ಸುಂದರವಾದ ಈ ಹಳ್ಳಿಯಲ್ಲಿ ವಾಸಿಸುವುದಾದರೆ ಸರ್ಕಾರದ ಕಡೆಯಿಂದ ಸಿಗುತ್ತೆ 38.60 ಲಕ್ಷ ರೂ. ಹಣ! ಈಗಾಗಲೇ 1500 ಜನ ಅರ್ಜಿ ಹಾಕಿದ್ದಾರೆ!
ಬೆಟ್ಟ ಗುಡ್ಡಗಳ ಪ್ರದೇಶ, ಪರ್ವತಗಳ ಸಾಲು, ಗಿರಿಧಾಮಗಳು ಅಲ್ಲಿನ ಸುಂದರವಾದ ಪರಿಸರ, ಆಹ್ಲಾದಕರವಾದ ವಾತಾವರಣ ಎಲ್ಲರಿಗೂ ಕೂಡಾ ಬಹಳ ಇಷ್ಟವಾಗುತ್ತದೆ. ಅದಕ್ಕೆ ಜನರು ರಜೆಯ ದಿನಗಳು ಬಂದರೆ ಅಂತಹ ಪ್ರದೇಶಗಳನ್ನರಸಿ ಹೋಗಿ ಸಮಯವನ್ನು ಕಳೆಯಲು ಇಷ್ಟಪಡುತ್ತಾರೆ. ಸಾಮಾನ್ಯವಾಗಿಯೇ ರಜಾ ದಿನಗಳಲ್ಲಿ ಗಿರಿಧಾಮಗಳಲ್ಲಿ ಜನ ದಟ್ಟಣೆಯನ್ನು ನಾವು ಕೂಡಾ ಗಮನಿಸಿಯೇ ಇರುತ್ತೇವೆ. ಅಲ್ಲದೇ ಇಲ್ಲಿಗೆ ಬರುವ ಜನರು ಕೂಡಾ ಅನೇಕ ಕಡೆ ಪ್ರವೇಶ ದರವನ್ನು ಕೊಟ್ಟ ನಂತರವೇ ಈ ಸುಂದರವಾದ ಸ್ಥಳಗಳಲ್ಲಿ ಪ್ರವೇಶವನ್ನು ಕಲ್ಪಿಸಲಾಗುವುದು. ಆದರೆ ಇದಕ್ಕೆ ವ್ಯ ತಿ ರಿಕ್ತವಾಗಿ ಸುಂದರವಾದ ಪರಿಸರದಲ್ಲಿ ನೀವು ಬಂದು ಕೆಲವು ಸಮಯ ತಂಗಿದರೆ ನಿಮಗೇ ಹಣ ಸಿಗುವುದು ಎಂದರೆ ನಿಜಕ್ಕೂ ಆಶ್ಚರ್ಯ ಎನಿಸಬಹುದು ಅಲ್ಲವೇ?
ಅಲ್ಲದೇ ಅಲ್ಲಿಗೆ ಹೋಗಲು ಕೂಡಾ ಬಯಸಬಹುದು. ಇಂತಹ ಒಂದು ಸದವಕಾಶವನ್ನು ಇಟಲಿಯ ಒಂದು ಹಳ್ಳಿ ನೀಡುತ್ತಿದ್ದು ಇಲ್ಲಿಗೆ ಹೋಗಿ ಈ ಗ್ರಾಮದಲ್ಲಿ ನೆಲೆಸುವುದಾದರೆ 40 ಸಾವಿರ ಪೌಂಡ್ ಅಂದರೆ ಸುಮಾರು 38.60 ಲಕ್ಷ ರೂಪಾಯಿಗಳನ್ನು ನೀಡಲು ಉದ್ದೇಶಿಸಲಾಗಿದೆ. ಇಂತಹುದೊಂದು ಅದ್ಭುತ ಅವಕಾಶವನ್ನು ಇಟಲಿಯ ಸೇಂಟೋ ಸ್ಟಿಫಾನೋ ಡಿ ಸೆಸಾನಿಯೋ ಎಂಬ ಸುಂದರವಾದ ಹಳ್ಳಿಯು ಪ್ರಪಂಚದ ಎಲ್ಲಾ ದೇಶದ ಜನರಿಗೆ ನೀಡಿದೆ. ಇದೊಂದು ಬೆಟ್ಟದ ಮೇಲಿರುವ ಗ್ರಾಮವಾಗಿದ್ದು, ಇಲ್ಲಿನ ಜನಸಂಖ್ಯೆ ಕಡಿಮೆಯಿರುವ ಕಾರಣ ಆರ್ಥಿಕವಾಗಿ ತೊಂದರೆಯನ್ನು ಅನುಭವಿಸುತ್ತಿದೆ ಎನ್ನಲಾಗಿದೆ.

