ಸದಾ ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನ ಚಾಲನೆ ಮಾಡಬೇಕು: ನಿರ್ಲಕ್ಷ್ಯ ಮಾಡಿದರೆ ಅಪಾಯ ಖಂಡಿತ ಎನ್ನುವುದಕ್ಕೆ ಸಾಕ್ಷಿಯಾದ Video
ರಸ್ತೆ ಸುರಕ್ಷತೆ ಎನ್ನುವುದು ಇತ್ತೀಚಿನ ದಿನಗಳಲ್ಲಿ ಬಹಳ ಪ್ರಮುಖವಾದ ವಿಷಯವಾಗಿದೆ. ಏಕೆಂದರೆ ನಗರ ಪ್ರದೇಶಗಳಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ದುಪ್ಪಟ್ಟಾಗುತ್ತಿದೆ. ಅಲ್ಲದೇ ರಸ್ತೆ ಸಂಚಾರಿ ನಿಯಮಗಳನ್ನು ಪಾಲನೆ ಮಾಡದೆ ಅನೇಕರು ತಮ್ಮ ಹುಚ್ಚಾಟಗಳನ್ನು ನಡೆಸುತ್ತಿದ್ದಾರೆ. ಇಂತಹ ಆಲೋಚನಾರಹಿತ ಉದ್ಧಟತನದಿಂದ ಅ ಪ ಘಾ ತ ಗಳ ಸಂಖ್ಯೆ ಕೂಡ ಹೆಚ್ಚುತ್ತಲೇ ಇದೆ. ಯಾವುದೇ ರೀತಿಯಲ್ಲಿ ಕೂಡಾ ಜಾಗೃತಿಯನ್ನು ಮೂಡಿಸುವ ಪ್ರಯತ್ನ ಮಾಡಿದರೂ ರಸ್ತೆ ಸಂಚಾರಿ ನಿಯಮಗಳನ್ನು ಪಾಲನೆ ಮಾಡುವಲ್ಲಿ ಅನೇಕರು ತೀವ್ರವಾದ ನಿರ್ಲಕ್ಷ್ಯವನ್ನು ತೋರುತ್ತಿದ್ದಾರೆ. ರಸ್ತೆ ನಿಯಮ ಉಲ್ಲಂಘನೆ ತಮ್ಮ ಪ್ರಾಣಕ್ಕೆ ಸಂಚಕಾರವನ್ನು ತರುತ್ತದೆ ಎಂಬ ಭ ಯವೇ ಇಲ್ಲದೇ ರಸ್ತೆಗಳಿಗೆ ಇಳಿಯುತ್ತಿದ್ದಾರೆ. ಅದರಲ್ಲೂ ಯುವಜನತೆ ರಸ್ತೆ ಸಂಚಾರಿ ನಿಯಮಗಳ ಕುರಿತಾಗಿ ಅನೇಕ ಸಂದರ್ಭಗಳಲ್ಲಿ ತೀವ್ರವಾದ ಅಸಡ್ಡೆಯನ್ನು ತೋರುವ ಮೂಲಕ ಅ ಪಾ ಯಕ್ಕೆ ತಾವೇ ಆಹ್ವಾನವನ್ನು ನೀಡುತ್ತಿದ್ದಾರೆ.
