ಸಲ್ಯೂಟ್! ಮೈ ಮೇಲಿನ ಸೀರೆ ತೆಗೆದು ‘ಆಕೆ’ ಉಳಿಸಿದಳು ನೀರಲ್ಲಿ ಮುಳುಗುತ್ತಿರುವ ಯುವಕನ ಜೀವ!

  1.  

ಪುರುಷರ ಶೌರ್ಯದ ಕಥೆಗಳನ್ನು ಎಷ್ಟೋ ಕೇಳಿದ್ದೇವೆ. ಹಾಗೆಯೇ ಸ್ತ್ರೀಯರು ಮಾಡಿದ ಯಶೋಗಾಥೆಗಳು ಸಹಿತ ಕಡಿಮೆಯೇನಿಲ್ಲ. ಸಂಕಟ ಸಮಯದಲ್ಲಿ ಸಮಯೋಚಿತವಾಗಿ ವರ್ತಿಸಿ ಇನ್ನೊಬ್ಬರ ಜೀವ ಉಳಿಸಿದ ಮೂವರು ಮಹಿಳೆಯರು ಮಾಡಿದ ಪರಾಕ್ರಮದ ಘಟನೆಯೊಂದು ಸದ್ಯಕ್ಕೆ ಮಿಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ.

ಘಟನೆ ತಮಿಳುನಾಡಿನಿಂದ ವರದಿಯಾಗಿದೆ. ಇಲ್ಲಿಯ ಕೊಟ್ಟರಾಯಿ ಡ್ಯಾಮ್ ನಲ್ಲಿ ಸ್ನಾನಕ್ಕೆ ತೆರಳಿದ ನಾಲ್ಕು ಜನ ತರುಣರು ನೀರಿನಲ್ಲಿ ಮುಳುಗುತ್ತಿರುವಾಗ ಮೂವರು ಮಹಿಳೆಯರು ಪ್ರಸಂಗದ ಗಾಂಭೀರ್ಯತೆಯನ್ನು ಅರಿತು ಆಪತ್ಭಾಂಧವರಂತೆ ಬಂದು ಇಬ್ಬರ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದರಲ್ಲಿ ಒಬ್ಬಳು ಮಹಿಳೆ ತಾನು ತೊಟ್ಟ ಸೀರೆಯನ್ನೇ ಕಳಚಿ ನೀರಿನಲ್ಲಿ ಎಸೆದು ಮುಳುಗುವ ತರುಣನನ್ನು ಉಳಿಸಿದ್ದಾಳೆ. ಮಹಿಳೆಯರು ಹೆಸರುಗಳು ಅನುಕ್ರಮವಾಗಿ ಸೆಂಥಮೀಜ್ ಸೆಲ್ವಿ (38), ಮುಥಮಲ್(34), ಅನಂತವಲ್ಲಿ(34) ಹೀಗಿವೆ.

