ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ ಟೀಚರ್ ಜೊತೆಗೆ ಈ ಪುಟ್ಟ ಮಗು ನಡೆಸಿದ ವಾಗ್ವಾದದ ವಿಡಿಯೋ!! ನೀವು ಸಹ ನೋಡಿ ಮಗುವಿನ ಧೈರ್ಯ…..!!
‘ಇಂದಿನ ಬಾಲಕ ನಾಳಿನ ನಾಗರಿಕ’ ಅನ್ನೋ ಹಾಗೆ ಇಂದಿನ ಬಾಲಕ/ಬಾಲಕಿಯರು ಮುಂದೆ ನಮ್ಮ ದೇಶದ ಪ್ರಜೆಗಳಾಗುತ್ತಾರೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಅನ್ನೋ ಹಾಗೆ ಮಕ್ಕಳು ಸಹ ಬೆಳೆಯುವ ಮುನ್ನ ಅವರಿಗೆ ಉತ್ತಮವಾದ ಸಂಸ್ಕಾರ ಮತ್ತು ಶಿಕ್ಷಣ ನೀಡುವದು ಇಂದು ತುಂಬಾ ಮಹತ್ವದ್ದಾಗಿದೆ. ಏಕೆಂದರೆ ಇಂದು ನಾವು ಏನೇ ಸಾಧನೆ ಮಾಡಬೇಕಾದರೆ ಶಿಕ್ಷಣ ಬೇಕೇ ಬೇಕು. ಅದೆಷ್ಟೋ ಜನರು ಶಿಕ್ಷಣ ಪಡೆಯಲಾಗದೆ ಮುಂದೆ ದೊಡ್ಡವರಾದ ಮೇಲೆ ತಮ್ಮಷ್ಟಕ್ಕೆ ತಾವು ಅಜ್ಞಾನಿ ಎಂದು ಭಾವಿಸುತ್ತಾರೆ.
ನಮ್ಮ ಮಕ್ಕಳನ್ನು ಶಿಕ್ಷಣ ಪಡೆಯಲು ಶಾಲೆಗೆ ಕಳುಹಿಸುತ್ತೇವೆ. ಆದರೆ ‘ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು’ ಈ ಮಾತನ್ನು ಮೊದಲು ನಾವು ನೆನಪಿನಲ್ಲಿಟ್ಟುಕೊಂಡು ನಮ್ಮ ಮಕ್ಕಳನ್ನು ಬೆಳೆಸಬೇಕು. ಇಂದಿನ ಮಕ್ಕಳು ತುಂಬಾ ಸ್ಮಾರ್ಟ್ ಆಗಿರುತ್ತಾರೆ ಅಂದರೆ ಅವರ ಬುದ್ಧಿ ತುಂಬಾ ಚುರುಕಾಗಿರುತ್ತದೆ ಹೀಗಾಗಿ ತಂದೆ ತಾಯಿಯಗಳು ಮಾಡುವ ಪ್ರತಿಯೊಂದು ಕಾರ್ಯ, ನಡುವಳಿಕೆ, ಮಾತುಕತೆ ಇವೆಲ್ಲ ಆ ಮಗು ಅನುಕರಣೆ ಮಾಡುತ್ತಿರುತ್ತದೆ. ಇದರ ಪರಿಣಾಮ ಆ ಮಗುವಿನ ಬೆಳೆವಣಿಗೆಯ ಮೇಲೆ ಬೀಳುತ್ತದೆ. ಅದಕ್ಕಾಗಿ ಇಂದು ನಮ್ಮ ಮಕ್ಕಳ ಎದುರು ಉತ್ತಮವಾದ ಸಂಸ್ಕಾರ ಮತ್ತು ಒಳ್ಳೆಯ ಮಾತುಕತೆ, ಒಳ್ಳೆಯ ನಡತೆ ತೋರುವದು ತುಂಬಾ ಅವಶ್ಯಕ ವಾಗಿದೆ.
