ಸಾಗರದೊಳಗಿನ ಭೀಕರತೆಗೆ ಇದು ಸಾಕ್ಷಿ: ಹಸಿವಿನಿಂದ ಕಂಗೆಟ್ಟ ಶಾರ್ಕ್ ತಿಮಿಂಗಲವನ್ನೇ ತಿನ್ನುತ್ತಿದ್ದ Video ವೈರಲ್
ಮೊದಲನೆಯದಾಗಿ ಹೇಳುವುದಾದರೆ ಈ ವೈರಲ್ ವೀಡಿಯೋ ನೋಡಿದಾಗ ಅದು ನಿಮಗೆ ಭಯಾನಕ ಎನಿಸಬಹುದು. ಆದರೆ ಇದು ಕೂಡಾ ನಮ್ಮ ಪ್ರಕೃತಿಯ ಇನ್ನೊಂದು ಮುಖ ಎನ್ನುವುದು ಕೂಡಾ ವಾಸ್ತವ. ಏಕೆಂದರೆ ಯಾವ ಪ್ರಕೃತಿಯಲ್ಲಿ ನಮಗೆ ಸುಂದರ ಹಾಗೂ ರಮಣೀಯ ಎನ್ನುವ ದೃಶ್ಯಗಳು ನೋಡುವು ಸಿಗುವುದೋ ಅದೇ ಪ್ರಕೃತಿಯಲ್ಲಿ ಭಯಾನಕವಾದ ಸನ್ನಿವೇಶಗಳು ಕೂಡಾ ನೋಡಲು ಸಿಗುತ್ತವೆ. ನಮ್ಮ ಪ್ರಕೃತಿಯ ಬಗ್ಗೆ ನಾವು ಯಾವುದನ್ನೂ ಕೂಡಾ ಊಹೆ ಮಾಡುವುದು ಸಾಧ್ಯವಿಲ್ಲ. ಪ್ರಕೃತಿ ಯಾವಾಗ ಹೇಗೆ ಬದಲಾಗುತ್ತದೆ ಎಂಬುದು ಅನೂಹ್ಯ. ಇಲ್ಲಿನ ಜೀವಿಗಳ ವೈವಿದ್ಯಮಯ ವರ್ತನೆಯನ್ನು ಕೂಡಾ ತಿಳಿಯಬೇಕಾದರೆ ದೀರ್ಘಕಾಲದ ಅಧ್ಯಯನ ಕೂಡಾ ಅನಿವಾರ್ಯ ಎನ್ನಬಹುದು. ಪ್ರಕೃತಿಯಲ್ಲಿ ಕೆಲವೊಮ್ಮೆ ಬಹಳ ಸುಂದರವಾದ ದೃಶ್ಯಗಳು ಕಂಡು ಮೈ ಮರೆಯುವಂತೆ ಮಾಡಿದರೆ, ಇನ್ನೂ ಕೆಲವೊಮ್ಮೆ ನಮ್ಮನ್ನು ದಿಗ್ಭ್ರಾಂತಿ ಉಂಟು ಮಾಡುವಂತಹ ಸನ್ನಿವೇಶಗಳು ಕೂಡಾ ಎದುರಾಗುತ್ತವೆ.
ಅದರಲ್ಲೂ ಸಮುದ್ರ ಹಾಗೂ ಸಮುದ್ರದ ಜೀವಿಗಳ ವಿಷಯಕ್ಕೆ ಬಂದರೆ, ಸಮುದ್ರವು ವಿಸ್ಮಯಗಳ ಆಗರವಾಗಿದ್ದು ಇಲ್ಲಿನ ಜೀವ ವೈವಿದ್ಯತೆಯ ಬಗ್ಗೆ ಹೇಳುವುದಾದರೆ ಅದು ಕೂಡಾ ಅದ್ಭುತವೇ ಸರಿ. ಸಣ್ಣ ಮೀನುಗಳಿಂದ ಹಿಡಿದು ಭಾರೀ ಗಾತ್ರದ ತಿಮಿಂಗಲಗಳವರೆಗಿನ ಜೀವಿಗಳಿಗೆ ಆಶ್ರಯ ತಾಣವಾಗಿದೆ ಸಮುದ್ರ. ಇಂತಹ ಸಮುದ್ರದಲ್ಲಿ ಬೇರೆಲ್ಲವುಕ್ಕಿಂತ ಹೆಚ್ಚು ಪರಭಕ್ಷಕ ಜೀವಿಗಳೆಂದರೆ ಅವು ಶಾರ್ಕ್ ಗಳು. ಅವುಗಳನ್ನು ಸಮುದ್ರದ ಹುಲಿಗಳೆಂದೇ ಕರೆಯಲಾಗುತ್ತದೆ ಕೂಡಾ. ಮೀನುಗಾರನಾಗಿರುವ ಕ್ಯಾಪ್ಟನ್ ಚಿಪ್ ಮೆಕಲೋವ್ ಎನ್ನುವವರು ಸಮುದ್ರದಲ್ಲಿ ಸತ್ತಿರುವ ತಿಮಿಂಗಲವನ್ನು ತಿನ್ನುವ ಶಾರ್ಕ್ ಅನ್ನು ನೋಡಿ ಭ ಯದಿಂದ ಆ ಘಾ ತಕ್ಕೆ ಒಳಗಾಗಿದ್ದಾರೆ.