ಸೆಂಥಮೀಜ್ ಸೆಲ್ವಿ ಹೇಳುವ ಪ್ರಕಾರ, ಆ ತರುಣರು ಅಲ್ಲಿ ಬಂದಾಗ ನಾವು ಮನೆಯ ಕಡೆಗೆ ನಡೆದಿದ್ದೆವು. ನೀರಿನ ಕಡೆಗೆ ಹೋಗುವ ಅವರನ್ನು ತಡೆದು ಡ್ಯಾಮ್ ನಲ್ಲಿ ನೀರಿನ ಹರಿವು ಜಾಸ್ತಿಯಾಗಿದ್ದರಿಂದ ನೀರಿನ ಪ್ರಮಾಣದಲ್ಲಿ ತುಂಬಾ ಹೆಚ್ಚಾಗಿದೆ, ಹೀಗಾಗಿ ನೀವು ನೀರಿನಲ್ಲಿ ಇಳಿಯಬೇಡಿ ಎಂದು ಹೇಳಿದರೂ ತರುಣರು ಕೇಳದೆ ನೀರಿನಲ್ಲಿ ಹೋದಾಗ ಈ ಅವಘಡ ಸಂಭವಿಸಿದೆ. ಈ ದೃಶ್ಯವನ್ನು ನೋಡಿ ಮೊದಲು ಸ್ವಲ್ಪ ಭಯವಾಯಿತು, ಆದರೆ ಸಮಯದ ಗಾಂಭೀರ್ಯತೆಯನ್ನು ಅರಿತು ಅವರ ಜೀವ ಉಳಿಸಲು ನಾವು ಈ ಪ್ರಯತ್ನವನ್ನು ಮಾಡಿದೆವು. ಸಮಯಕ್ಕೆ ಸರಿಯಾಗಿ ಸೀರೆಯನ್ನು ನೀರಿನಲ್ಲಿ ಒಗೆಯುವ ಉಪಾಯ ಹೊಳೆದಿದ್ದರಿಂದ ಇಬ್ಬರ ಜೀವ ಉಳಿಸುವಲ್ಲಿ ನಮಗೆ ಯಶಸ್ಸು ಲಭಿಸಿತು. ಆದರೆ ದುರ್ದೈವ ಇನ್ನಿಬ್ಬರ ಜೀವ ಉಳಿಸಲು ಸಾಧ್ಯವಾಗಲಿಲ್ಲ ಎಂದು ದುಃಖ ವ್ಯಕ್ತ ಪಡಿಸಿದ್ದಾಳೆ.

ನ್ಯೂ ಇಂಡಿಯಾ ಎಕ್ಸಪ್ರೆಸ್ ವರದಿ ಮಾಡಿದ ಪ್ರಕಾರ ಘಟನೆ ಆಗಸ್ಟ್ 6 ರಂದು ನಡೆದಿದೆ. ಸಿರವಾನ್ಚೂರ್ ಊರಲ್ಲಿಯ ಈ ಹುಡುಗರು ಕ್ರಿಕೆಟ್ ಆಟ ಆಡಿದ ನಂತರ ಈ ಕೊಟ್ಟರಾಯಿ ಡ್ಯಾಮ್ ನಲ್ಲಿ ಸ್ನಾನ ಮಾಡಲು ಇಳಿದಾಗ ಈ ದುಃಖದ ಘಟನೆ ನಡೆದಿದೆ.

ಉಳಿದಿಬ್ಬರನ್ನು ನೋಡಲು ನಾವು ನಮಗೆ ಸಾಧ್ಯವಾದಷ್ಟು ನೀರಿನಲ್ಲಿ ಇಳಿದೆವು. ಆದರೆ ಯಾವುದೇ ಲಾಭವಾಗಲಿಲ್ಲ. ಮರಣಿಸಿದ ಇಬ್ಬರು ತರುಣರು ನಮಗೆ ನೀರಲ್ಲಿ ಸಿಗಲಿಲ್ಲ. ಜೀವ ಉಳಿಸಿದ ಇಬ್ಬರ ಹೆಸರು ಕಾರ್ತಿಕ್ ಮತ್ತು ಸೆಂಥಿವೆಲನ್ ಇದೆ. ನೀರಿನಲ್ಲಿ ಮುಳುಗಿ ಪ್ರಾಣ ಬಿಟ್ಟವರಲ್ಲಿ ಒಬ್ಬನ ಹೆಸರು ಪವಿತ್ರನ್(18) ಮತ್ತು ಇನ್ನೊಬ್ಬ ರಂಜಿತ್(34) ಇತ್ತು. ಆರೋಗ್ಯ ವಿಭಾಗದ ಸಿಬ್ಬಂದಿಗಳು ಘಟನೆಯ ಸ್ಥಳಕ್ಕೆ ಬಂದಾಗ ಈ ಮೇಲಿನವರ ಶವಗಳನ್ನು ನೀರಿನಿಂದ ತೆಗೆಯಲಾಯಿತು.