ಸಿಂಹದ ಮರಿಗೆ ಹಾಲು ಕುಡಿಸುತ್ತಿರುವ ಚಿಂಪಾಜಿಯ ವಿಡಿಯೋ ವೈರಲ್!

ಜಗತ್ತಿನಲ್ಲಿಯೇ ಅತ್ಯಂತ ಪ್ರೀತಿಯ ಸಂಬಂಧ ಯಾವುದು? ಎಂದು ನಿಮಗೆ ಕೇಳಿದರೆ ನಿಶ್ಚಿತವಾಗಿ ನೀವು ಹೇಳುತ್ತೀರಿ ಮಮತಾಮಯಿಯಾದ ತಾಯಿಯ ನಿಸ್ವಾರ್ಥವಾದ ಸಂಬಂಧ ಎಂದು. ತಾಯಿ ತನ್ನ ಮಗುವಿನ ಮೇಲೆ ನಿಸ್ವಾರ್ಥದಿಂದ ಪ್ರೀತಿ ಮಾಡುತ್ತಾಳೆ. ಅಮ್ಮಾ ಅಂದಕೂಡಲೇ ತನ್ನ ಮಗುವನ್ನು ತನ್ನ ಜೀವಕ್ಕಿಂತ ಹೆಚ್ಚು ಪ್ರೀತಿಯಿಂದ ನೋಡಿಕೊಳ್ಳುವಳು.

ಇಂಥದೇ ಒಂದು ಸುಂದರವಾದ ವಿಡಿಯೋ ಸದ್ಯಕ್ಕೆ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಒಂದು ಚಿಂಪಾಂಜಿ ಒಂದು ಚಿಕ್ಕ ಸಿಂಹದ ಮರಿಗೆ ಹಾಲು ಕುಡಿಸುತ್ತಿದೆ. ಈ ಮರಿಯನ್ನು ತನ್ನ ಸ್ವಂತ ಮರಿಯಂತೆ ಪ್ರೀತಿಯಿಂದ ಸಾಕಿ ಸಲಹುತ್ತಿದೆ.

ಐಎಎಸ್ ಅಧಿಕಾರಿ ಸುಶಾಂತ್ ನಂದಾ ಮತ್ತು ಪ್ರಿಯಾಂಕಾ ಶುಕ್ಲಾ ಇವರು ತಮ್ಮ ಟ್ವಿಟ್ಟರ್ ನಲ್ಲಿ ಈ ವಿಡಿಯೋ ಶೇರ್ ಮಾಡಿದ್ದಾರೆ. ಈ ವಿಡಿಯೋ ನೋಡಿ ಪ್ರತಿಯೊಬ್ಬರ ಮುಖದಲ್ಲಿ ಅವರಿಗೆ ತಿಳಿಯದ ಹಾಗೆ ಪ್ರೀತಿಯ ಮಂದಹಾಸ ಮೂಡುತ್ತದೆ.

ವಿಡಿಯೋ ನಲ್ಲಿ, ಚಿಂಪಾಂಜಿ ಹಾಲಿನ ಬಾಟಲ್ ನಿಂದ ಸಿಂಹದ ಮರಿಗೆ ಹಾಲು ಕುಡಿಸುತ್ತಿದೆ. ಈ ವಿಡಿಯೋ ಸದ್ಯಕ್ಕೆ ಸೋಶಿಯಲ್ ಮಿಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ. ಇದುವರೆಗೆ ಸುಮಾರು ಲಕ್ಷಕ್ಕಿಂತ ಹೆಚ್ಚು ಯೂಜರ್ಸ್ ಈ ವಿಡಿಯೋ ವನ್ನು ವೀಕ್ಷಣೆ ಮಾಡಿದ್ದಾರೆ. ಅನೇಕರು ಇದರ ಮೇಲೆ ಬೇರೆಬೇರೆಯಾದ ಪ್ರತಿಕ್ರಿಯೆ ನೀಡಿದ್ದಾರೆ.