ಸಾಗರ ತೀರದಲ್ಲಿ ವಿಚಿತ್ರವಾದುದನ್ನು ನೋಡಿ ಬೆದರಿ ಹೋದ ಮಹಿಳೆ: ವೈರಲ್ ಫೋಟೋ ನೋಡಿ ಒಂದು ಕ್ಷಣ ಬೆಚ್ಚಿದ ನೆಟ್ಟಿಗರು!
ಸಮುದ್ರ ತೀರಗಳಲ್ಲಿ ಅನೇಕ ಪ್ರಕಾರದ ಜೀವ ಜಂತುಗಳು ವಾಸಿಸುತ್ತವೆ. ಅವುಗಳನ್ನು ನೋಡಿದಾಗ ಕೆಲವೊಮ್ಮೆ ಜನರು ಆ ವೈವಿದ್ಯಮಯ ಜೀವಿಗಳನ್ನು ನೋಡಿ ಆಶ್ಚರ್ಯಪಡುತ್ತಾರೆ ಹಾಗೂ ಇನ್ನೂ ಅನೇಕ ಬಾರಿ ಅವುಗಳನ್ನು ನೋಡಿ ಭ ಯ ಭೀ ತರಾಗುತ್ತಾರೆ. ಜನರು ಸಾಗರ ತೀರಗಳಲ್ಲಿ ರಿಲ್ಯಾಕ್ಸ್ ಮಾಡಲು, ಸಮಯ ಕಳೆಯಲು, ಮನಸ್ಸಿಗೆ ಮುದವನ್ನು ನೀಡಲು ಭೇಟಿ ನೀಡುವುದು ಉಂಟು. ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾ ಗಳಲ್ಲಿ ಕೆಲವು ಫೋಟೋಗಳು ವೈರಲ್ ಆಗಿದ್ದು, ಈ ಫೋಟೋಗಳನ್ನು ನೋಡಿದಾಗ ಇದು ಯಾವುದೇ ಪ್ರಾಣಿಯಲ್ಲ ಎನಿಸುವುದು ಮಾತ್ರವೇ ಅಲ್ಲದೇ, ಆ ಫೋಟೋಗಳನ್ನು ನೋಡಿದರೆ, ಅದರI ಬಗ್ಗೆ ಪೂರ್ತಿ ಮಾಹಿತಿ ಓದದೇ ಹೋದರೆ, ಬಹುಶಃ ನೀವು ಕೂಡ ಇದನ್ನು ಮನುಷ್ಯನ ಶ ವ ಎಂದೇ ಹೇಳುವಿರಿ.

ಸಮುದ್ರ ತೀರದಲ್ಲಿ ಸಮಯ ಕಳೆಯಲೆಂದು ಹೋಗಿದ್ದ ಮಹಿಳೆಯೊಬ್ಬರಿಗೆ ಸಮುದ್ರದ ತೀರದಲ್ಲಿ ಶವದಂತೆ ಕಾಣುವ ವಸ್ತುವೊಂದು ಕಂಡುಬಂದಿದೆ. ಆಕೆಯ ಜೊತೆಗೆ ಇದ್ದವರು ಅದನ್ನು ನೋಡಿದ ತಕ್ಷಣ ತಡಮಾಡದೆ ಪೊಲೀಸರಿಗೆ ಕರೆ ಮಾಡಿ ಈ ಮಾಹಿತಿಯನ್ನು ನೀಡಿದ್ದಾಳೆ. ಮಹಿಳೆ ತಿಳಿಸಿದ ವಿಚಾರದ ಹಿನ್ನೆಲೆಯಲ್ಲಿ ಆ ಸ್ಥಳಕ್ಕೆ ಆಗಮಿಸಿದ ಪೋಲಿಸರು ಅಲ್ಲಿ ಪರಿಶೀಲನೆ ನಡೆಸಿದ ಮೇಲೆ ಹೊರಬಂದ ವಿಷಯ ಮಾತ್ರ ವಿಸ್ಮಯ ಅಥವಾ ವಿಭಿನ್ನವಾಗಿದೆ ಎಂತಲೇ ನಾವು ಹೇಳಬಹುದಾಗಿದೆ. ಈ ವಿಚಿತ್ರ ಘಟನೆಯ ಫೋಟೋಗಳನ್ನು ಓಷನ್ ಅವರ್ ಎನ್ನುವ ಫೇಸ್ಬುಕ್ ಪೇಜಿನಲ್ಲಿ ಹಂಚಿಕೊಳ್ಳಲಾಗಿದೆ.
ಈ ದೃಶ್ಯಗಳನ್ನು ನೋಡಿದಾಗ ನಮಗೂ ಕೂಡ ಒಂದು ಕ್ಷಣ ಅದು ನಿಜವಾಗಿಯೂ ಒಂದು ಶವ ಎಂದೇ ಅನಿಸುತ್ತದೆ. ಅದೇ ರೀತಿ ಅಲ್ಲಿದ್ದ ಜನರಿಗೂ ಕೂಡ ಅನಿಸಿತ್ತು. ಆದರೆ ವಾಸ್ತವದಲ್ಲಿ ಅದು ಶವ ಅಲ್ಲದೆ ಬೇರೇನೋ ಆಗಿತ್ತು ಎನ್ನುವ ಈ ವಿಷಯ ಪೊಲೀಸರು ಸ್ಥಳಕ್ಕೆ ಬರುವವರೆಗೂ ಕೂಡಾ ಯಾರಿಗೂ ತಿಳಿಯಲಿಲ್ಲ. ಆದರೆ ಪೊಲೀಸರು ಅಲ್ಲಿಗೆ ಬಂದು ಅದದ ಪರಿಶೀಲನೆ ನಡೆಸಿದ ನಂತರ ಅವರು ಅದು ಶ ವ ಅಲ್ಲವೆಂದು ತಿಳಿಸಿದ ಮೇಲೆ ಅಲ್ಲಿದ್ದ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಈ ಫೋಟೋಗಳನ್ನು ಶೇರ್ ಮಾಡಿದ ಪೇಜಿನಲ್ಲಿ ಫೋಟೋಗಳ ಜೊತೆ ಈ ಚಿತ್ರಗಳಿಗೆ ಸಂಬಂಧಿಸಿದ ಹಾಗೆ ಎಲ್ಲಾ ಮಾಹಿತಿಯನ್ನು ಹಂಚಿಕೊಂಡು ವಿವರಣೆ ನೀಡಿದ್ದಾರೆ.

