ಸರಿಯಾಗಿ 07:29 ನಿಮಿಷಕ್ಕೆ ಧೋನಿ ನಿವೃತ್ತಿಯಾಗಲು ಕಾರಣವೇನು..? ಇದರ ಹಿಂದಿದೆ ಅಚ್ಚರಿ ಪಡಿಸುವ ‘ಈ’ ಕಾರಣ!
ಎಂಎಸ್ ಧೋನಿ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿಯ ದೊಡ್ಡ ಹೆಸರು. ಇವರು ಕ್ರಿಕೆಟ್ ನಿಂದ ಸನ್ಯಾಸವನ್ನು ಸ್ವೀಕರಿಸುವದರ ಜೊತೆಗೆ ಒಂದು ದೊಡ್ಡ ಅಧ್ಯಾಯದ ಮುಕ್ತಾಯವಾಯಿತು.
ಭಾರತದಂತಹ ಅತಿ ಜನಸಂಖ್ಯೆಯ ದೇಶದಲ್ಲಿ ಕ್ರಿಕೆಟ್ ತುಂಬಾ ಮಹತ್ವ ಪಡೆದಿದೆ. ಇಲ್ಲಿ ಕ್ರಿಕೆಟ್ ಒಂದು ಧರ್ಮವಾಗಿ ಪರಿಣಮಿಸಿದೆ. ಎಲ್ಲರ ಅಚ್ಚುಮೆಚ್ಚಿನ ಕ್ರಿಕೆಟನ್ನು ಧೋನಿ ಅವರು ತಮ್ಮ ನಾಯಕತ್ವದಲ್ಲಿ ಯಶಸ್ಸಿನ ಉತ್ತುಂಗ ಶಿಖರಕ್ಕೆರಿಸಿದರು. ಹೀಗಾಗಿ ಧೋನಿ ಅವರು ಭಾರತೀಯ ಕ್ರಿಕೆಟ್ ನ ಎಲ್ಲಕ್ಕೂ ಯಶಸ್ವಿ ನಾಯಕರಾದರು.
ಇಂಥ ಒಬ್ಬ ಯಶಸ್ವಿ ವಿಕೆಟ್ ಕೀಪರ್, ಬ್ಯಾಟ್ಸ್ಮನ್, ನಾಯಕ ಎಲ್ಲ ವಿಭಾಗಗಳಲ್ಲಿಯೂ ಆಲ್-ರೌಂಡರ್ ಆದ ಧೋನಿಯವರು ಆಗಸ್ಟ್ 15 ರಂದು ದೇಶ ಸ್ವಾತಂತ್ರೋತ್ಸವದಲ್ಲಿದ್ದಾಗ ಧೋನಿ ಅವರು ತಮ್ಮ ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳಿದರು.

ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ ನಿಂದ ವಿಡಿಯೋ ಒಂದನ್ನು ಶೇರ್ ಮಾಡುತ್ತಾ ಸದಾಕಾಲ ನಿಮ್ಮ ಪ್ರೇರಣೆ ಮತ್ತು ಜೊತೆಯಾಗಿರಲು ನಾನು ಋಣಿಯಾಗಿದ್ದೇನೆ. 19:29 ಕ್ಕೆ ನನ್ನನ್ನು ನಿವೃತ್ತಿಯಾಗಿದ್ದೇನೆ ಎಂದು ತಿಳಿಯಿರಿ. ಎಂದಾಗ ಇಡೀ ಕ್ರಿಕೆಟ್ ಜಗತ್ತೇ ಬೆಚ್ಚಿಬಿದ್ದಿತ್ತು.
ಧೋನಿಯವರ ಇತಿಹಾಸ ನೋಡಲಾಗಿ ಯಾವುದೇ ಕೆಲಸ ವಿಚಾರ ಪೂರ್ವಕವಾಗಿ ಮತ್ತು ಅಷ್ಟೇ ನಾವಿನ್ಯ ಪೂರ್ಣವಾಗಿ ಮಾಡುತ್ತಾರೆ. ಇವರು ರಿಟೈರ್ ಆದಾಗ ಎಲ್ಲರಿಗೂ ಮನಸ್ಸಿಗೆ ತುಂಬಾ ನೋವಾಯಿತು. ಅದರ ಜೊತೆಗೆ ಒಂದು ಪ್ರಶ್ನೆಯೂ ನಿರ್ಮಾಣವಾಯಿತು. ಅದೇನೆಂದರೆ 19:29 ಕ್ಕೇ ರಿಟಾಯರ್ಡ್ ಎಂದು ತಿಳಿಯಿರಿ ಎಂದಾಗ ಈ ಸಮಯದ ರಹಸ್ಯವೇನಿರಬಹುದು? ಎಂಬ ಪ್ರಶ್ನೆ ಎಲ್ಲರಿಗೂ ಕಾಡುತ್ತಲೇ ಇರಬೇಕು ಅಲ್ವಾ,
ಹಾಗಾದರೆ ಇದರ ಉತ್ತರವನ್ನು ತಿಳಿದುಕೊಳ್ಳಿ…
ಈ ಪ್ರಶ್ನೆಯ ಉತ್ತರವನ್ನು ಶೋಧಿಸುವ ಪ್ರಯತ್ನ ಮಾಡಿದಾಗ ನಮಗೆ ಕಂಡುಬಂದದ್ದು ಏನೆಂದರೆ, ಕಳೆದ ವರ್ಷ ವಿಶ್ವಕಪ್ ನಲ್ಲಿ ಜುಲೈ 9 ರಂದು ಸೆಮಿಫೈನಲ್’ನಲ್ಲಿ ನ್ಯೂಜಿಲೆಂಡ್ ಜೊತೆಗೆ ಆಡುವಾಗ ಭಾರತ ಸರಿಯಾಗಿ 19:29 ಇದೇ ಸಮಯಕ್ಕೆ ಸೋತು ಸ್ಪರ್ಧೆಯಿಂದ ಹೊರಬಿದ್ದಿತ್ತು. ಇದು ಧೋನಿ ಅವರ ಮನಸ್ಸಿಗೆ ತುಂಬಾ ನೋವು ಕೊಟ್ಟಿದೆ. ಇದೇ ಕಾರಣದಿಂದ ಅವರು 19:29 ಗಂಟೆಗೆ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಈ ಪಂದ್ಯದಲ್ಲಿ ಧೋನಿ ಅವರು ಔಟಾದಾಗ ಭಾರತದ ಗೆಲವು ಸೋಲಿನಲ್ಲಿ ರೂಪಾಂತರವಾಗಿತ್ತು. ಮುಂದೆ ಯಜುರ್ವೆಂದ್ರ ಚಹಲ್ ಅವರ ಕೊನೆಯ ವಿಕೆಟ್ ಪಡೆದು ನ್ಯೂಜಿಲ್ಯಾಂಡ್ ಗೆಲುವಿನ ಪತಾಕೆ ಹಾರಿಸಿದ್ದರು.