ಸುಖ ನಿದ್ರೆಗೆ ಜಾರಿದ್ದ ಹುಂಜಕ್ಕೆ ಮಾಲೀಕನ ಧ್ವನಿ ಕೇಳಿದಾಗಲೇ ಎಚ್ಚರವಾಗಿದ್ದು: ಫನ್ನಿ ವೀಡಿಯೋ ನೋಡಿದರು ಕೋಟಿಗಟ್ಟಲೆ ನೆಟ್ಟಿಗರು
ಕೋಳಿ ಕೂಗಿದರೆ ಬೆಳಗಾಯಿತು ಎನ್ನುವ ಮಾತು ಬಹಳ ಹಿಂದಿನಿಂದಲೂ ನಾವು ಕೇಳುತ್ತಲೇ ಬಂದಿದ್ದೇವೆ. ಅಲ್ಲದೇ ನಮ್ಮ ಕಥೆಗಳಲ್ಲಿ ಕೂಡ ಒಳ್ಳೆಯ ಕಥೆಗಳು, ಹಳ್ಳಿಯ ಕಥೆಗಳು ಬಂದಾಗ ಅದರಲ್ಲಿ ಮುಂಜಾನೆಯ ಚಿತ್ರಣವನ್ನು ವರ್ಣನೆ ಮಾಡುವಾಗ ಕೋಳಿ ಕೂಗಿಗೆ ಬೆಳಗಾಯಿತು ಎನ್ನುವ ವಾಕ್ಯವನ್ನು ಸಹಜವಾಗಿಯೇ ಬಳಸಲಾಗುತ್ತದೆ. ನಮ್ಮ ಹಿರಿಯರು ಕೂಡ ಹಿಂದಿನ ಕಾಲದಲ್ಲಿ ಕೋಳಿ ಕೂಗಿಗೆ ನಾವೆಲ್ಲಾ ಎಚ್ಚರವಾಗಿ ಬಿಡುತ್ತಿದ್ದೆವು, ಅನಂತರ ತಡ ಮಾಡದೇ ನಾವು ನಮ್ಮ ಮುಂಜಾನೆಯ ಚಟುವಟಿಕೆಗಳನ್ನು ಆರಂಭ ಮಾಡುತ್ತಿದ್ದೆವು ಎಂದು ಹೇಳುವುದನ್ನು ಕೂಡಾ ಕೇಳಿಯೇ ಇರುತ್ತವೇ. ಇಂದೂ ಕೂಡಾ ಗ್ರಾಮಗಳಲ್ಲಿ ಕೂಗಿ ಕೂಗನ್ನು ಬೆಳಗಿನ ಸೂಚನೆ ಎಂದು ಪರಿಗಣಿಸುವ ವಾಡಿಕೆ ಕೂಡಾ ಇದೆ ಎಂಬುದನ್ನು ನಾವು ನಿರಾಕರಣೆ ಮಾಡಲು ಸಾಧ್ಯವಿಲ್ಲ.
ಹೀಗೆ ಜಗವನ್ನೆಲ್ಲಾ ಎಬ್ಬಿಸುವ ಕೋಳಿ ನಿದ್ದೆ ಮಾಡುವುದನ್ನು ಎಂದಾದರೂ ನೋಡಿರುವಿರಾ? ಇಲ್ಲ ಎನ್ನುವುದಾದರೆ ಈಗ ನಾವು ಹೇಳಲು ಹೊರಟಿರುವ ವಿಷಯವನ್ನು ಓದಿದರೆ ಇಂತಹದೊಂದು ತಮಾಷೆ ಎನಿಸುವ ಆದರೆ ಬಹಳ ಆಸಕ್ತಿಕರವಾದ ವಿಷಯವೊಂದನ್ನು ನೀವು ತಿಳಿಯಬಹುದು. ಪ್ರತಿದಿನ ಕೂಡಾ ಸೋಶಿಯಲ್ ಮೀಡಿಯಾ ಗಳಲ್ಲಿ ಒಂದಲ್ಲಾ ಒಂದು ವಿಡಿಯೋ ವೈರಲ್ ಆಗುತ್ತಲೇ ಇರುತ್ತದೆ. ಈ ವೀಡಿಯೋಗಳಲ್ಲಿ ಕೆಲವು ವಿಡಿಯೋಗಳು ಬಹಳ ಸೀರಿಯಸ್ ವಿಷಯಗಳನ್ನು ಒಳಗೊಂಡಿದ್ದರೆ, ಇನ್ನೂ ಕೆಲವು ವಿಡಿಯೋಗಳು ಸರಳವಾದ ವಿಷಯಗಳೊಂದಿಗೆ ಜನರ ಮನಸ್ಸನ್ನು ಗೆದ್ದು ಬಹಳ ಬೇಗ ವೈರಲ್ ಆಗಿಬಿಡುತ್ತವೆ.
ಇಂತಹ ವಿಡಿಯೋಗಳನ್ನು ನೋಡಿದಾಗ ಅವುಗಳ ಅವಧಿ ಕಡಿಮೆಯಿದ್ದರೂ ಕೂಡಾ ಮನಸ್ಸಿಗೆ ಏನೋ ಒಂದು ರೀತಿಯ ಖುಷಿಯಂತೂ ಖಂಡಿತ ಸಿಗುತ್ತದೆ.
