ಶೇನ್ ವಾರ್ನ್ ಕಟ್ಟ ಕಡೆಯ ಫೋಟೋ ಅವರದೇ ಜೊತೆಗಿದ್ದ ಮಿತ್ರನೊಬ್ಬ ಶೇರ್ ಮಾಡಿದನು ಸೋಶಿಯಲ್ ಮೀಡಿಯಾದಲ್ಲಿ! ನೋಡಿ ಕಳವಳ ವ್ಯಕ್ತ ಮಾಡಿದ ಅಭಿಮಾನಿಗಳು…

ಆಸ್ಟ್ರೇಲಿಯಾದ ಮಹಾನ್ ಕ್ರಿಕೆಟ್ ಆಟಗಾರ ಶೇನ್ ವಾರ್ನ್ ಅವರ ಆಕಸ್ಮಿಕ ನಿಧನದಿಂದಾಗಿ ಕ್ರಿಕೆಟ್ ವಿಶ್ವಕ್ಕೆ ಬರಸಿಡಿಲು ಬಡಿದ ಹಾಗಾಗಿದೆ. ಅನೇಕ ಮಾಜಿ ಕ್ರಿಕೆಟ್ ಆಟಗಾರರಿಂದ ಹಿಡಿದು ಈಗಿನ ಆಟಗಾರರೂ ಸಹ ಶೃದ್ಧಾಂಜಲಿ ನೀಡಿದ್ದನ್ನು ನೋಡಿದೆವು. ಶೇನ್ ವಾರ್ನ್ ಮತ್ತು ಆಸ್ಟ್ರೇಲಿಯಾದ ಮಾಜಿ ಆಟಗಾರ ರಿಕಿ ಪಾಂಟಿಂಗ್ ತುಂಬಾ ಉತ್ತಮ ಗೆಳೆಯರಿದ್ದರು. ಅವರೂ ಸಹ ನೋವು ತಾಳಿಕೊಳ್ಳದೆ ದುಃಖ ಪಟ್ಟಿದ್ದಾರೆ.

ಏತನ್ಮಧ್ಯೆ ಶೇನ್ ವಾರ್ನ್ ಅವರ ಆಪ್ತ ಮಿತ್ರರಾದ ಥಾಮಸ್ ಹಾಲ್ ಅವರು ಶೇನ್ ವಾರ್ನ್ ಅವರ ಕೊನೆಯ ಫೋಟೋ ಒಂದನ್ನು ತಮ್ಮ ಟ್ವಿಟರ್ ಹ್ಯಾಂಡಲ್ ನಿಂದ ಶೇರ್ ಮಾಡಿದ್ದಾರೆ. ಶೇನ್ ವಾರ್ನ್ ಅವರ ಈ ಕೊನೆಯ ಫೋಟೋ ನೋಡಿ ಅವರ ಅಭಿಮಾನಿಗಳು ಕಣ್ಣೀರಿಟ್ಟಿದ್ದಾರೆ. 4 ಮಾರ್ಚ್ 2022 ರಂದು ಸಾಯಂಕಾಲ ಥೈಲ್ಯಾಂಡ್ ನಲ್ಲಿಯ ಕೋಹ ಸಾಮೂಯಿ ವಿಲಾದಲ್ಲಿ ಶೇನ್ ವಾರ್ನ್ ಅವರ ಮೃತ್ಯು ಸಂಭವಿಸಿತ್ತು. ಮೊದಲಿಗೆ ಶೇನ್ ಅವರ ಮೃತ್ಯು ಹಾರ್ಟ್ ಅಟ್ಯಾಕ್ ನಿಂದ ಸಂಭವಿಸಿತು ಎಂದು ಹೇಳಲಾಗಿತ್ತು.

 

View this post on Instagram

 

A post shared by Thomas Hall (@hongkongtom888)

ನಂತರ ಥೈಲ್ಯಾಂಡ್ ಪೊಲೀಸರು ಸೋಮವಾರ ಪೋಸ್ಟ್ ಮಾರ್ಟಂ ರಿಪೋರ್ಟ್ ಪ್ರಕಾರ, ಅವರ ಮೃತ್ಯು ನೈಸರ್ಗಿಕವಾಗಿ ಘಟಿಸಿದೆ ಎಂದು ಹೇಳಿದ್ದಾರೆ. ಈ ಮಧ್ಯೆ ಅವರ ಮಿತ್ರನೊಬ್ಬ ಶೇನ್ ವಾರ್ನ್ ಅವರ ಕೊನೆಯ ಫೋಟೋ ಒಂದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾನೆ. ಸದ್ಯ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಶೇರ್ ಮಾಡಿದ ಮಿತ್ರ ಶೇನ್ ವಾರ್ನ್ ಜೊತೆಗೆ ಥೈಲ್ಯಾಂಡ್ ನಲ್ಲಿದ್ದರು.

ಮಿತ್ರನು ಈ ಫೋಟೋ ತೆಗೆಯುವಾಗ, ಶೇನ್ ವಾರ್ನ್ ಅವರ ಇದೇ ಫೋಟೋ ಕೊನೆಯ ಫೋಟೋ ಆಗಬಹುದೆಂದು ಕನಸಿನಲ್ಲಿಯೂ ಆತ ವಿಚಾರ ಮಾದಲಿಕ್ಕಿಲ್ಲ. ಈ ಫೋಟೋದಲ್ಲಿ ಶೇನ್ ವಾರ್ನ್ ಮುಖದ ಮೇಲೆ ಹಾಸ್ಯ ಎದ್ದು ಕಾಣುತ್ತಿದೆ. ಫೋಟೋ ನೋಡಿದ ಅಭಿಮಾನಿಗಳು ಅನೇಕ ರೀತಿಯ ಕಾಮೆಂಟ್ ಗಳನ್ನೂ ಮಾಡುತ್ತಿದ್ದಾರೆ.