ಶ್ರೀವಲ್ಲಿ… ಸಾಂಗ್ ಮೇಲೆ ಮುದ್ದು ಮಗು ಮಾಡಿದ ಅದ್ಭುತ ಸ್ಟೈಲ್ ನ ಡ್ಯಾನ್ಸ್ ಮುಂದೆ ಖುದ್ದು ಅಲ್ಲು ಅರ್ಜುನ್ ಅವರೇ ಸಪ್ಪಗೆ! ಕ್ಯೂಟ್ ಪುಷ್ಪ ಈತನೇ ಎನ್ನುತ್ತಿದ್ದಾರೆ ನೆಟಿಜನ್ಸ್!

ಪುಷ್ಪ ಚಿತ್ರ ರಿಲೀಸ್ ಆಗಿ ತಿಂಗಳೇ ಕಳೆದರೂ ಈ ಚಿತ್ರದ ಫೀವರ್ ಮಾತ್ರ ಇನ್ನೂವರೆಗೂ ಇಳಿಯುತ್ತಿಲ್ಲ. ಈ ಚಿತ್ರದಲ್ಲಿಯ ಡೈಲಾಗ್ಸ್, ಡ್ಯಾನ್ಸ್ ಮತ್ತು ಸ್ಟೈಲ್ ಸೆಲೆಬ್ರಿಟಿಗಳಿಂದ ಹಿಡಿದು ಸಾಮಾನ್ಯ ಮನುಷ್ಯರು ಸಹ ಫಾಲೋ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಸಂಬಂಧಿಸಿದ ಅನೇಕ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗೇ ಆಗುತ್ತಿವೆ. “ತೇರಿ ಝಲಕ್ ಅಶರ್ಫಿ ಶ್ರಿವಲ್ಲಿ…” ಈ ಹಾಡಿನ ಮೇಲಂತೂ ಇಲ್ಲಿಯವರೆಗೆ ಎಲ್ಲಕ್ಕೂ ಹೆಚ್ಚು ರೀಲ್ಸ್ ಗಳು ತಯಾರಾಗಿವೆ. ಸದ್ಯ ಇದೇ ಹಾಡಿಗೆ ಸಂಬಂಧಿಸಿದ ಒಂದು ಪುಟ್ಟ ಹುಡುಗನ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಧೂಳ್ ಎಬ್ಬಿಸುತ್ತಿದೆ. ಇದನ್ನು ನೋಡಿದ ಮೇಲೆ, ಈ ಹಾಡಿನ ಕ್ರೇಜ್ ಈಗ ಚಿಕ್ಕ ಮಕ್ಕಳ ಮೇಲೆಯೂ ಕಂಡು ಬರುತ್ತಿದೆ ಎನ್ನುತ್ತೀರಿ. ಯಾಕೆಂದರೆ ಈ ಪುಟ್ಟನು ಶ್ರೀವಲ್ಲಿ ಹಾಡಿಗೆ ತುಂಬಾ ಸ್ಟೈಲಿಶ್ ನಲ್ಲಿ ಹುಕ್ ಸ್ಟೆಪ್ ಹಾಕಿರುವುದು ಕಂಡು ಬರುತ್ತದೆ. ಪುಟ್ಟ ಮಗುವಿನ ಈ ಅದ್ಭುತ ಕಲೆ ನೆಟಿಜನ್ಸ್ ಗಳಿಗೆ ತುಂಬಾ ಇಷ್ಟವಾಗಿದೆ.

ನೀವೂ ಒಮ್ಮೆ ನೋಡಿ ಈ ವೈರಲ್ ವಿಡಿಯೋ……

https://youtube.com/shorts/LZXnHHGI2wI?feature=share

ವಿಡಿಯೋದಲ್ಲಿ ಮಗು ಟಿವಿಯ ಮುಂದೆ ನಿಂತಿದ್ದಾನೆ. ಅದೇ ಸಮಯಕ್ಕೆ ಟಿವಿಯಲ್ಲಿ ಆತನ ಮುಂದೆ ಈ ಹಾಡು ಶುರು ಆಗುತ್ತದೆ. ಮಗು ಆ ಹಾಡಿನ ಕಡೆಗೆ ಸರಿಯಾಗಿ ಗಮನ ನೀಡಿದ್ದಾನೆ. ಇನ್ನೇನು ಆ ಸ್ಟೆಪ್ ಬರುತ್ತದೆ ಎನ್ನುವಷ್ಟರಲ್ಲಿಯೇ ಹೆಜ್ಜೆ ಹಾಕಲು ತಯಾರಾಗಿದ್ದಾನೆ ಪುಟ್ಟ. ಆತನು ಮಾಡಿದ ಅಲ್ಲು ಅರ್ಜುನ್ ಅವರ ಈ ಸ್ಟೈಲ್ ನಿಜಕ್ಕೂ ಸೂಪರ್ ಆಗಿದೆ ಎನ್ನುತ್ತೀರಿ.

ಈ ವೀಡಿಯೋವನ್ನು ಸೋಶಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ಆದ ಯುಟ್ಯೂಬ್ ನಲ್ಲಿ ಶೇರ್ ಮಾಡಲಾಗಿದೆ.