ಸಾಕಿದ ನಾಯಿಮರಿ ಮತ್ತು ಯುವತಿಯ ಮೇಲೆ ಆಕಸ್ಮಿಕವಾಗಿ ಬಂದು ಅ#ಟ್ಯಾಕ್ ಮಾಡಿದ ಬೀದಿ ನಾಯಿ! ನೋಡಿ ವೈರಲ್ ವಿಡಿಯೋ……!
ಇಂದಿನ ಕಾಲದಲ್ಲಿ ಸಾಕು ಪ್ರಾಣಿಗಳಿಗೆ ತುಂಬಾ ಮಹತ್ವ ನೀಡಲಾಗುತ್ತಿದೆ. ಏಕೆಂದರೆ ಸಾಕು ಪ್ರಾಣಿಗಳು ನಮ್ಮನ್ನು ಸಂರಕ್ಷಣೆ ಮಾಡುವದರ ಜೊತೆಗೆ ನಮ್ಮನ್ನು ಮನರಂಜನೆ ಸಹ ಮಾಡುವವು ಎಂಬುದು ಇಂದಿನ ಜನರ ಅಭಿಪ್ರಾಯವಾಗಿದೆ. ಪ್ರತಿಯೊಬ್ಬರ ಮನೆಯಲ್ಲಿ ಒಂದಲ್ಲ ಒಂದು ಪ್ರಾಣಿಯನ್ನು ಸಾಕಿರುತ್ತಾರೆ. ಆದರೆ ಅವರವರ ಇಚ್ಛೆಯ ಅನುಸಾರ ಪ್ರಾಣಿಯನ್ನು ಆಯ್ಕೆ ಮಾಡಿ ಅದನ್ನು ಮನೆಯಲ್ಲಿ ಪ್ರೀತಿಯಿಂದ ಸಾಕುತ್ತಾರೆ. ಹೆಚ್ಚಾಗಿ ಸಾಕುವ ಪ್ರಾಣಿ ಎಂದರೆ ನಾಯಿ. ನಿಯತ್ತಿಗೆ ಇನ್ನೊಂದು ಹೆಸರೇ ಶ್ವಾನ. ನಾಯಿಯನ್ನು ಸಾಕುವದು ಈಗಿನ ಕಾಲದ ಜನರ ಟ್ರೆಂಡ್ ಆಗಿದೆ.
ನಾಯಿಯನ್ನು ಸಾಕುವದು ಈಗಿನ ಜನರ ಒಂದು ಹವ್ಯಾಸ ಕೂಡಾ ಆಗಿದೆ. ನಾಯಿ ನಮ್ಮ ಮನೆಯ ಸಂರಕ್ಷಣೆ ಮಾಡುವದು. ನಮ್ಮ ಮನೆಗೆ ಅಪರಿಚಿತ ವ್ಯಕ್ತಿ ಯಾರಾದರೂ ಬಂದರೆ ಸಾಕು ಅದು ಬೊಗಳಲು ಶುರು ಮಾಡುತ್ತದೆ. ಹೀಗಾಗಿ ರಾತ್ರಿಯ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯುವದನ್ನು ನಾಯಿ ಕಪಾಡುವದು. ಆದರೆ ಕೆಲವೊಮ್ಮೆ ನಾವು ಸಾಕಿದ ಪ್ರಾಣಿಗಳಿಂದಲೇ ನಮಗೆ ಅಪಾಯ ಉಂಟಾಗುವ ಪರಸ್ಥಿತಿ ಬಂದೊದಗುತ್ತದೆ. ಹೀಗಾಗಿ ನಾವು ಸಾಕಿದ ಪ್ರಾಣಿಯನ್ನು ಕಾಪಾಡಬೇಕು ಅಥವಾ ನಮ್ಮ ಜೀವವನ್ನು ಕಾಪಾಡಬೇಕು ಎಂಬುದು ಅರ್ಥವಾಗುವದಿಲ್ಲ.
ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ತುಂಬಾನೇ ವೈರಲ್ ಆಗುತ್ತಿದೆ. ಕೋತಿ ಮತ್ತು ನಾಯಿ ಮರಿಯ ಘಟನೆ ಸದ್ಯಕ್ಕೆ ತುಂಬಾ ಚರ್ಚೆಯಲ್ಲಿದೆ. ಈಗ ಅಂತಹದೇ ಒಂದು ವಿಡಿಯೋ ಬೆಳಕಿಗೆ ಬಂದಿದೆ. ಪ್ರಸ್ತುತ ವಿಡಿಯೋದಲ್ಲಿ ಒಬ್ಬ ಯುವತಿ ತನ್ನ ಸಾಕು ನಾಯಿಯನ್ನು ಕರೆದುಕೊಂಡು ಹೊರಗಡೆ ಹೋಗಬೇಕು ಅನ್ನೋ ಅಷ್ಟರಲ್ಲಿ ಒಂದು ಬೀದಿ ನಾಯಿ ಬಂದು ಮಾಡಿದ ಕೃ#ತ್ಯವನ್ನು ಕಂಡರೆ ನೀವು ಆ#ಶ್ಚರ್ಯ ಪಡುವಿರಿ.
ಪ್ರಸ್ತುತ ವಿಡಿಯೋದಲ್ಲಿ ಒಬ್ಬ ಯುವತಿ ತನ್ನ ಸುಟ್ಟಿಯ ದಿನಗಳನ್ನು ಕಳೆಯಲು ತಾಯಿ-ತಂದೆಯ ಹತ್ತಿರ ಬರುತ್ತಾಳೆ. ಯುವತಿ ತನಗೆ ಮನೆಯಲ್ಲಿ ಬೇಜಾರು ಆಗುತ್ತಿದೆ ಎಂದು ಹೊರಗಡೆ ಹೋಗಲು ನಿರ್ಧಾರ ಮಾಡುತ್ತಾಳೆ. ತದನಂತರ ಹೊರಗಡೆ ಹೋಗುವಾಗ ಆಕೆಗೆ ತಮ್ಮ ಮನೆಯಲ್ಲಿ ಸಾಕಿದ ನಾಯಿಮರಿಯನ್ನು ಸಹ ತಗೆದುಕೊಂಡು ಹೋಗಬೇಕು ಅನ್ನೋ ವಿಚಾರ ಬರುತ್ತೇ. ಸಾಕಿದ ನಾಯಿ ಮರಿ ಮನೆಯಲ್ಲಿ ಇದ್ದುದರಿಂದ ಅದರ ಹೆಸರು ತಗೆದುಕೊಂಡು ಹೊರಗಡೆ ಕೂಗುತ್ತಾಳೆ. ಈ ಯುವತಿಯ ಕೂಗನ್ನು ಕೇಳಿ ಅಲ್ಲಿದ್ದ ಒಂದು ಬೀದಿ ನಾಯಿ ಓಡೋಡಿ ಬರುತ್ತದೆ.
ಬೀದಿ ನಾಯಿ ಓಡಿ ಬಂದಿರುವದನ್ನು ನೋಡಿ ಈಕೆಗೆ ತುಂಬಾ ಖುಷಿಯಾಗುತ್ತೇ ಆ ನಾಯಿಯ ಬೆನ್ನಿನ ಮೇಲೆ ಕೈಯಾಡಿಸುತ್ತ ಅದಕ್ಕೆ ಪ್ರೀತಿ ತೋರುತ್ತಾಳೆ ನಾಯಿಯು ಸಹ ಆ ಯುವತಿಯ ಜೊತೆಗೆ ಪ್ರೀತಿಯಿಂದ ವರ್ತನೆ ಮಾಡುತ್ತದೆ. ಅಷ್ಟರಲ್ಲಿ ಒಳಗಿನಿಂದ ಯುವತಿ ಸಾಕಿದ ನಾಯಿ ಮರಿ ಓಡಿ ಬರುತ್ತದೆ. ಆ ನಾಯಿಮರಿ ಓಡಿ ಬರುವದನ್ನು