ಶುರುವಾಯಿತು ಧೋನಿ ತೋಟದಲ್ಲಿಂದ ಟೊಮ್ಯಾಟೋ ಮತ್ತು ಹಾಲಿನ ಮಾರಾಟ; ಬೆಲೆ ಹೇಗಿದೆ ನೋಡಿ!

ಭಾರತದ ಪರವಾಗಿ 16 ವರ್ಷಗಳ ವರೆಗೆ ಸುದೀರ್ಘ ಕ್ರಿಕೆಟ್ ಆಡಿದ ನಂತರ ಕಳೆದ ಆಗಸ್ಟ್ 15 ರಂದು ಕ್ರಿಕೆಟ್ ನಿಂದ ಸನ್ಯಾಸತ್ವವನ್ನು ಸ್ವೀಕರಿಸಿದ ದೋನಿಯವರು ಸದ್ಯ ಹೊಸ ಇನಿಂಗ್ಸ್ ನ್ನು ಪ್ರಾರಂಭಿಸಿದ್ದಾರೆ.

ತಮ್ಮ ತೋಟದಲ್ಲಿ ಈಗ ದೋನಿಯವರು ಸಾವಯವ ಕೃಷಿ ಪದ್ಧತಿಯನ್ನು ಅನುಸರಿಸಿ ವಿವಿಧ ಹಣ್ಣಿನ ಗಿಡಗಳನ್ನು ನೆಟ್ಟಿದ್ದಾರೆ. ಈ ಪ್ರಯೋಗವು ಸಫಲವಾಗಿದ್ದರಿಂದ ಈಗ ತಮ್ಮ ಫಾರ್ಮ್ ಹೌಸ್ ನಲ್ಲಿ ಬೆಳೆದ ತರಕಾರಿಗಳ ಮಾರಾಟ ಶುರು ಮಾಡಿದ್ದಾರೆ.

ಸದ್ಯಕ್ಕೆ ಧೋನಿಯವರ ಫಾರ್ಮ ಹೌಸ್ ನಲ್ಲಿಯ ಟೊಮೆಟೊ ಮತ್ತು ಹಾಲನ್ನು ಮಾರಾಟ ಮಾಡಲು ಶುರು ಮಾಡಿದ್ದಾರೆ. ಧೋನಿಯವರ ಫಾರ್ಮ್ ಹೌಸ್ ನಲ್ಲಿಯ ಟೊಮ್ಯಾಟೋ 80 ಕಿಲೋ ಉತ್ಪಾದನೆಯಾಗಿದ್ದು ಅದರಲ್ಲಿ 71 ಕಿಲೋ ಟೊಮ್ಯಾಟೋ ಪ್ರತಿ 40 ₹ ಗಳಂತೆ ಮಾರಾಟವಾಗಿವೆ. ಧೋನಿಯವರು ಪಂಜಾಬಿನಿಂದ 60 ಜರ್ಸಿ ಹಾಗೂ ಶಹವಾಲ್ ತಳಿಯ ವಿಶೇಷ ಹಸುಗಳನ್ನು ತರಿಸಿ ಕೊಂಡಿದ್ದಾರೆ. ಈ ಹಸುಗಳಿಂದ ಬರುವ ಹಾಲಿನಲ್ಲಿ ಯಾವುದೇ ರೀತಿಯ ಮಿಷ್ರಣವನ್ನು ಮಾಡದೆ ಪರಿಶುದ್ಧ ಹಾಲನ್ನು ಮಾರುತ್ತಿದ್ದಾರೆ. ಬೆಲೆ ಇದೆ 55 ₹ ಪ್ರತಿ ಲೀಟರ್.

ಧೋನಿಯವರು ಸದ್ಯ ತಮ್ಮ ಪತ್ನಿಯೊಂದಿಗೆ ದುಬೈನಲ್ಲಿದ್ದಾರೆ. ಧೋನಿಯವರ ಫಾರ್ಮಹೌಸ್ ಮ್ಯಾನೇಜರ್ ಸದ್ಯ ಈ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ. ಇವರ ಫಾರ್ಮ್ ಹೌಸ್ ನಲ್ಲಿ ಬೆಳೆಯಲಾದ ತರಕಾರಿಗಳ ಮಾರ್ಕೆಟಿಂಗ್ ಶಿವನಂದನ್ ಅವರು ನೋಡಿಕೊಳ್ಳುತ್ತಿದ್ದಾರೆ. ಶಿವನಂದನ್ ಅವರು ಹೇಳುವ ಪ್ರಕಾರ, ಕೆಲವೇ ದಿವಸಗಳ ಹಿಂದೆ ಧೋನಿಯವರು ನಮ್ಮನ್ನು ತಮ್ಮ ಫಾರ್ಮ್ ಹೌಸ್ ಗೆ ಕರೆದು ತರಕಾರಿ ಮತ್ತು ಹಾಲಿನ ಮಾರಾಟವನ್ನು ಶುರು ಮಾಡಬೇಕಾಗಿದೆ ಎಂದು ಹೇಳಿದರು. ಆ ಪ್ರಕಾರ ದರವೆಲ್ಲವನ್ನು ನಿಗದಿಪಡಿಸಿದ ನಂತರ ಈಗ ತರಕಾರಿ ಮತ್ತು ಹಾಲಿನ ವಿಕ್ರಿ ಶುರು ಮಾಡಲಾಗಿದೆ.

ಮಾಹಿ ಅವರು ಸದ್ಯ ದುಬೈ ನಲ್ಲಿ ಇದ್ದರೂ ಅವರ ಫಾರ್ಮ್ ಹೌಸ್ ನಲ್ಲಿಯ ತರಕಾರಿಗಳ ಮಾರಾಟ ಮಾತ್ರ ಈಗ ಇಲ್ಲಿ ಶುರುವಾಗಿದೆ. ಇನ್ನು ಒಂದು ತಿಂಗಳೊಳಗಾಗಿ ಕೋಸು, ಕಡಲೆಕಾಯಿ, ಫ್ಲಾವರ್, ಸ್ಟ್ರಾಬೆರಿ, ಬ್ರೋಕೊಲಿ ಹೀಗೆ ಅನೇಕ ರೀತಿಯ ತರಕಾರಿಗಳು ಮಾರಾಟಕ್ಕಾಗಿ ತಯಾರಾಗುತ್ತಿವೆ.