಕಿಸುವದರ ಜೊತೆಗೆ ತಮ್ಮ ಕುಟುಂಬವನ್ನೇ ಇಕ್ಕಟ್ಟಿನಲ್ಲಿ ಸಿಲುಕಿಸಿ ಬಿಡುತ್ತಾರೆ. ಪ್ರಸ್ತುತ ಘಟನೆ ಇದೇ ತಿಂಗಳಿನ 12 ನೇ ದಿನಾಂಕದಂದು ನಡೆದಿದೆ. ವ್ಯಕ್ತಿಯೊಬ್ಬನು ಬೈಕ್ ಮೇಲೆ ರೇಲ್ವೆ ಲೈನ್ ಕ್ರಾಸ್ ಮಾಡುವಾಗ ಬದಿಯಿಂದ ಸೂಪರ್ ಫಾಸ್ಟ್ ರಾಜಧಾನಿ ಎಕ್ಸಪ್ರೆಸ್ ಬರುತ್ತಿದೆ ಎನ್ನುವ ಸಹಜ ಜ್ಞಾನವು ಆತನಿಗಿಲ್ಲ. ಹಾಗೆಯೇ ಅದಕ್ಕಿಂತ ಮುಂಚೆ ತಾನೇ ದಾಟಬೇಕು ಎಂದು ಪ್ರಯತ್ನಿಸಿದ್ದಾನೆ. ಆದರೆ ರೈಲು ನೀಡಿದ ಈ ಪಾಠವನ್ನು ಆತ ಸಾಯುವವರೆಗೂ ಮರೆಯುವುದಿಲ್ಲ. ಯುವಕ ಕೊನೆಯ ಕ್ಷಣದಲ್ಲಿ ಇನ್ನೇನು ಬೈಕ್ ಬಿಟ್ಟಿದ್ದಾನೆ ಎನ್ನುವಷ್ಟರಲ್ಲಿ ಟ್ರೈನ್ ವಾಯುವೇಗದಲ್ಲಿ ಬೈಕಿಗೆ ಡಿಕ್ಕಿ ಹೊಡೆದಿದೆ. ಯುವಕ ಅದೃಷ್ಟವಶಾತ್ ಬದುಕಿ ಉಳಿದಿದ್ದಾನೆ. ಬೈಕ್ ಮಾತ್ರ ಇಲ್ಲಿ ಸಂಪೂರ್ಣ ಪುಡಿ ಪುಡಿಯಾಗಿದೆ. ವಿಡಿಯೋ ನೋಡಿದ ನೇಟಿಜನ್ಸ್ ಗಳು ಬೈಕ್ ಚಾಲಕನಿಗೆ ಚೆನ್ನಾಗಿ ಪಾಠ ತೆಗೆದುಕೊಳ್ಳುತ್ತಿದ್ದಾರೆ.
ವಿಡಿಯೋ ನೋಡಿ
Smithereens 2022… bike and train🙂🙂🙂 https://t.co/alAgCtMBz5 pic.twitter.com/jBwFDeGGYA
— Rajendra B. Aklekar (@rajtoday) February 14, 2022
ಈ ವೀಡಿಯೋವನ್ನು ಟ್ವಿಟರ್ ನಲ್ಲಿ @rajtoday ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಈ ವೀಡಿಯೋವನ್ನು ಇಲ್ಲಿಯವರೆಗೆ ಸುಮಾರು 5 ಲಕ್ಷ ಜನರು ವೀಕ್ಷಿಸಿದ್ದಾರೆ. ಯೂಸರ್ ನೊಬ್ಬ ತನ್ನ ಕಾಮೆಂಟ್ ನಲ್ಲಿ ಬೈಕ್ ಸವಾರನಿಗೆ ಉದ್ದೇಶಿಸಿ ‘440 ವೊಲ್ಟ್ ನ ಕರೆಂಟ್ ಹೊಡೆದಂತೆ ಆಗಿರಬೇಕು’ ಎಂದಿದ್ದಾನೆ.