ಸಾಗರದೊಳಗೊಂದು ವಿಸ್ಮಯ ದೃಶ್ಯ: ಡ್ರೋಣ್ ಸೆರೆ ಹಿಡಿದ ದೃಶ್ಯ ನೋಡಿ ಅದ್ಬುತ ಎಂದ ನೆಟ್ಟಿಗರು! ನೋಡಿ ಈ viral video
ಕೆಲವು ವಿಸ್ಮಯಗಳನ್ನು ಅಥವಾ ಪ್ರಕೃತಿಯಲ್ಲಿನ ಸೋಜಿಗಗಳನ್ನು ನೋಡಲು ಅವಕಾಶ ಸಿಗುವುದು ನಿಜಕ್ಕೂ ಕೂಡಾ ಅದೃಷ್ಟವೇ ಸರಿ ಎನ್ನಬಹುದಾಗಿದೆ. ಆದರೆ ಸೋಶಿಯಲ್ ಮೀಡಿಯಾಗಳ ಕೊಡುಗೆ ಎನ್ನುವ ರೀತಿಯಲ್ಲಿ ಇಂತಹ ವಿಸ್ಮಯಕಾರಿ ವಿಡಿಯೋಗಳನ್ನು ನೋಡೋದಕ್ಕೆ ಸಾಧ್ಯವಾಗ್ತಿದೆ. ಜಲಚರಗಳು ಅಂದರೆ ಅವು ನಿಜಕ್ಕೂ ಪ್ರಕೃತಿಯಲ್ಲಿ ಅದ್ಭುತಗಳೇ ಸರಿ. ಅದರಲ್ಲೂ ಡಾಲ್ಫಿನ್ ಗಳು, ಬೃಹತ್ ಕಾಯದ ವೇಲ್ ಗಳನ್ನು ನೋಡಿದಾಗ ಎಂತಹ ವಿಶೇಷ ಜೀವಿಗಳು ಎನಿಸದೇ ಇರಲಾರದು. ಡಾಲ್ಫಿನ್ ಗಳು ನೀರಿನ ಸಮುದ್ರದ ನೀರಿನ ಮೇಲೆ ಮಾಡುವ ನೆಗೆತ ಬಹಳ ಆಕರ್ಷಕ ಕೂಡಾ ಹೌದು. ಆದರೆ ಅದು ಕೂಡಾ ಅಪರೂಪ ಎಂದೇ ನಾವು ಹೇಳಬಹುದು.
ಡಾಲ್ಫಿನ್ ಗಳ ನೆಗೆದಾಟ ಹಾಗೂ ವಿಶಾಲಕಾಯದ ವೇಲ್ ಗಳ ನೀರಿನಾಟ ಎರಡನ್ನೂ ಕೂಡಾ ಒಂದೇ ಸಲ ನೋಡುವುದು ಎಂದರೆ ಅದು ನಿಜಕ್ಕೂ ಅತಿ ಅಪರೂಪವಾದ ದೃಶ್ಯ ಎಂದೇ ನಾವು ಹೇಳಬಹುದು. ಏಕೆಂದರೆ ಡಾಲ್ಫಿನ್ ಗಳ ನೆಗೆತವನ್ನಾದರೂ ನೋಡಬಹುದೇನೋ ಆದರೆ ವೇಲ್ ಗಳ ನೀರಿನಾಟ ನೋಡಲು ಸಿಗುವುದು ಅಪರೂಪವೇ ಅಲ್ಲ ಅದೊಂದು ಅಸಾಧ್ಯವಾದ ದೃಶ್ಯ ಎಂದೇ ಹೇಳಬಹುದು. ಆದರೆ ಈ ಅಸಾಧ್ಯವು ಈಗ ಸುಸ್ಸಾಧ್ಯವಾಗಿದ್ದು ಸೋಶಿಯಲ್ ಮೀಡಿಯಾಗಳಲ್ಲಿ ವೀಡಿಯೋ ಒಂದು ಭರ್ಜರಿ ವೈರಲ್ ಆಗಿದೆ.
