ಸಂಗೀತದಲ್ಲಿರುವ ಶಕ್ತಿ ಅದ್ಭುತ! ಸಂಗೀತಕ್ಕೆ ಹಸು ತಲೆ ತೂಗಿಸಿದ ಅದ್ಭುತ ರೀತಿ ನೋಡಿ ಈ ವಿಡಿಯೋದಲ್ಲಿ…

ಪ್ರೀತಿಯ ಭಾಷೆ ಭೂಮಿಯ ಮೇಲಿನ ಪ್ರತಿಯೊಂದು ಜೀವಿಗೆ ಅರ್ಥವಾಗುತ್ತದೆ. ಅದರಂತೆ ಸಂಗೀತವು ಸಹ ಪ್ರತಿಯೊಂದು ಜೀವಿಗೆ ಮೋಡಿ ಮಾಡುತ್ತದೆ ಎಂದು ತೋರಿಸುವ ವಿಡಿಯೋ ಒಂದು ಇಲ್ಲಿ ಒಳ್ಳೆಯ ಉದಾಹರಣೆಯಾಗಿದೆ.

ಈ ವೀಡಿಯೋವನ್ನು ಅನುಪಮ್ ಬಾರ್ದೋಲೋಯಿ ಹೆಸರಿನ ಅಕೌಂಟ್ ನಿಂದ ಟ್ವೀಟರ್ ನಲ್ಲಿ ಶೇರ್ ಮಾಡಲಾಗಿದೆ.

ಪ್ರಸ್ತುತ ವಿಡಿಯೋದಲ್ಲಿ ಹುಡುಗಿಯೊಬ್ಬಳು ಗಾರ್ಡನ್ ನಲ್ಲಿ ಕುಳಿತು ಹಸುವಿನ ಮುಂದೆ ಗಿಟಾರ್ ಬಾರಿಸುತ್ತಿದ್ದಾಳೆ. ಆಕೆ ನುಡಿಸುವ ಗಿಟಾರ್ ಗೆ ಹಸು ಶಾಂತವಾಗಿ ಸ್ಪಂದಿಸುತ್ತಿದೆ. 53 ಸೆಕೆಂಡಿನ ಈ ವಿಡಿಯೋದಲ್ಲಿ ಹಸು ಮೊದಲು ಸಂಗೀತಕ್ಕೆ ಸ್ಪಂದಿಸುತ್ತಾ ಸ್ಪಂದಿಸುತ್ತಾ ಕೊನೆಗೆ ಮರುಳಾಗಿ ಅಲ್ಲಿಯೇ ಆ ಹುಡುಗಿಯ ಮಡಿಲಲ್ಲಿ ಕಣ್ಣು ಮುಚ್ಚಿ ವಾಲಿ ಸಂಗೀತ ಕೇಳಲು ಮುಂದಾಗುತ್ತದೆ ಮತ್ತು ಸಂಗೀತಕ್ಕೆ ಮಂತ್ರ ಮುಗ್ಧವಾಗುತ್ತದೆ. ಆದ್ದರಿಂದಲೇ ಸಂಗೀತದಲ್ಲಿ ನಿಜಕ್ಕೂ ಅದ್ಬುತವಾದ ಶಕ್ತಿ ಇದೆ. ಇದು ಭೂಮಿಯ ಮೇಲಿನ ಪ್ರತಿಯೊಂದು ಜೀವಿಗೂ ತಿಳಿಯುವ ಭಾಷೆಯಾಗಿದೆ ಎಂದೇ ಹೇಳಬಹುದು.

ನೋಡಿ ಈ ವಿಡಿಯೋ…