ಇಂತಹುದೊಂದು ಘಟನೆ ನಡೆದಿರುವುದು ಅಮೆರಿಕಾದ ದಕ್ಷಿಣ ಕೆರೊಲಿನಾ ಕರಾವಳಿಯಲ್ಲಿ ಎನ್ನಲಾಗಿದೆ. ಈ ಕರಾವಳಿಯಲ್ಲೇ ಮೆಕಲೊವ್ ಅವರು ಈ ರ ಕ್ತ ಸಿ ಕ್ತ ಆಟವನ್ನು ನೋಡಿದ್ದಾರೆ. ಈ ದೃಶ್ಯಾವಳಿಗಳನ್ನು ನೋಡಿದ ಕೂಡಲೇ ಅವರು ತಡಮಾಡದೇ ಈ ವಿಷಯವನ್ನು ಔಟ್ ಕೋಸ್ಟ್ ಸ್ಪೋರ್ಟ್ ಫಿಶಿಂಗ್ ಗೆ ಮಾಹಿತಿಯನ್ನು ರವಾನೆ ಮಾಡಿದ್ದಾರೆ. ಅವರು ತಮ್ಮ ಮಾಹಿತಿಯಲ್ಲಿ ಸತ್ತು ಕೊಳೆತ ತಿಮಿಂಗಲದ ದೇಹವನ್ನು ತಿನ್ನುತ್ತಿದೆ ಎಂದು ತಿಳಿಸಿದ್ದಾರೆ. ವೀಡಿಯೋದಲ್ಲಿ ನೋಡಿದಾಗ ಮೃತ ತಿಮಿಂಗಲದ ಕುತ್ತಿಗೆಯನ್ನು ತನ್ನ ಉಗ್ರವಾದ ಮತ್ತು ತೀಕ್ಷ್ಣವಾದ ಹಲ್ಲುಗಳಿಂದ ಸೀಳುತ್ತಾ ತಿನ್ನುತ್ತಿರುವುದನ್ನು ಗಮನಿಸಬಹುದಾಗಿದೆ.
ಈ ಇಡೀ ಘಟನೆಯ ಕುರಿತಾಗಿ ನ್ಯಾಷನಲ್ ಮೆರೈನ್ ಫಿಷರೀಸ್ ಸರ್ವೀಸ್ ವರದಿಯನ್ನು ಮಾಡಿದೆ. ಅದರ ಪ್ರಕಾರ ಆ ತಿಮಿಂಗಲದ ವಯಸ್ಸು 11 ವರ್ಷ ಎನ್ನಲಾಗಿದ್ದು, ಅದೊಂದು ಗಂಡು ತಿಮಿಂಗಲವಾಗಿತ್ತು ಎನ್ನಲಾಗಿದೆ. ಇದು ಮಿರ್ಟಲ್ ಬೀಚ್ ಬಳಿ ಸತ್ತಿತ್ತು ಎಂದು ವರದಿಯಲ್ಲಿ ತಿಳಿಸಲಾಗಿತ್ತು. ಮೈಕಲೋವ್ ಮತ್ತು ಅವರ ಸಿಬ್ಬಂದಿ
ಸುಮಾರು ಮಧ್ಯಾಹ್ನ ಮೂರು ಗಂಟೆಯ ಸಮಯದಲ್ಲಿ ಶಾರ್ಕ್ ತಿಮಿಂಗಲದ ಮೃತ ದೇಹವನ್ನು ತಿನ್ನುವುದನ್ನು ಗಮನಿಸಿದ್ದಾರೆ. ಅಲ್ಲದೇ ಅಂತಹ ದೃಶ್ಯವನ್ನು ನೋಡಿದ ದಿನವು ತಮ್ಮ ಜೀವನದ ಅತ್ಯುತ್ತಮವಾದ ದಿನ ಎಂದು ಅವರು ಹೇಳಿದ್ದಾರೆ ಏಕೆಂದರೆ ಅವರು ಕೂಡಾ ಒಂದು ಸಲವಾದರೂ ಶಾರ್ಕ್ ತಿಮಿಂಗಲವನ್ನು ತಿನ್ನುವುದನ್ನು ನೋಡಲು ಬಯಸಿದ್ದರಂತೆ.