ಸಾವಿರಾರು ಕೋಟಿಗಳ ಒಡೆಯನಾಗಿದ್ದರೂ ಅಮಿತಾಬ್ ಬಚ್ಚನ್ ತನ್ನ ತಂದೆಯ ಕನಸಿನ ‘ಈ’ ಮನೆಯನ್ನು ಖರೀದಿಸಲು ಇನ್ನೂ ಸಾಧ್ಯವಾಗಿಲ್ಲ, ಏಕೆಂದರೆ..

ಬಿಗ್ ಬಿ, ಮಹಾನಾಯಕ, ಶಹೆಂಶಃ, ಶತಮಾನದ ಸೂಪರ್ಸ್ಟಾರ್ ಹೀಗೆ ಅನೇಕ ಬಿರುದುಗಳನ್ನು ತಮ್ಮ ಹೆಸರಿಗೆ ಸೇರಿಸಿಕೊಂಡವರು ಅಮಿತಾಬ್ ಬಚ್ಚನ್. ತಮ್ಮ ಜೀವನದುದ್ದಕ್ಕೂ ಅನೇಕ ಏರಿಳಿತಗಳನ್ನು ಕಂಡು ಅವುಗಳಿಂದ ಯಶಸ್ವಿಯಾಗಿ ಪಾರಾಗಿ ಇವತ್ತು ಸಾವಿರಾರು ಕೋಟಿಗಳ ಒಡೆಯರಾಗಿ ಯಶಸ್ವಿ ಜೀವನ ನಡೆಸುತ್ತಿದ್ದಾರೆ. ಇಷ್ಟೆಲ್ಲಾ ಸಂಪತ್ತು ಇದ್ದರೂ ಅವರ ತಂದೆಯ ಕನಸಿನ ಮನೆಯೊಂದನ್ನು ಮಾತ್ರ ಇಲ್ಲಿಯವರೆಗೆ ಖರೀದಿಸಲು ಅಮಿತಾಬ್ ಅವರಿಗೆ ಸಾಧ್ಯವಾಗಿಲ್ಲ. ಅದು ಯಾವ ಕಾರಣದಿಂದ ಹೇಗೆ ಖರೀದಿಸಲಾಗುತ್ತಿಲ್ಲ ಎಂಬುದಕ್ಕೆ ಈ ಲೇಖನದಲ್ಲಿ ಮಾಹಿತಿ ಇದೆ ನೋಡಿ.

ಇಂದು ಅಮಿತಾಬ್ ಅವರು ಬರೀ ಬೆರಳುಗಳಿಂದ ಚಿಟಿಕೆ ಹೊಡೆದರೆ ಸಾಕು ಅವರು ಮನಸು ಮಾಡಿದ ಪ್ರತಿಯೊಂದು ವಸ್ತುವನ್ನು ಕ್ಷಣಾರ್ಧದಲ್ಲಿ ಖರೀದಿಸಬಹುದಾಗಿದೆ. ಆದರೆ ಅವರ ಚಿಕ್ಕಂದಿನ, ಬಾಲ್ಯದ ಜೀವನವನ್ನು ಕಳೆದ ಸವಿನೆನಪಿನ ಅಲಹಾಬಾದ್ ನ ಹಳೆಯ ಬಂಗಲೆಯನ್ನು ಖರೀದಿಸುವ ಕನಸು ಮಾತ್ರ ನನಸಾಗುತ್ತಿಲ್ಲ.