ಪ್ರತಿನಿತ್ಯ ಸಮಾಚಾರ ಪತ್ರಿಕೆಗಳು, ಸಮಾಚಾರ ವಾಹಿನಿಗಳಲ್ಲಿ ರಸ್ತೆ ಅ ಪ ಘಾ ತಗಳ ದೃಶ್ಯಗಳು ಹಾಗೂ ವಿಡಿಯೋಗಳನ್ನು ನೋಡಿದಾಗ ಭ ಯ ಹುಟ್ಟಿಸುವಂತಹ ವಾತಾವರಣ ಮನಸ್ಸಿನಲ್ಲಿ ಮೂಡಿಬರುತ್ತದೆ. ಆದರೆ ಇಂತಹ ಭ ಯಾ ನಕ ಸನ್ನಿವೇಶಗಳ ಹೊರತಾಗಿಯೂ ಕೂಡ ಅನೇಕರಲ್ಲಿ ಸಂಚಾರ ನಿಯಮಗಳ ಪಾಲನೆ ಬಗ್ಗೆ ಜಾಗೃತಿ ಮೂಡಿಲ್ಲ ಎನ್ನುವುದು ವಾಸ್ತವ. ಸೋಶಿಯಲ್ ಮೀಡಿಯಾದಲ್ಲಿ ಇಂತಹದೇ ಒಂದು ವಿಡಿಯೋ ವೈರಲ್ ಆಗಿದ್ದು ನಗರದ ರಸ್ತೆಯೊಂದರಲ್ಲಿ ಸಂಚಾರ ನಿಯಮದ ಪಾಲನೆ ಮಾಡದೆ ಹೊರಟ ಯುವಕರ ವಿಡಿಯೋ ಎಲ್ಲರ ಗಮನವನ್ನು ಸೆಳೆಯುತ್ತಿದ್ದು ಜನ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.
ನಗರದ ರಸ್ತೆಯೊಂದರಲ್ಲಿ ಬೈಕೊಂದರ ಮೇಲೆ ಬರುವ ಮೂರು ಜನ ಯುವಕರಲ್ಲಿ ಒಬ್ಬರೂ ಕೂಡಾ ಹೆಲ್ಮೆಟ್ ಧರಿಸಿರುವುದಿಲ್ಲ. ಮೂವರು ಒಂದೇ ಬೈಕ್ ನಲ್ಲಿ ಸಂಚಾರ ಮಾಡಬಾರದು ಎಂದು ನಿಯಮ ಗಾಳಿಗೆ ತೂರಿದ್ದಾರೆ ಅವರು. ಅಲ್ಲದೇ ರಸ್ತೆಯಲ್ಲಿ ಬರುತ್ತಿರುವ ಅನ್ಯ ಬೈಕ್ ಗಳ ಕಡೆ ಗಮನ ಕೂಡ ನೀಡದೆ ಟರ್ನಿಂಗ್ ಒಂದರಲ್ಲಿ ತಮ್ಮ ಬೈಕನ್ನು ನುಗ್ಗಿಸುತ್ತಾರೆ. ಆಗ ಹಿಂದೆಯಿಂದ ಬರುತ್ತಿದ್ದ ಬೈಕ್ ಸವಾರ ಅವರನ್ನು ಬಯ್ಯುತ್ತಾ ಮುಂದೆ ಸಾಗುತ್ತಾನೆ. ಆದರೆ ಈ ಮೂವರಲ್ಲಿ ಬೈಕ್ ಓಡಿಸುತ್ತಿದ್ದ ಯುವಕ ಬಹಳ ವೇಗವಾಗಿ ಬೈಕ್ ಓಡಿಸಿಕೊಂಡು ತಮ್ಮನ್ನು ಓವರ್ ಟೇಕ್ ಮಾಡಿದ ಯುವಕನ ಬೈಕ್ ಗಿಂತ ಮುಂದೆ ಹೋಗುತ್ತಾರೆ. ಆದರೆ ಹಾಗೆ ಹೋಗುತ್ತಿದ್ದವರ ಮುಂದೆ ರಸ್ತೆಯಲ್ಲಿ ಹಸುವೊಂದು ನಡೆದು ಬರುತ್ತಿರುತ್ತದೆ. ಆದರೆ ಕಡೆ ಗಮನ ಕೂಡ ನೀಡದ ಯುವಕರಿದ್ದ ಬೈಕ್ ಸೀದಾ ಹೋಗಿ ಹಸಿವಿಗೆ ಡಿಕ್ಕಿ ಹೊಡೆಯುತ್ತದೆ.