ಆದ ಕಾರಣ ಇಲ್ಲಿನ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿ, ಮತ್ತೆ ಆರ್ಥಿಕ ಸ್ಥಿರತೆಯನ್ನು ಸಾಧಿಸುವ ಉದ್ದೇಶದಿಂದ ಇಲ್ಲಿನ ಸರ್ಕಾರವು ಇಂತಹುದೊಂದು ವಿಭಿನ್ನವಾದ ಪ್ರಯತ್ನಕ್ಕೆ ಕೈಹಾಕಿದೆ. ಅಬ್ರುಜೋ ಎಂಬ ಪ್ರದೇಶದಲ್ಲಿ ಇದೆ ಸೆಂಟೋ ಸ್ಟೆಫಾನೋ ಡಿ ಸೆಸಾನಿಯೋ ಹಳ್ಳಿ. ಈ ಗ್ರಾಮದ ಇಟ್ಟು ಜನಸಂಖ್ಯೆ ಕೇವಲ 15 ಮಾತ್ರ ಎಂದೇ ನಂಬಲೇಬೇಕು. ಇದರಲ್ಲಿ 13 ಜನರು 20 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾದರೆ 41 ಜನರು 65 ದಾಟಿದ ವೃದ್ಧರಾಗಿದ್ದಾರೆ. ಈ ಗ್ರಾಮದ ಆರ್ಥಿಕ ಪರಿಸ್ಥಿತಿ ಸುಸ್ಥಿರವಾಗಿರದ ಕಾರಣ ಅಲ್ಲಿ ಆರ್ಥಿಕ ಸುಭದ್ರತೆಯನ್ನು ತರುವ ಉದ್ದೇಶದಿಂದ, ಅಭಿವೃದ್ಧಿಯನ್ನು ಉತ್ತೇಜಿಸಲು ಇಂತಹ ಕ್ರಮಕ್ಕೆ ಮುಂದಾಗಿರುವುದಾಗಿ ಅಲ್ಲಿನ ಸ್ಥಳೀಯ ಆಡಳಿತವು ತಿಳಿಸಿದೆ.
ಸ್ಥಳೀಯ ಆಡಳಿತ ನೀಡಿರುವ ಮಾಹಿತಿಯ ಪ್ರಕಾರ ಈ ಗ್ರಾಮದಲ್ಲಿ ಉಳಿದುಕೊಂಡರೆ ಸರ್ಕಾರ ಅವರಿಗೆ ಮೂರು ವರ್ಷಗಳ ಕಾಲ ಪ್ರತಿ ತಿಂಗಳು ಸುಮಾರು 6.94 ಲಕ್ಷ ರೂಪಾಯಿಗಳನ್ನು ನೀಡುತ್ತದೆ. ಜಗತ್ತಿನ ಯಾವುದೇ ದೇಶದವರಾದರೂ ಈ ಅವಕಾಶಕ್ಕೆ ಅರ್ಜಿ ಸಲ್ಲಿಸುವ ಅವಕಾಶವಿದ್ದು ಅವರು ವಯಸ್ಸು 18 ದಾಟಿರಬೇಕು, ಹಾಗೂ 40 ಮೀರಿರಬಾರದು ಎನ್ನುವ ನಿಯಮವಿದೆ. ಈಗಾಗಲೇ ಸುಮಾರು 1500 ಜನರು ಈ ಗ್ರಾಮದಲ್ಲಿ ನೆಲೆಸಲು ಅರ್ಜಿಯನ್ನು ಸಲ್ಲಿಸಿದ್ದಾರೆ. ಆದರೆ ಸ್ಥಳೀಯ ಸರ್ಕಾರ ಹೇಳುವ ಪ್ರಕಾರ ಕೇವಲ ಹತ್ತು ಜನರು ಅಂದರೆ ಸುಮಾರು ಐದು ಜೋಡಿಗೆ ಮಾತ್ರ ಇಲ್ಲಿ ನೆಲೆಸಲು ಅವಕಾಶವನ್ನು ಕಲ್ಪಿಸಲಾಗುವುದು ಎನ್ನಲಾಗಿದೆ.

ಬಹುಶಃ ಇಂತಹುದೊಂದು ವಿಭಿನ್ನವಾದ ಹಾಗೂ ವಿಶಿಷ್ಟ ಎನಿಸುವ ಯೋಜನೆಯು ಇದೇ ಮೊದಲ ಬಾರಿ ಇರಬಹುದು. ಗ್ರಾಮವೊಂದರೆ ಆರ್ಥಿಕ ಸ್ಥಿರತೆಯನ್ನು ಕಾಪಾಡುವ ಸಲುವಾಗಿ ಇಲ್ಲಿನ ಸ್ಥಳೀಯ ಸರ್ಕಾರವು ಕೈಗೊಂಡಿರುವ ಈ ಕ್ರಮವು ಯಾವ ಮಟ್ಟದಲ್ಲಿ ಯಶಸ್ಸು ಪಡೆಯಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ. ಆದರೆ ನೆಲೆಸಲು, ಅಲ್ಲಿ ಖರ್ಚು ಮಾಡಲು ಮೂರು ವರ್ಷ ಹಣವನ್ನು ಕೂಡಾ ಸರ್ಕಾರ ನೀಡುವ ಯೋಜನೆ ನಮ್ಮಲ್ಲಿ ಬಂದರೆ ಕೋಟಿಗಟ್ಟಲೆ ಜನರು ಅರ್ಜಿ ಸಲ್ಲಿಸಿದರೂ ಆಶ್ಚರ್ಯವಿಲ್ಲ.