ಸಾಯುವ ಮುನ್ನ ನೆರೆಹೊರೆಯವರನ್ನು ಕೋಟ್ಯಾಧಿಪತಿಗಳನ್ನಾಗಿ ಮಾಡಿದ ಹಿರಿಯ ಮಹಿಳೆ: ನಿಜಕ್ಕೂ ಆಕೆ ಮಾಡಿದ್ದೇನು?

ನಾವು ಎಲ್ಲಾದರೂ ಒಂದೆಡೆ ನಮ್ಮ ಮನೆಯನ್ನು ಮಾಡಿಕೊಂಡರೆ ಅಲ್ಲಿ ನಮ್ಮ ಅಕ್ಕ ಪಕ್ಕ ನಮಗೆ ಕೆಲವು ಸಲ ಎಂತಹವರು ಸಿಗುತ್ತಾರೆ ಎಂದರೆ ಅವರೊಂದಿಗೆ ಕೆಲವೇ ದಿನಗಳಲ್ಲಿ ನಮಗೆ ಒಂದು ಉತ್ತಮವಾದ ಬಾಂಧವ್ಯವು ಕೂಡಾ ಏರ್ಪಡುತ್ತದೆ. ಇಷ್ಟೇ ಅಲ್ಲ ಅನೇಕ ಸಂದರ್ಭಗಳಲ್ಲಿ ನಾವು ಕೂಡಾ ಕೆಲವು ಕಡೆ ನೆರೆ ಹೊರೆಯವರು ಬಹಳ ಆತ್ಮೀಯವಾಗಿ ಜೀವನವನ್ನು ನಡೆಸುವುದನ್ನು ನಾವು ನೋಡಬಹುದು. ಅದು ಆ ಬಾಂಧವ್ಯವು ಹೇಗಿರುತ್ತದೆ ಎಂದರೆ ಅನೇಕ ಸಂದರ್ಭಗಳಲ್ಲಿ ಅವರೆಲ್ಲಾ ಒಟ್ಟಾಗಿ ಎಂತಹ ಪರಿಸ್ಥಿತಿಯನ್ನೂ ಕೂಡಾ ಎ ದುರಿ ಸಲು ಸಜ್ಜಾಗುತ್ತಾರೆ, ಅಲ್ಲದೇ ತಮ್ಮ ಸುಖ ಸಂತೋಷಗಳಲ್ಲಿ ಕೂಡಾ ಅವರು ಜೊತೆಯಾಗಿದ್ದು ಬಹಳ ಹಬ್ಬ ಹರಿದಿನಗಳನ್ನು ಕೂಡಾ ಎಲ್ಲರೂ ಒಟ್ಟಿಗೆ ಸೇರಿ ಸಂಭ್ರಮದಿಂದ ಆಚರಣೆ ಮಾಡುವುದು ಕೂಡಾ ನಾವು ನೋಡಬಹುದಾಗಿದೆ‌. ‌