ಬೈಕ್ ಡಿಕ್ಕಿ ಹೊಡೆದ ಪರಿಣಾಮ ಹಸು ಪಾಪ ರಸ್ತೆಯಲ್ಲಿ ಉರುಳಿ ಬಿದ್ದಿದೆ. ಇನ್ನು ಬೈಕ್ ಕಂಟ್ರೋಲ್ ತಪ್ಪಿ, ಆ ಮೂವರು ಯುವಕರ ಸಹಿತ ರಸ್ತೆಯ ಇನ್ನೊಂದು ಬದಿ ಹೋಗಿ ಬಿದ್ದಿದೆ. ಅದೃಷ್ಟವಶಾತ್ ಯುವಕರಿಗೆ ಅ ಪಾ ಯ ಸಂಭವಿಸಿಲ್ಲ. ಆ ವೇಳೆಗೆ ಸ್ವಲ್ಪ ಹೊತ್ತಿಗೆ ಮುಂಚೆ ಯುವಕರನ್ನು ಬೈದಿದ್ದ ಮತ್ತೊಬ್ಬ ಬೈಕ್ ಸವಾರ ತನ್ನ ಬೈಕ್ ನಿಲ್ಲಿಸಿ, ಅವರನ್ನು ಬೈಯ್ಯಲು ಆರಂಭಿಸುತ್ತಾನೆ. ಕೆಲವರು ಹೆಲ್ಮೆಟ್ ಧರಿಸದ, ಒಂದೇ ಬೈಕ್ ಮೇಲೆ ಮೂರು ಜನ ಹೊರಟಿರುವುದನ್ನು ಟೀಕೆ ಮಾಡುತ್ತಾರಾದರೂ ಎಲ್ಲೋ ಒಂದು ಕಡೆ ಅಪಘಾತವಾಗಿದೆ ಎಂಬ ಕಾರಣಕ್ಕೆ ಯುವಕರ ಮೇಲೆ ದಯೆ ತೋರಿಸುತ್ತಾರೆ.
ರಸ್ತೆ ನಿಯಮಗಳನ್ನು ಉ ಲ್ಲಂ ಘ ನೆ ಮಾಡಿ ಸಂಚಾರ ಮಾಡಿ ಅ ಪಾ ಯವನ್ನು ಮೈಮೇಲೆ ಎಳೆದುಕೊಂಡ ಯುವಕರ ಉದ್ಧಟತನ ಮೆರೆಯುವ ವಿಡಿಯೋವನ್ನು ಈಗಾಗಲೇ ಕೋಟ್ಯಾಂತರ ಜನರ ರಕ್ಷಣೆ ಮಾಡಿದ್ದಾರೆ.
ವಿಡಿಯೋ ನೋಡಿ
ವಿಡಿಯೋ ನೋಡಿದವರಲ್ಲಿ ಬಹಳಷ್ಟು ಜನ ಯುವಕರ ಉದ್ಧಟತನವನ್ನು ಖಂ ಡ ನೆ ಮಾಡಿದ್ದಾರೆ. ಆದರೆ ಇದೇ ವೇಳೆ ಅನೇಕರು ಇವರ ಬೈಕಿಗೆ ತಗುಲಿ ರಸ್ತೆಯ ಮೇಲೆ ಉರುಳಿ ಬಿದ್ದಂತಹ ಹಸುವಿನ ಪರಿಸ್ಥಿತಿ ಏನಾಗಿದೆ ಮರುಕ ಪಟ್ಟಿದ್ದಾರೆ. ಕೆಲವರು ಆ ಯುವಕರು ತಮ್ಮ ಕಣ್ಣನ್ನು ನೆತ್ತಿಯ ಮೇಲಿಟ್ಟುಕೊಂಡು ವಾಹನ ಚಾಲನೆ ಮಾಡುತ್ತಿರುವರಾ ಹೇಗೆ? ಎಂದು ಟೀ ಕಿಸಿದ್ದಾರೆ. ಆದರೆ ಅನೇಕರು ಇಲ್ಲಿ ಹಸುವಿನ ಬಗ್ಗೆ ಕಾಳಜಿಯನ್ನು ತೋರಿಸುತ್ತಾ ಕಾಮೆಂಟುಗಳನ್ನು ಮಾಡಿದ್ದು, ರಸ್ತೆ ಸಂಚಾರಿ ನಿಮಯಗಳ ಪಾಲನೆ ಮಾಡದೆ ಹೊರಟ ಯುವಕರ ವರ್ತನೆಯ ಬಗ್ಗೆ ತೀ ವ್ರ ವಾದ ಅ ಸಮಾಧಾನವನ್ನು ಹೊರಹಾಕಿದ್ದಾರೆ.