ಈಗ ವೈರಲ್ ಆಗಿರುವ ವಿಡಿಯೋದಲ್ಲಿ ಕೂಡಾ ಅಂತಹುದೇ ಒಂದು ದೃಶ್ಯ ಸೆರೆಯಾಗಿದ್ದು ನೋಡಲು ಕುತೂಹಲಕಾರಿಯಾಗಿದೆ. ವ್ಯಕ್ತಿಯೊಬ್ಬರ ಫಾರ್ಮ್ ನಲ್ಲಿ ವಿಚಿತ್ರವಾದ ಹಾಗೂ ಹಾಸ್ಯ ಎನಿಸುವ ಈ ಸನ್ನಿವೇಶವು ನಡೆದಿದ್ದು, ಕೆಲವೇ ಸೆಕೆಂಡುಗಳ ವಿಡಿಯೋದಲ್ಲಿ ಗಮನಿಸಿದಾಗ ಹುಲ್ಲಿನ ಮೇಲೆ, ಗಿಡಗಳ ನಡುವೆ ಹುಂಜವೊಂದು ಹೊಟ್ಟೆಯನ್ನು ಆಗಸದ ಕಡೆಗೆ ತೋರಿಸುತ್ತಾ ಪ್ರಜ್ಞೆ ತಪ್ಪಿದಂತೆ ಬಿದ್ದಿರುವುದನ್ನು ನಾವು ಗಮನಿಸಬಹುದು. ಮೊದಲ ನೋಟಕ್ಕೆ ಅದು ಸತ್ತು ಬಿದ್ದಿರುವಂತೆ ಕಂಡರೂ ಕೂಡಾ ಆಶ್ಚರ್ಯ ಎನಿಸುವುದಿಲ್ಲ.
ಹಾಗೆ ಮೈಮರೆತು, ನೆಲದ ಮೇಲೆ ಬಿದ್ದಿದ್ದ ಆ ಹುಂಜದ ಮಾಲೀಕ ಅದರ ಬಳಿ ಬರುತ್ತಾರೆ. ಅವರು ತಮ್ಮ ಕೈಯಿಂದ ಅದನ್ನು ಮುಟ್ಟಿ, ಕದಲಿಸಿ, ಧ್ವನಿಯ ಶಬ್ದ ಹೊರಡಿಸಿದಾಗ, ಇಷ್ಟು ಹೊತ್ತು ಚಲನೆಯಿಲ್ಲದೇ ಬಿದ್ದಿದ್ದ ಆ ಹುಂಜವು ಥಟ್ಟನೆ ಮೇಲೆದ್ದು, ಕೂಗುತ್ತಾ ಅಲ್ಲಿಂದ ಓಡಿ ಹೋಗುತ್ತದೆ. ಬಹುಶಃ ಆ ಹುಂಜವು ಆರಾಮವಾಗಿ ಮಲಗಿ ಸುಖ ನಿದ್ರೆಯಲ್ಲಿ ತೇಲುತ್ತಿತ್ತು ಎನ್ನುವಂತೆ ಕಾಣುವ ಈ ವಿಡಿಯೋದಲ್ಲಿ ಪಾಪಾ ಅದರ ಮಾಲಿಕ ಬಂದು ಅದರ ನಿದ್ದೆಯನ್ನು ಹಾಳು ಮಾಡಿದ ಹಾಗೆ ಇದೆ. ಇನ್ನು ಎದ್ದ ಕೂಡಲೇ ಪಾಪ ಅದಕ್ಕೂ ಕೂಡಾ ನಿದ್ರೆ ಮಾಡಿದ ಅರಿವಾಗಿ ತನ್ನ ಕೆಲಸದ ಕಡೆ ಓಡಿ ಹೋಗಿದೆ.
ವಿಡಿಯೋ ನೋಡಿ
ಈ ಹಾಸ್ಯ ಭರಿತವಾದ ಸನ್ನಿವೇಶವನ್ನು ಒಳಗೊಂಡ ವಿಡಿಯೋವನ್ನು ಶೇರ್ ಮಾಡಿರುವ ಆ ವ್ಯಕ್ತಿಯು ವಿಡಿಯೋದ ಶೀರ್ಷಿಕೆಯಲ್ಲಿ “ಕೆಲಸದ ವೇಳೆಯಲ್ಲಿ ನಿದ್ರೆ ಮಾಡುತ್ತಿರುವ ಹುಂಜವನ್ನು ನಾ ನೋಡಿಬಿಟ್ಟೆ” ಎಂದು ಬರೆದುಕೊಂಡಿದ್ದಾರೆ. ನಿಜಕ್ಕೂ ಆ ಕೋಳಿ ನಿದ್ರೆ ಮಾಡುತ್ತಿತ್ತು ಎನ್ನುವಂತೆ ವಿಡಿಯೋದಲ್ಲಿ ಕಂಡಿದ್ದು, ಅವರು ಮುಟ್ಟಿ ಎಬ್ಬಿಸಿದಾಗಲೇ ಅದು ಅಲ್ಲಿಂದ ಎದ್ದು ಕೂಗುತ್ತಾ ಓಡಿ ಹೋಗಿದ್ದನ್ನು ಗಮನಿಸಬಹುದು. ಈ ಹಾಸ್ಯ ಎನಿಸುವ ಕೆಲವೇ ಸೆಕೆಂಡುಗಳ ಸಣ್ಣ ವಿಡಿಯೋವನ್ನು ಈಗಾಗಲೇ ಮೂರು ಕೋಟಿಗಿಂತ ಅಧಿಕ ಜನರು ವೀಕ್ಷಣೆಯನ್ನು ಮಾಡಿದ್ದಾರೆ.