ಹೀಗೆ ಹಬ್ಬ ಹರಿದಿನಗಳನ್ನು ಒಟ್ಟಿಗೆ ಆಚರಿಸುವಾಗ ಒಬ್ಬರು ಮತ್ತೊಬ್ಬರಿಗೆ ಉಡುಗೊರೆಗಳನ್ನು ಕೂಡಾ ನೀಡುವುದು ಅಭ್ಯಾಸ ಅಥವಾ ಕೆಲವು ಕಡೆ ಅದೊಂದು ಸಂಪ್ರದಾಯವು ಕೂಡಾ ಆಗಿರುತ್ತದೆ.‌ ಇಂದು ನಾವು ಹೇಳಲು ಹೊರಟಿರುವುದು ಕೂಡಾ ನೆರೆಹೊರೆಯವರಿಗೆ ಒಬ್ಬರು ನೀಡಿದ ಉಡುಗೊರೆಯ ಬಗ್ಗೆಯೇ. ಆದರೆ ಇಲ್ಲಿ ನೀಡಿರುವ ಉಡುಗೊರೆಯ ಬಗ್ಗೆ ತಿಳಿದರೆ ನಿಜಕ್ಕೂ ಅಚ್ಚರಿ ಆಗುವುದು ಮಾತ್ರ ಖಂಡಿತ. ಹಾಗಾದರೆ ಅಕ್ಕ ಪಕ್ಕದವರಿಗೆ ಸಿಕ್ಕ ಅಂತಹ ವಿಶೇಷವಾದ ಉಡುಗೊರೆ ಏನೆಂದು ನಾವು ತಿಳಿಯೋಣ ಬನ್ನಿ. ಇಂತಹ ಒಂದು ವಿಶೇಷ ಘಟನೆ ನಡೆದಿರುವುದು ಜರ್ಮನಿಯಲ್ಲಿ. ಇಲ್ಲಿನ ಮಹಿಳೆಯೊಬ್ಬರು ತಮ್ಮ ನೆರೆ ಹೊರೆಯವರಿಗೆ ನೀಡಿದ ಗಿಫ್ಟ್ ಇದೀಗ ದೊಡ್ಡ ಸುದ್ದಿಯಾಗಿ ಎಲ್ಲರ ಗಮನವನ್ನು ಸೆಳೆಯುತ್ತಿದೆ.

ಮಹಿಳೆಯ ಹೆಸರು ರೆನೆಟ್ ವೆಡಲ್ ಎಂದಾಗಿದ್ದು ಈಕೆ ತನ್ನ ಸುಮಾರು 55 ಕೋಟಿ ರೂಪಾಯಿಗಳ ಆಸ್ತಿಯನ್ನು ತನ್ನ ನೆರೆ ಹೊರೆಯವರ ಹೆಸರಿಗೆ ಮಾಡುವ ಮೂಲಕ ಎಲ್ಲರಲ್ಲೂ ಅಚ್ಚರಿಯನ್ನು ಮೂಡಿಸಿದ್ದಾರೆ.‌ ಈ ಮೊತ್ತವನ್ನು ಡಾಲರ್ ಗಳ ಲೆಕ್ಕದಲ್ಲಿ ಹೇಳುವುದಾದರೆ 7.5 ಮಿಲಿಯನ್ ಡಾಲರ್ ಗಳು ಎನ್ನಲಾಗಿದೆ. ರೆನೆಟ್ ವೆಡಲ್ ಅವರು ಈ ಎಲ್ಲಾ ಆಸ್ತಿಯನ್ನು ಕೂಡಾ ತಮ್ಮ ನೆರೆ ಹೊರೆಯವರಿಗೆ ಎಲ್ಲವನ್ನೂ ಉಡುಗೊರೆಯಾಗಿ ನೀಡಿ ಹೋಗಿದ್ದಾರೆ. ರೆನೆಟಾ ಒಬ್ಬ ವಿವಾಹಿತ ಮಹಿಳೆಯಾಗಿದ್ದರು. ಆಕೆ ತನ್ನ ಪತಿ ಆಲ್ಪ್ರೆಡ್ ವೀಡೆಲ್ ಅವರ ಜೊತೆಗೆ ವಾಯ್ಪರ್ ಪೆಲ್ಡನ್ ನಲ್ಲಿ ವಾಸ ಮಾಡುತ್ತಿದ್ದರು. ಇವರ ಪತಿ ಆಲ್ಪ್ರೆಡ್ ಒಂದು ಸ್ಟಾಕ್ ಎಕ್ಸ್ಚೇಂಜ್ ನಲ್ಲಿ ಒಬ್ಬ ಬ್ಯುಸಿನೆಸ್ ಮ್ಯಾನ್ ಆಗಿದ್ದವರು. ಆದರೆ ದು ರಾ ದೃ ಷ್ಟ ಏನೆಂದರೆ ಆಕೆಯ ಪತಿ ರೆನಟಾ ಅವರನ್ನು 2014 ರಲ್ಲಿ ಅಗಲಿ ಇಹಲೋಕವನ್ನು ತ್ಯಜಿಸಿಬಿಟ್ಟರು.

