ಸುಪ್ರಸಿದ್ಧ ಟಿವಿ ಸೀರಿಯಲ್ ರಾಮಾಯಣದ ಶ್ರೀ ರಾಮ (ಅರುಣ್ ಗೋವಿಲ್) ಎಷ್ಟೊಂದು ಸಂಪತ್ತಿನ ಒಡೆಯರಿದ್ದಾರೆ, ಗೊತ್ತಾ?
ಕೊರೊನ ಮಹಾಮಾರಿಯಿಂದಾಗಿ 2020ರಲ್ಲಿ ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿತ್ತು. ಈ ಸಂದರ್ಭದಲ್ಲಿ ಡಿ ಡಿ ನ್ಯಾಷನಲ್ ಚಾನೆಲ್ ರಾಮಾನಂದ್ ಸಾಗರ್ ಅವರ ನಿರ್ದೇಶನದ ‘ರಾಮಾಯಣ’ ಸೀರಿಯಲ್ ಈ ಮಹಾಕಾವ್ಯವನ್ನು ಪುನಃ ಪ್ರಸಾರ ಮಾಡಿತು. ಆ ಸಮಯದಲ್ಲಿ ಈ ಶೋ ಎಲ್ಲಾ ಚಾನೆಲ್ ಗಳಿಗೂ ಮೀರಿ ಟಿ ಆರ್ ಪಿ ಗಿಟ್ಟಿಸಿತು. ದೂರದರ್ಶನದ ಗತವೈಭವ ಮತ್ತೊಮ್ಮೆ ನೆನಪಿಸಿತು. ಈ ಧಾರಾವಾಹಿಯಲ್ಲಿ ನಟಿಸಿದ ನಟರಿಗೆ ಮತ್ತೊಮ್ಮೆ ಪ್ರಸಿದ್ಧಿ ಸಿಗುವುದರ ಜೊತೆಗೆ ಒಮ್ಮೆಲೆ ಸುದ್ದಿಯಲ್ಲಿ ಬಂದರು. ಇಂದಿನ ಈ ಲೇಖನದಲ್ಲಿ ಪ್ರಸ್ತುತ ಧಾರಾವಾಹಿಯಲ್ಲಿ ಶ್ರೀರಾಮನ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದ ಅರುಣ ಗೋವಿಲ್ ರ ಒಟ್ಟು ಸಂಪತ್ತು ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳೋಣ.

ರಮಾನಂದ್ ಸಾಗರ್ ಅವರ ನಿರ್ದೇಶನದ ಅಡಿಯಲ್ಲಿ ನಿರ್ಮಾಣವಾದ ರಾಮಾಯಣ ಸೀರಿಯಲ್ ನಲ್ಲಿ ಅರುಣ್ ಗೋವಿಲ್ ಅವರು ಶ್ರೀರಾಮನ ಪಾತ್ರವನ್ನು ಸಲೀಸಾಗಿ ನಿರ್ವಹಿಸಿದ ನಂತರ ಒಂದೇ ರಾತ್ರಿಯಲ್ಲಿ ಹೀರೋ ಆದರು. ಅರುಣ್ ಗೋವಿಲ್ ಅವರು ಈ ಸೀರಿಯಲ್ ನಲ್ಲಿ ಅಭಿನಯಿಸುವ ಮುನ್ನ ಬಾಲಿವುಡ್ ನ ಕೆಲವೊಂದು ಚಿತ್ರಗಳಲ್ಲಿ ಕೆಲಸವನ್ನು ಮಾಡಿದ್ದರು. ಆದರೆ ಅವರಿಗೆ ಭಾರಿ ಪ್ರಸಿದ್ಧಿಯನ್ನು ತಂದುಕೊಟ್ಟ ಶೋ ಎಂದರೆ ರಾಮಾಯಣ.
ಅರುಣ್ ಗೋವಿಲ್ ರ ಸಂಪತ್ತಿನ ಬಗ್ಗೆ ಹೇಳುವುದಾದರೆ ಬೇರೆ ಬೇರೆ ಮೀಡಿಯಾ ಪೋರ್ಟಲ್ ಗಳು ನೀಡಿದ ಮಾಹಿತಿಯ ಪ್ರಕಾರ, ಇವರ ಒಟ್ಟು ಸಂಪತ್ತು ಸುಮಾರು $ 5 ಮಿಲಿಯನ್ ಎಂದು ತಿಳಿದುಬಂದಿದೆ. ಈ ಒಟ್ಟು ಸಂಪತ್ತಿನಲ್ಲಿ ಅಂದಾಜು 38 ಕೋಟಿ ರೂಪಾಯಿಗಳಷ್ಟು ಕರೆನ್ಸಿ ರೂಪದಲ್ಲಿ ಇದೆ. ಇವರ ಸಂಪತ್ತಿನಲ್ಲಿ ಈಗ ಮತ್ತಷ್ಟು ವೃದ್ಧಿಯಾಗಿರಬಹುದು. ಕಾರಣ ಈ ಸೀರಿಯಲ್ ಮತ್ತೆ ಪ್ರಸಾರ ಮಾಡಲಾಯಿತು.

ಇವರ ಬಗ್ಗೆ ಇನ್ನಷ್ಟು ಹೇಳಬೇಕಾದರೆ ನಟನೆಯ ಜೊತೆಗೆ ನಿರ್ಮಾಪಕ ಹಾಗೂ ಒಬ್ಬ ರಾಜಕಾರಣಿಯೂ ಆಗಿದ್ದಾರೆ. ಇವರು ಹಿಂದಿ ಭೋಜಪುರಿ, ಬ್ರಜ್ ಭಾಷೆ ಮತ್ತು ತೆಲುಗು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅರುಣ್ ಗೋವಿಲ್ ರ ತಂದೆ ಚಂದ್ರಪ್ರಕಾಶ್ ಗೋವಿಲ್ ರು ಸರಕಾರಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಅರುಣ್ ರು ಆರು ಸಹೋದರರು ಹಾಗೂ ಇಬ್ಬರು ಸಹೋದರಿಯರಲ್ಲಿ ನಾಲ್ಕನೆಯವರಾಗಿ ಜನಿಸಿದ್ದರು.