ಸುಪ್ರಸಿದ್ದ ಬಾಲಿವುಡ್ ಗಾಯಕಿ ನೇಹಾ ಕಕ್ಕಡ್ ಹಾಡು ಹಾಡುವಾಗ ಅಳುತ್ತಲೇ ನೀಡಿದರು ಪ್ರೀತಿಯ ಅಪ್ಪುಗೆ ಶೃದ್ಧಾಂಜಲಿ…..

ಅಪ್ಪು ಅವರ ಅಗಲಿಕೆ ಬರೀ ಕರ್ನಾಟಕಕ್ಕೆ ಅಷ್ಟೇ ಅಲ್ಲ ಇಡೀ ದೇಶಕ್ಕೆ ದೊಡ್ಡ ದುಃಖವನ್ನು ನೀಡಿದೆ ಎಂದರೆ ತಪ್ಪಾಗಲಾರದು. ಕಾರಣ ಅಪ್ಪು ಅವರ ಚಿತ್ರಗಳು ಹಿಂದಿಯಲ್ಲಿಯೂ ಡಬ್ ಆಗುತ್ತಿರುವುದರಿಂದ ಸಾಕಷ್ಟು ಬೇರೆ ಭಾಷಿಕರಾದ ಯುವಜನ ಅವರ ಫ್ಯಾನ್ಸ್ ಗಳಾಗಿದ್ದಾರೆ.

ಅಪ್ಪು ಅವರ ಸಾವು ಜನ ಸಾಮಾನ್ಯರಿಗೆ ಅಷ್ಟೇ ಅಲ್ಲ ಸೆಲೆಬ್ರಿಟಿಗಳಿಗೂ ಮರೆಯಲಾರದ ನೋವನ್ನು ನೀಡಿದೆ.

ಬಾಲಿವುಡ್ ಖ್ಯಾತ ಗಾಯಕಿ ನೇಹಾ ಅವರಿಗೂ ಅಪ್ಪು ಅವರ ಸಾವು ತುಂಬಾ ನೋವು ನೀಡಿದೆ. ಆ ನೋವು ಅವರ ಹಾಡಿನಿಂದಲೇ ವ್ಯಕ್ತವಾಗಿದೆ. ಅಪ್ಪು ಅವರಿಗೆ ಹಾಡಿನ ಮೂಲಕ ಶೃದ್ಧಾಂಜಲಿ ನೀಡುವಾಗ ಹಾಡುತ್ತಿರುವಾಗಲೇ ಕಣ್ಣೀರು ಹಾಕಿದ್ದಾರೆ. ಯುಟ್ಯೂಬ್ ನಲ್ಲಿ ‘future tak’ ಚಾನೆಲ್ ನಲ್ಲಿ ಶೇರ್ ಮಾಡಿದ ಈ ವಿಡಿಯೋವನ್ನು ಇಲ್ಲಿಯವರೆಗೆ ಸುಮಾರು 588 k ಜನ ವೀಕ್ಷಿಸಿದ್ದಾರೆ. ನೋಡಿ ನೀವು ಈ ವಿಡಿಯೋವನ್ನು…