ಶೋಲೆ ಚಿತ್ರದಲ್ಲಿ ರಾಮನಗರದ ಗುಡ್ಡದ ಮೇಲೆ ಕುಳಿತು ಗಬ್ಬರ್ ನಿಂದ “ಅರೇ ಓ ಸಾಂಬಾ” ಎನ್ನಿಸಿಕೊಳ್ಳುವ ನಟನ ಮಗಳ ಸುಂದರ ಫೋಟೋಗಳು ವೈರಲ್!

15 ಆಗಸ್ಟ್ 1975ರಲ್ಲಿ ತೆರೆಕಂಡ ಬಾಲಿವುಡ್ ನ ಶೋಲೆ ಚಿತ್ರ ಆ ಸಮಯದಲ್ಲಿ ಎಲ್ಲ ಚಿತ್ರಮಂದಿರಗಳಲ್ಲಿ ಭರ್ಜರಿಯಾಗಿ ಸಂಚಲನ ಮೂಡಿಸಿತ್ತು. ಭಾರತೀಯ ಚಿತ್ರರಂಗದಲ್ಲಿ ಒಂದು ಹೊಸ ಅಧ್ಯಾಯವನ್ನೇ ಈ ಚಿತ್ರವು ಪ್ರಾರಂಭ ಮಾಡಿತ್ತು. ಪ್ರಸ್ತುತ ಚಿತ್ರವು ಕರ್ನಾಟಕದ ರಾಮನಗರದ ಗುಡ್ಡಬೆಟ್ಟಗಳಲ್ಲಿಯೇ ಚಿತ್ರೀಕರಣಗೊಂಡಿತ್ತು. ಈ ಚಿತ್ರದಲ್ಲಿ ನಟಿಸಿದ ಮುಖ್ಯ ಪಾತ್ರಗಳಲ್ಲಿ ಬಾಲಿವುಡ್ ಮಹಾನಾಯಕ ಅಮಿತಾಬ್ ಬಚ್ಚನ್, ಧರ್ಮೇಂದ್ರ, ಹೇಮಮಾಲಿನಿ ಮತ್ತು ಜಯ ಬಚ್ಚನ್ ಕಾಣಿಸಿಕೊಂಡಿದ್ದರು. ಖಳನಾಯಕನ ಪಾತ್ರದಲ್ಲಿ ಗಬ್ಬರ್ ಸಿಂಗ್ ಆಗಿ ಅಮ್ಜದ್ ಖಾನ್ ನಟಿಸಿದ್ದರು.

 

View this post on Instagram

 

A post shared by Vinati Makijany (@vinatimak)

ಗಬ್ಬರ್ ಸಿಂಗನ ಜೊತೆಗಾರನಾಗಿ ಮ್ಯಾಕ್ ಮೋಹನ್ ಅಂದರೆ ಸಾಂಬಾ ಹೆಸರಿನ ಗಡ್ಡ ಬಿಟ್ಟ ವ್ಯಕ್ತಿಯೊಬ್ಬ ಸದಾ ಗುಡ್ಡದ ಮೇಲೆ ಗನ್ ಹಿಡಿದು ಕುಳಿತಿರುತ್ತಾನೆ. ಗಬ್ಬರ್ ಸಿಂಗ್ ಮೇಲಿಂದ ಮೇಲೆ ಆತನಿಗೆ “ಅರೆ ಓ ಸಾಂಬಾ” ಎಂದು ಪ್ರಶ್ನೆಗಳನ್ನು ಕೇಳುತ್ತಿರುತ್ತಾನೆ. ಶೋಲೆ ಚಿತ್ರದಲ್ಲಿ ಸದಾ ನೆನಪಿನಲ್ಲಿರುವ ಸಾಂಬಾ ಪಾತ್ರ ಮಾಡಿದ ಮ್ಯಾಕ್ ಮೋಹನ್ ಅವರ ಸುಂದರ ಮಗಳ ಫೋಟೋಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

 

View this post on Instagram

 

A post shared by Vinati Makijany (@vinatimak)

ಸಾಂಬಾ ರೋಲ್ ಮಾಡಿದ ಮ್ಯಾಕ್ ಮೋಹನ್ ಅವರ ಮಗಳ ಹೆಸರು ವಿನತಿ ಮಕಿಜಾನಿ ಇದೆ. ಇವರು ಆಕ್ಟ್ರೆಸ್, ಪ್ರೊಡ್ಯೂಸರ್ ಹಾಗೂ ಸ್ಕ್ರೀನ್ ರೈಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇವರ ಇನ್ಸ್ಟಾಗ್ರಾಮ್ ಅಕೌಂಟ್ ಆದ @vinatimak ನಲ್ಲಿ ತಮ್ಮ ಅನೇಕ ಫೋಟೋಗಳನ್ನು ಶೇರ್ ಮಾಡಿದ್ದಾರೆ. ನೋಡಲು ತುಂಬಾ ಬ್ಯೂಟಿಫುಲ್ ಆಗಿ ಕಾಣಿಸುವ ವಿನತಿ ಅವರು ಅನೇಕ ಚಿತ್ರಗಳಲ್ಲಿ ಪೋಷಕನಟಿಯಾಗಿಯೂ ಕೆಲಸ ಮಾಡಿ ತಮ್ಮ ಟ್ಯಾಲೆಂಟ್ ಪ್ರದರ್ಶಿಸಿದ್ದಾರೆ.