ರೆನೆಟಾ ಒಬ್ಬಂಟಿಯಾದರು. ಹೀಗೆ ಕೆಲವು ಕಾಲ ಒಂಟಿಯಾಗಿ ಜೀವನ ನಡೆಸುತ್ತಾ ಇದ್ದ ರೆನೆಟಾ ಅವರ ಆರೋಗ್ಯ ಕೂಡಾ ಕ್ರಮೇಣ ಕೆಡುತ್ತಾ ಹೋಯಿತು.
ಪತಿ ಅಗಲಿದ ನಂತರ ಹೀಗೆ ಆರೋಗ್ಯ ಹದಗೆಟ್ಟ ಕಾರಣ ಆಕೆ ಕೂಡಾ 2020 ರಲ್ಲಿ ಎಲ್ಲರನ್ನೂ ಅಗಲಿದರು.‌ ರೆನೆಟಾ ಅವರಿಗೆ ಫ್ರಾಂಕ್ ಫರ್ಟ್ ನ ಒಂದು ಮನೆಯಲ್ಲಿ ದೀರ್ಘ ಕಾಲದವರೆಗೆ ಚಿಕಿತ್ಸೆ ನಡೆಯುತ್ತಿತ್ತು. ಆದರೆ ಅದು ಯಶಸ್ವಿ ಆಗಲಿಲ್ಲ. ಇನ್ನು ರೆನೆಟಾ‌ ನಿ ಧ ನ ದ ನಂತರ ಅಲ್ಲಿನ ಸ್ಥಳೀಯ ಆಡಳಿತವು ರೆನೆಟಾ ಅವರ ಆಸ್ತಿಯ ಬಗ್ಗೆ ವಿವರಗಳನ್ನು ತೆಗೆಸಿದಾಗ ಅಲ್ಲೊಂದು ಅಚ್ಚರಿ ಕಾದಿತ್ತು.

ರೆನೆಟಾ ತಾನು ಸಾ ಯು ವ ಮೊದಲು ಒಂದು ವಿಲ್ ಬರೆಸಿದ್ದರು. ಅದರಲ್ಲಿ ಆಕೆಯ ಬ್ಯಾಂಕ್ ಬ್ಯಾಲೆನ್ಸ್, ಶೇರ್ಸ್ ಹಾಗೂ ಉಳಿದ ಆಸ್ತಿಯ ವಿವರಗಳ ಜೊತೆಗೆ ಆಕೆ ತನ್ನ ಎಲ್ಲಾ ಸಂಪತ್ತನ್ನು ತನ್ನ ನೆರೆ ಹೊರೆಯವರ ಹೆಸರಿಗೆ ಮಾಡುವುದರ ಜೊತೆಗೆ ಒಂದು ಷರತ್ತನ್ನು ಕೂಡಾ ವಿಧಿಸಿದ್ದರು. ರೆನೆಟಾ ತಮ್ಮ ವಿಲ್ ನಲ್ಲಿ ನೆರೆ ಹೊರೆಯವರು ಯಾರೂ ಕೂಡಾ ಸಂಪತ್ತನ್ನು ಸ್ವಂತಕ್ಕಾಗಿ ಬಳಸದೆ ಸಾಮಾಜಿಕ ಕಾರ್ಯಗಳನ್ನು ಹಾಗೂ ನೆರೆ ಹೊರೆಯ ಅಭಿವೃದ್ಧಿಗೆ ಬಳಸಿಕೊಳ್ಳುವ ಹಾಗೆ ಷ ರ ತ್ತನ್ನು ವಿಧಿಸಿ ಹೋಗಿದ್ದಾರೆ. ಈಗ ಈ ಸಂಪತ್ತನ್ನು ಸರಿಯಾಗಿ ಬಳಸಿಕೊಳ್ಳುವ ಜವಾಬ್ದಾರಿ ನೆರೆ ಹೊರೆಯವರದ್ದಾಗಿದೆ.