ನಮ್ಮ ಮಕ್ಕಳ ಎದುರು ಸದಾ ನಾವು ಜಗಳ ಆಡುವದು, ಕೋಪ ಗೊಳ್ಳುವದು, ಬಾಯಿಗೆ ಬಂದ ಹಾಗೆ ಮತನಾಡುವದು ಹೀಗೆಲ್ಲಾ ಮಾಡುತ್ತಿದ್ದರೆ ಆ ಮಗು ಸಹ ಅದೇ ರೀತಿಯಾಗಿ ಮಾಡುತ್ತದೆ. ಹೀಗಾಗಿ ಚಿಕ್ಕ ಮಕ್ಕಳ ಮೇಲಿನ ಸಂಸ್ಕಾರ ಕೆ#ಡುತ್ತದೆ. ಅಲ್ಲದೆ ಆ ಮಗು ಸರಿಯಾಗಿ ಶಿಕ್ಷಣ ಸಹ ಕಲಿಯುವದಿಲ್ಲ. ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ತುಂಬಾನೇ ವೈರಲ್ ಆಗುತ್ತಿದೆ. ಈ ಪ್ರಸ್ತುತ ವೀಡಿಯೋ ಒಂದು ಶಾಲೆಯಲ್ಲಿಯ ಪುಟ್ಟ ಬಾಲಕಿ ಮತ್ತು ಟೀಚರ್ ನಡುವೆ ನಡೆದ ವಾಗ್ವಾದದ ವಿಡಿಯೋ ಇದಾಗಿದೆ.
ಪ್ರಸ್ತುತ ವಿಡಿಯೋದಲ್ಲಿ ಟೀಚರ್ ಈ ಬಾಲಕಿಗೆ ಬರೆಯಲು ಹೇಳುತ್ತಾರೆ, ಆಗ ಬಾಲಕಿ ಕೋಪಗೊಂಡು, ಅಳುತ್ತಾ ಟೀಚರ್ ಎದುರುಗಡೆ ಬಂದು ನಿಂತು, ಟೀಚರ್ ಗೆ ಕೆಲವು ಪ್ರಶ್ನೆಗಳು ಕೇಳಲು ಶುರು ಮಾಡುತ್ತಾಳೆ. ಆದರೂ ಟೀಚರ್ ತುಂಬಾ ಪ್ರೀತಿಯಿಂದ ಈ ಪುಟ್ಟ ಬಾಲಕಿಯನ್ನು ಸಮಸ್ಯೆ ಏನೆಂದು ಕೇಳುತ್ತಾರೆ. ಆದರೆ ಎಷ್ಟೇ ಏನೆಲ್ಲಾ ಕೇಳಿದರು ತದ್ವಿರುದ್ಧವಾಗಿ ಉತ್ತರ ನೀಡುತ್ತಾಳೆ. ಈ ಪುಟ್ಟ ಬಾಲಕಿಯ ಮಾತು ತುಂಬಾ ಮೃದುವಾಗಿದ್ದು ನಿಮಗೂ ಸಹ ಇಷ್ಟವಾಗುತ್ತೆ ಈ ಹುಡುಗಿಯ ಮಾತು ಮತ್ತು ವರ್ತನೆ.
ವಿಡಿಯೋ ನೋಡಿ.
ಪ್ರಸ್ತುತ ವಿಡಿಯೋ SandalWood Samachara ಎಂಬ ಯುಟ್ಯೂಬ್ ಚಾನಲ್ ನಲ್ಲಿ ಶೇರ್ ಮಾಡಲಾಗಿದೆ. ಇದುವರೆಗೆ ಈ ವೀಡಿಯೋವನ್ನು ಸುಮಾರು ಒಂದೂವರೆ ಮಿಲಿಯನ್ ಗಿಂತಲೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. ಅಲ್ಲದೆ ಸುಮಾರು ನಲವತ್ತೈದು ಸಾವಿರಕ್ಕಿಂತ ಹೆಚ್ಚು ಜನರು ಲೈಕ್ಸ್ ಮಾಡಿದ್ದಾರೆ. ಸುಮಾರು ಒಂದೂವರೆ ಸಾವಿರಕ್ಕೂ ಹೆಚ್ಚು ನೆಟ್ಟಿಗರು ಈ ವೀಡಿಯೋಗೆ ಕಾಮೆಂಟ್ ಮಾಡಿದ್ದಾರೆ.