ಡ್ರೋಣ್ ಸಹಾಯದಿಂದ ಒಂದು ವೀಡಿಯೊವನ್ನು ಮಾಡಲಾಗಿದೆ. ವಿಶೇಷ ಏನು ಎಂದರೆ ಡ್ರೋಣ್ ಸರಿಯಾದ ಸಮಯದಲ್ಲಿ ಮಾಡಿದ ವೀಡಿಯೋದಿಂದಾಗಿ ಇಂತಹುದೊಂದು ಅದ್ಬುತವಾದ ದೃಶ್ಯವು ರೆಕಾರ್ಡ್ ಆಗಿದೆ. ಹೌದು ಈ ವೀಡಿಯೋದಲ್ಲಿ ನೋಡಿದಾಗ ಸಮುದ್ರದಲ್ಲಿ ಏಕಕಾಲದಲ್ಲಿ ವೇಲ್ ಗಳು ಹಾಗೂ ಡಾಲ್ಫಿನ್ ಗಳ ದೃಶ್ಯವು ಕಾಣುತ್ತದೆ. ಕೇವಲ ದೃಶ್ಯವು ಮಾತ್ರವೇ ಅಲ್ಲ, ನೀರಿನಲ್ಲಿ ಚಲಿಸುತ್ತಿರುವ ವೇಲ್ ಗಳು ಜಲಾಂತರ್ಗಾಮಿ ನೌಕೆಗಳಂತೆ ಕಂಡು ಬರುತ್ತಿವೆ.
ಡಾಲ್ಫನ್ ಗಳು ನೀರಿನಲ್ಲಿ ವೇಲ್ ಗಳಿಗಿಂತ ಸ್ವಲ್ಪ ಮುಂದೆ ಸಾಗುತ್ತಾ ನೀರಿನಿಂದ ಮೇಲೆದ್ದು ಬಂದು ನೆಗೆದು ನೀರೊಳಗೆ ಹೋದರೆ, ವೇಲ್ ಗಳು ಕೂಡಾ ತಾವೇನು ಕಡಿಮೆಯಿಲ್ಲ ಎನ್ನುವಂತೆ ನೀರಿನೊಳಗೆ ಸುತ್ತುತ್ತಾ ತಮ್ಮ ಕೌಶಲವನ್ನು ಪ್ರದರ್ಶನ ಮಾಡಿವೆ. ಅದ್ಭುತವಾದ ಈ ವೀಡಿಯೋವನ್ನು ಈಗಾಗಲೇ ಒಂದು ಲಕ್ಷ ಇಪ್ಪತ್ತೈದು ಸಾವಿರಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ಐದು ಸಾವಿರದ ಎಂಟು ನೂರನ್ನು ದಾಟಿದ ಲೈಕ್ ಗಳು ಬಂದಿರುವ ಈ ವೀಡಿಯೋವನ್ನು ಬಹಳಷ್ಟು ಜನರು ರಿಟ್ವೀಟ್ ಮಾಡುತ್ತಾ ಹಂಚಿಕೊಳ್ಳುತ್ತಿದ್ದಾರೆ. ನೂರಾರು ಜನ ವೀಡಿಯೋ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ಕೂಡಾ ನೀಡಿತ್ತಿದ್ದಾರೆ.
ವಿಡಿಯೋ ನೋಡಿ
Drone caught the exact moment when dolphin and whales are playing. 🐬pic.twitter.com/iIapyRcJK5
— Back To Nature (@backt0nature) November 16, 2020
ವೀಡಿಯೋ ನೋಡಿದ ಟ್ವಿಟರ್ ಬಳಕೆದಾರರೊಬ್ಬರು ಡಾಲ್ಫಿನ್ ಗಳು ಬಹುಶಃ ಸಣ್ಣ ಮೀನುಗಳಿಗೆ ಹುಷಾರಾಗಿರಿ ಇಲ್ಲದೇ ಹೋದರೆ ವೇಲ್ ಗಳಿಗೆ ಆಹಾರ ಆಗುವಿರೆಂದು ಸೂಚನೆ ಕೊಡುವ ಹಾಗಿದೆ ಎಂದಿದ್ದಾರೆ. ಮತ್ತೊಬ್ಬರು ಪ್ರಕೃತಿ ಸುಂದರವಾಗಿಯೇ ಉಳಿದಿದೆ ಆದರೆ ಮಾನವ ಹುಚ್ಚನಾಗುತ್ತಿದ್ದಾನೆ ಎಂದರೆ ಇನ್ನೊಬ್ಬರು ಇದೊಂದು ನಂಬಲಸಾಧ್ಯವಾದ ವೀಡಿಯೋ ಡ್ರೋಣ್ ತಂತ್ರಜ್ಞಾನದ ಸರಿಯಾದ ಬಳಕೆ ಎಂದರೆ ಇದೇ ಎಂದು ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಬಹಳಷ್ಟು ಜನರು ಇದು ಅದ್ಭುತವಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.