ಸಗಣಿ ದೇಹ ಮತ್ತು ಮನಸ್ಸು ಪವಿತ್ರಗೊಳಿಸುತ್ತದೆ! ಪ್ರಯೋಜನಗಳನ್ನು ವಿವರಿಸುತ್ತ ಸಗಣಿ ತಿಂದ ವೈದ್ಯ: ವಿಡಿಯೋ ನೋಡಿ…..
ವೈದ್ಯರೊಬ್ಬರು ಸಗಣಿ ತಿನ್ನುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ವೈರಲ್ ಆಗುತ್ತಿದೆ. ಸಗಣಿಯ ಮಹತ್ವವನ್ನು ವಿವರಿಸುವ ಈ ವೈದ್ಯರ ಹೆಸರು ಮನೋಜ್ ಮಿತ್ತಲ್. ಅವರು ಕರ್ನಾಲ್ ನಿವಾಸಿಗಳು. ಎಂಬಿಬಿಎಸ್ ಓದಿರುವ ಮನೋಜ್ ಕಳೆದ ಹಲವು ವರ್ಷಗಳಿಂದ ಗೋಮೂತ್ರ ಸೇವಿಸುತ್ತ ಹಸುವಿನ ಸಗಣಿ ಸಹ ತಿನ್ನುತ್ತಿದ್ದಾರೆ. ಹಸುವಿನ ಸಗಣಿಯಲ್ಲಿ ಬಿ ಜೀವಸತ್ವಗಳು ಅಧಿಕವಾಗಿರುತ್ತವೆ. ಇದು ವಿಕಿರಣದಿಂದ ರಕ್ಷಿಸುತ್ತದೆ ಎಂದು ಮಿತ್ತಲ್ ಹೇಳುತ್ತಾರೆ. ಮೊಬೈಲ್ಗಳು, ಎಸಿಗಳು, ಫ್ರೀಜರ್ಗಳು ಮತ್ತು ಇತರ ವಿದ್ಯುತ್ ಉಪಕರಣಗಳಿಂದ ವಿಕಿರಣವನ್ನು ಹೊರಸೂಸಲಾಗುತ್ತದೆ. ಇದು ಕ್ಯಾನ್ಸರ್ನಂತಹ ರೋಗಗಳಿಗೆ ಕಾರಣವಾಗುತ್ತದೆ. ಆದರೆ, ಹಸುವಿನ ಸಗಣಿ ತಿನ್ನುವುದರಿಂದ ವಿಕಿರಣದ ಪರಿಣಾಮವನ್ನು ಕಡಿಮೆ ಮಾಡಬಹುದು ಎಂದು ಮಿತ್ತಲ್ ಹೇಳಿದ್ದಾರೆ.
ಗರ್ಭಿಣಿ ಮಹಿಳೆ ಹೆರಿಗೆಯ ಸಮಯದಲ್ಲಿ ಹಸುವಿನ ಸಗಣಿ ತಿಂದರೆ, ಹೆರಿಗೆಯ ಸಮಯದಲ್ಲಿ ಅಷ್ಟೊಂದು ತೊಂದರೆ ನಿರ್ಮಾಣವಾಗುವದಿಲ್ಲ. ಸಗಣಿ ತಿನ್ನುವುದರಿಂದ ಅನೇಕ ಕಾಯಿಲೆಗಳು ಗುಣವಾಗುತ್ತವೆ ಎಂದು ಮಿತ್ತಲ್ ಹೇಳಿದ್ದಾರೆ. ಮನೋಜ್ ಮಿತ್ತಲ್ ಅವರು ಮಕ್ಕಳ ವೈದ್ಯರಾಗಿದ್ದು ಕರ್ನಾಲ್ನಲ್ಲಿ ದೊಡ್ಡ ಆಸ್ಪತ್ರೆ ಇದೆ. ನಾವು ಯಾವಾಗಲೂ ನೆಲದ ಮೇಲೆ ಮಲಗುತ್ತೇವೆ ಮತ್ತು ಎಸಿ ಬಳಸುವುದಿಲ್ಲ ಎಂದು ಮಿತ್ತಲ್ ಹೇಳುತ್ತಾರೆ. ಹಸುವಿನ ಸಗಣಿ 28% ಆಮ್ಲಜನಕವನ್ನು ಹೊಂದಿರುತ್ತದೆ. ಹೀಗಾಗಿ ನಮ್ಮ ಆರೋಗ್ಯ ಚೆನ್ನಾಗಿರುತ್ತದೆ ಎಂಬುದು ಮಿತ್ತಲ್ ಅವರ ಅನಿಸಿಕೆಯಾಗಿದೆ.
ಕೆಲವು ದಿವಸಗಳ ಹಿಂದೆ ಮನೋಜ ಅವರು ಸಗಣಿಯ ವಿವಿಧ ಲಾಭಗಳ ಕುರಿತು ವಿಡಿಯೋ ಮಾಡುತ್ತಿದ್ದರು. ಅಷ್ಟರಲ್ಲಿ ಲಾಭಗಳನ್ನು ವಿವರಿಸುತ್ತಾ ತಮ್ಮ ಕೈಯಲ್ಲಿದ್ದ ಸಗಣಿಯನ್ನು ತಿಂದು ತೋರಿಸುತ್ತಾರೆ. ಹೀಗಾಗಿ ಒಬ್ಬ ವೈದ್ಯರು ಸಗಣಿ ತಿಂದರೆಂದು ಅವರ ವಿಡಿಯೋ ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾನೇ ವೈರಲ್ ಆಗುತ್ತಿದೆ.
ವಿಡಿಯೋ ನೋಡಿ.
Dr. Manoj Mittal MBBS MD's prescription. Via @ColdCigar pic.twitter.com/SW2oz5ao0v https://t.co/Gzww80KiSs
— Rofl Gandhi 2.0 🚜🏹 (@RoflGandhi_) November 16, 2021
ಮನೋಜ್ ಮಿತ್ತಲ್ ಅವರ ವೀಡಿಯೊ ವೈರಲ್ ಆದ ತಕ್ಷಣ, ವಿವಿಧ ಪ್ರತಿಕ್ರಿಯೆಗಳು ಕಂಡುಬರುತ್ತಿವೆ. ಕೆಲವರು ಮನೋಜ್ ಅವರ ಪದವಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿದರು. ಮನೋಜ್ ಅವರ ಮಾತು ನಿಜ ಎಂದು ಕೆಲವರು ಹೇಳುತ್ತಿದ್ದಾರೆ. ಮಿತ್ತಲ್ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.