ವ್ಯಾಲೆಂಟಿಯರ್ ಕ್ಯಾಥ್ಲೀನ್ ಪೆರಿಡೋ ಬೀಚ್ ನ ಇಂಟರ್ಕೋಸ್ಟಲ್ ಸೈಡ್ ನಲ್ಲಿ ಮಹಿಳೆಯೊಬ್ಬರು ಓಡಾಡುತ್ತಿರುವಾಗ, ಅವರು ಸ್ವಲ್ಪ ದೂರದಲ್ಲಿ ಮೃ ತ ದೇಹ ದಂತೆ ಕಾಣುವ ವಸ್ತುವೊಂದನ್ನು ನೋಡಿದ್ದಾರೆ. ಕೂಡಲೇ ಅಲ್ಲೇ ಇದ್ದ ಮತ್ತೊಬ್ಬರು ಪೊಲೀಸರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಅದೇನೆಂದು ಪರಿಶೀಲನೆ ಮಾಡಲು ಅದೊಂದು ಬೊಂಬೆ ಎಂದೂ, ಸಮುದ್ರದಲ್ಲಿ ಬಿದ್ದಿದ್ದರಿಂದ ಕಸ ಕಡ್ಡಿಯೆಲ್ಲವೂ ಅದಕ್ಕೆ ಸುತ್ತಿಕೊಂಡಿದ್ದು, ಸಾಗರದಲೆಗಳ ಹೊಡೆತಕ್ಕೆ ತೀರಕ್ಕೆ ಬಂದು ಬಿದ್ದಿದೆ ಎಂದೂ, ದೂರದಿಂದ ನೋಡಲು ಶ ವ ದಂತೆ ಕಂಡಿದೆ ಎಂಬುದನ್ನು ತಿಳಿಸಿದ್ದಾರೆ.

ಈ ಫೋಟೋಗಳನ್ನು ಇದೇ ನವೆಂಬರ್ 16 ರಂದು ಫೇಸ್ ಬುಕ್ ಪೇಜ್ ನಲ್ಲಿ ಶೇರ್ ಮಾಡಲಾಗಿತ್ತು. ಈ ಫೋಟೋಗಳನ್ನು ನೋಡಿ ಸುಮಾರು 2,300 ಕ್ಕಿಂತ ಅಧಿಕ ಜನ ಪ್ರತಿಕ್ರಿಯೆಗಳನ್ನು ನೀಡಿದ್ದರೆ, 3300,ಸಾವರಿಕ್ಕಿಂತ ಅಧಿಕ ಮಂದಿ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋಗಳನ್ನು ನೋಡಿದ ಫೇಸ್ಬುಕ್ ಬಳಕೆದಾರರೊಬ್ಬರು, ಇದನ್ನು ನೋಡಿ ನಾನು ಭ ಯ ಪಟ್ಟೆ, ಅಲ್ಲದೇ ಇದನ್ನು ಮೊದಲು ನೋಡಿದ ಯುವತಿಯ ಸ್ಥಿತಿ ಏನಾಗಿರಬಹುದೆಂದು ಅಂದುಕೊಂಡೆ ಎಷ್ಟು ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೊಬ್ಬರು ನಾನು ಇದನ್ನು ಮನೆಗೆ ತೆಗೆದುಕೊಂಡು ಹೋಗಲು ಬಯಸುತ್ತೇನೆ ಹೊಲೊವೀನ್ ಡೆಕೋರೇಷನ್ ಮಾಡಲು ಇದು ಬಳಕೆಯಾಗುತ್ತದೆ ಎಂದಿದ್ದಾರೆ. ಹೀಗೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ತಮ್ಮ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.