ಸುಮಾರು 1 ಲಕ್ಷ ಜನರು ಅಡವಿಟ್ಟ (ಒತ್ತೆ) ಇಟ್ಟ ಚಿನ್ನವನ್ನು ಅಗ್ಗದ ದರದಲ್ಲಿ ಖರೀದಿಸುವ ಸುವರ್ಣಾವಕಾಶ! ಏನಿದು ಸುದ್ದಿ ನೋಡಿ…

ಕೊರೋನದ ಮಹಾ ಭಯಂಕರ ಕಾಲದಲ್ಲಿ ಲಕ್ಷಾವಧಿ ಜನರು ತಮ್ಮ ನೌಕರಿಯನ್ನು ಕಳೆದುಕೊಂಡರು. ಆರ್ಥಿಕ ಸಂಕಷ್ಟ ದಿಂದಾಗಿ ಕೆಲಸವಿಲ್ಲದೆ ಎಷ್ಟೋ ಜನರ ಮನೆಯೇ ಮುರಿದು ಹೋದವು. ಅಂಥ ಬಿಕ್ಕಟ್ಟಿನ ಸಮಯದಲ್ಲಿ ಸಾಕಷ್ಟು ಜನರು ಮನೆಯಲ್ಲಿದ್ದ ಚಿನ್ನವನ್ನು ಒತ್ತೆ ಇಟ್ಟು ಸಾಲವನ್ನು ತೆಗೆದುಕೊಂಡಿದ್ದಾರೆ. ಆದರೆ ಸಾಲವನ್ನು ತೆಗೆದುಕೊಂಡ ನಂತರ ನೌಕರಿ ಇಲ್ಲದ ಕಾರಣ ನಿಗದಿತ ಸಮಯದಲ್ಲಿ ಯಾವುದೇ ಪರ್ಯಾಯವಿಲ್ಲದ್ದರಿಂದ ಆ ಸಾಲ ಮರುಪಾವತಿಸಲು ಸಾಧ್ಯವಾಗಿಲ್ಲ.

ಈ ರೀತಿ ಸಾಲವನ್ನು ಮರುಪಾವತಿಸಲು ಅಸಮರ್ಥರಾದ ಲಕ್ಷಾವಧಿ ಕುಟುಂಬದವರ ಚಿನ್ನವನ್ನು ನಾಳೆ ಬುಧವಾರ ಅಂದರೆ 16 ಫೆಬ್ರುವರಿಯಂದು ಹರಾಜು ಮಾಡಲಿದ್ದಾರೆ. NBFC ಮತ್ತು ಚಿನ್ನವನ್ನು ಅಡವಿಟ್ಟುಕೊಂಡು ಸಾಲ ನೀಡುವ ಬ್ಯಾಂಕುಗಳು ಈ ಹರಾಜನ್ನು ಮಾಡಲಿದ್ದಾರೆ. ಮುಥುಟ್ ಮತ್ತು ಮನಪ್ಪುರಂ ಫಾಯನಾನ್ಸ್ ಕಂಪನಿಗಳು ಎಲ್ಲರಿಗಿಂತ ಹೆಚ್ಚು ಸಾಲವನ್ನು ನೀಡಿದ್ದಾರೆ.

ಚಿನ್ನದ ಆಭರಣಗಳ ಮೇಲೆ ಅದರ ಒಟ್ಟು ಮೌಲ್ಯದ 70 ಪ್ರತಿಶತ ಸಾಲ ನೀಡಲಾಗುತ್ತದೆ. ಇಲ್ಲಿ ಗ್ರಾಹಕನಿಗೆ ತ್ವರಿತ ಗತಿಯಲ್ಲಿ ಸಾಲವನ್ನು ನೀಡಲಾಗುತ್ತದೆ. ಚಿನ್ನವನ್ನು ಅಡವಿಟ್ಟು ತೆಗೆದುಕೊಂಡ ಸಾಲ ಮರುಪಾವತಿಯಾಗದಿದ್ದರೆ ಕಂಪನಿಗೆ ಇಲ್ಲಿ ವಸೂಲಿ ಮಾಡುವದು ತುಂಬಾ ಸುಲಭವಾಗಿದೆ. ಕಾರಣ ಇಲ್ಲಿ ಕಂಪನಿಯು ಸಾಲಗಾರ ಗ್ರಾಹಕನ ಚಿನ್ನವನ್ನು ಮಾರಾಟ ಮಾಡಿ ಆತನಿಂದ ಸಾಲವನ್ನು ವಸೂಲಿ ಮಾಡುತ್ತದೆ.

ದೇಶದ ಒಟ್ಟು 18 ಪಟ್ಟಣಗಳಲ್ಲಿ ಹರಾಜಿನ 59 ನೋಟಿಸ್ ಗಳನ್ನು ನೀಡಲಾಗಿದೆ. ಇದರಲ್ಲಿ ಬೆಂಗಳೂರು, ಚೆನ್ನೈ, ಕೊಚ್ಚಿ ಯಲ್ಲಿ ಒಟ್ಟು 12 ಮತ್ತು ವಿಜಯವಾಡದಲ್ಲಿ 3 ಹೈದ್ರಾಬಾದ್ ಮತ್ತು ಮುಂಬಯಿಯ 2 ಸ್ಥಳಗಳಲ್ಲಿ ಈ ಹರಾಜಿನ ಪ್ರಕ್ರಿಯೆ ನಡೆಯಲಿದೆ.