ಅಮಿತಾಬ್ ಅವರು ಒಮ್ಮೆ ಸೋಶಿಯಲ್ ಮೀಡಿಯಾದಲ್ಲಿ ತಾವು ಖರೀದಿಸಲು ಪ್ರಯತ್ನಿಸುತ್ತಿರುವ ಬಂಗಲೆಯ ಫೋಟೋ ಒಂದನ್ನು ಶೇರ್ ಮಾಡಿ, ಒಂದು ಸಮಯದಲ್ಲಿ ಈ ಬಂಗಲೆಯ 1/4 ಭಾಗವನ್ನು ನಾವು ಉಪಯೋಗಿಸುತ್ತಿದ್ದೆವು. ಅಲಹಾಬಾದ್ ನ 17 ಕ್ಲೈವ್ ರೋಡ್ ನಲ್ಲಿರುವ ನಮ್ಮ ಮನೆ ಎಂದು ಬರೆದಿದ್ದರು. ತಮ್ಮ ತಂದೆಯ ಸವಿನೆನಪಿಗಾಗಿ ಈ ಬಂಗಲೆಯನ್ನು ಖರೀದಿಸಲು ಅನೇಕ ಸಲ ಯತ್ನಿಸಿ ವಿಫಲರಾಗಿದ್ದಾರೆ.

ಮೀಡಿಯಾ ರಿಪೋರ್ಟ್ ಗಳ ಪ್ರಕಾರ ಹೆಸರಾಂತ ವಕೀಲರಾದ ಶಂಕರ್ ತಿವಾರಿಯವರು ಈ ಬಂಗಲೆಯ ಮಾಲೀಕರಾಗಿದ್ದರು. ಸದ್ಯ ಅವರು ತೀರಿಕೊಂಡಿದ್ದಾರೆ. ಅವರು ಸಾಯುವ ಮುನ್ನ ಟ್ರಸ್ಟ್ ಒಂದನ್ನು ಸ್ಥಾಪಿಸಿ ಈ ಬಂಗಲೆಯನ್ನು ಟ್ರಸ್ಟಿಗೆ ಕೊಟ್ಟಿದ್ದಾರೆ. ಹೀಗಾಗಿ ಸದ್ಯ ಬಂಗಲೆಯು ಟ್ರಸ್ಟಿನ ಮಾಲಿಕತ್ವದಲ್ಲಿದೆ. ಮತ್ತು ಬಂಗಲೆಯಲ್ಲಿ ಈಗ ಯಾರೂ ವಾಸಿಸುವುದಿಲ್ಲ. ಆದರೆ ಬಂಗಲೆಯ ಉಸ್ತುವಾರಿಯನ್ನು ಕೆ ಕೆ ಪಾಂಡೆ ಹೆಸರಿನ ವಕೀಲರೊಬ್ಬರು ನೋಡಿಕೊಳ್ಳುತ್ತಾರೆ. ಇವರು ಶಂಕರ್ ತಿವಾರಿಯವರ ಆಪ್ತರಲ್ಲಿ ಒಬ್ಬರಾಗಿದ್ದರು. ಅಮಿತಾಬ್ ಅವರ ದುರದೃಷ್ಟ ನೋಡಿ ಪ್ರತಿಯೊಂದು ವಸ್ತು ಮಾರಾಟಕ್ಕೆ ಇರುವುದಿಲ್ಲ, ಹಾಗೆಯೇ ಪ್ರತಿಯೊಂದು ವಸ್ತು ಹಣದಿಂದ ಖರೀದಿಸಲು ಸಾಧ್ಯವಿಲ್ಲ ಎಂಬಂತಾಗಿದೆ.

ಈ ಬಂಗಲೆ ಬಗ್ಗೆ ಹೇಳಬೇಕಾದರೆ, ಇದು ಒಂದು ಪ್ರಶಸ್ತವಾದ ಸುಂದರ ಬಂಗಲೆಯಿದೆ. ಇಲ್ಲಿ 30 ದೊಡ್ಡ ದೊಡ್ಡ ಕೋಣೆಗಳಿವೆ. ಈ ಬಂಗಲೆಯಲ್ಲಿ ಪ್ರವೇಶ ಮಾಡಲು ಒಟ್ಟು 10 ಎಂಟ್ರಿ ಗೇಟ್ ಗಳಿವೆ. ಈ ಕಾರಣದಿಂದ ಈ ಬಂಗಲೆಗೆ 10 ದ್ವಾರಗಳ ಬಂಗಲೆ ಅಂತಲೂ ಕರೆಯುತ್ತಾರೆ.