ಕಂಡು ಈ ಬೀದಿ ನಾಯಿ ಸಿಟ್ಟಿಗೆದ್ದು ಕಚ್ಚಲು ಶುರು ಮಾಡುತ್ತದೆ. ಆ ನಾಯಿಮರಿಯನ್ನು ಕೆಳಗಡೆ ಹಾಕಿ ಕಚ್ಚಲು ಶುರು ಮಾಡಿದಾಗ ಈ ಯುವತಿ ಹೆದರುತ್ತಾಳೆ ಇನ್ನೇನು ನಮ್ಮ ನಾಯಿಯನ್ನು ಕೊಂದು ಬಿಡುತ್ತದೆ ಅಂದುಕೊಂಡು ಆ ನಾಯಿಮರಿಯನ್ನು ಬೀದಿ ನಾಯಿಯಿಂದ ಉಳಿಸಲು ಪ್ರಯತ್ನ ಮಾಡುತ್ತಾಳೆ. ಆದರೆ ಎಷ್ಟೇ ಬೆದರಿಸಿದರು ಆ ಬೀದಿ ನಾಯಿ ಕಚ್ಚುವದನ್ನು ಬಿಡದೆ ಇದ್ದಾಗ ನಾಯಿಮರಿಯನ್ನು ಯುವತಿ ಎತ್ತಿಕೊಳ್ಳುತ್ತಾಳೆ.
ನಾಯಿ ಮರಿಯನ್ನು ತನ್ನ ಕಂಕುಳಲ್ಲಿ ಎತ್ತಿಕೊಂಡ ನಂತರವೂ ಬೀದಿ ನಾಯಿ ಅದರ ದಾಳಿಯನ್ನು ನಿಲ್ಲಿಸಲಿಲ್ಲ ಹೊರತಾಗಿ ನಾಯಿ ಮತ್ತು ಯುವತಿಯನ್ನು ಬೆನ್ನತ್ತಿ ಕಚ್ಚಲು ಶುರು ಮಾಡುತ್ತದೆ ಸುಮಾರು ಎರಡು ನಿಮಿಷಗಳ ವರೆಗೆ ಹಾಗೆ ನಡೆಯುತ್ತದೆ ಯುವತಿ ತುಂಬಾ ಹೆದರಿಕೊಂಡು ಚಿರಲು ಶುರು ಮಾಡುತ್ತಾಳೆ ಈಕೆಯ ಧ್ವನಿಯನ್ನು ಕೇಳಿ ಬದಿಯ ಮನೆಗೆ ಅಮೆಜಾನ್ ಪಾರ್ಸಲ್ ಡೆಲಿವರಿ ಮಾಡಲು ಬಂದಿರುವ ವಾಹನದ ಡ್ರೈವರ್ ಬರುತ್ತಾನೆ. ಬಂದನಂತರ ಆ ಬೀದಿ ನಾಯಿಯ ಎದುರುಗಡೆ ನಿಂತು ಆ ಯುವತಿಯನ್ನು ಮನೆಯ ಒಳಗಡೆ ಹೋಗಲು ಸೂಚನೆ ನೀಡುತ್ತಾನೆ. ಆದರೂ ಸಹ ಈ ಬೀದಿ ನಾಯಿ ತಪ್ಪಿಸಿಕೊಳ್ಳಲು ಪ್ರಯತ್ನ ಮಾಡುತ್ತಿತ್ತು. ಯಾವಾಗ ಆ ಯುವತಿ ಮನೆಯ ಒಳಗಡೆ ಹೋಗುತ್ತಾಳೆಯೋ ಅವಾಗ ಈ ನಾಯಿ ಶಾಂತ ವಾಗುತ್ತೆ.
ವೀಡಿಯೋ ನೋಡಿ
ಪ್ರಸ್ತುತ ವಿಡಿಯೋ ವನ್ನು ring.com ಎಂಬ ಹೆಸರಿನ ಖಾತೆಯ ಮೂಲಕ ಶೇರ್ ಮಾಡಲಾಗಿದೆ. ಅಲ್ಲದೆ ಈ ವಿಡಿಯೋ ತುಂಬಾ ವೈರಲ್ ಕೂಡಾ ಆಗುತ್ತಿದೆ.