ಸುಮ್ಮನೆ ಮೆಯುತ್ತಿದ್ದ ಹಸುವಿಗೆ ಕಟ್ಟಿಗೆಯಿಂದ ಹೊಡೆಯಲು ಹೋದ ಯುವತಿಯರು, ಅವರಿಗೆ ತಕ್ಕ ಪಾಠ ಕಲಿಸಿದ ಹಸು!! ವಿಡಿಯೋ ನೋಡಿ……

ನೀವು ಯಾವ ರೀತಿಯಾಗಿ ಕರ್ಮ ಮಾಡುವಿರಿ ಅದಕ್ಕೆ ತಕ್ಕ ಹಾಗೆ ಪ್ರತಿಫಲ ಸಿಗುತ್ತದೆ. ಈ ವಿಡಿಯೋ ನೋಡಿದ ಮೇಲೆ , ನಿಮ್ಮ ಕೆಲಸದ ಪ್ರತಿಫಲ ಆಗಿಂದಾಗ್ಗೆ ಸಿಗುತ್ತದೆ ಎಂಬುದು ಅರಿವಾಗುತ್ತದೆ. ಈ ವಿಷಯದ ಕುರಿತು ಉದಾಹರಣೆ ನೀಡುವ ಒಂದು ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ. ಸಾಮಾನ್ಯವಾಗಿ ಹಸುವನ್ನು ತಾಯಿಯಂದು ಪೂಜೆ ಮಾಡುತ್ತಾರೆ. ಅಲ್ಲದೆ ಹಸುವನ್ನು ಹತ್ತು ಕೋಟಿ ದೇವತೆಯನ್ನು ಹೊತ್ತ ಪ್ರಾಣಿಯಂದು ಸಹ ಕರೆಯುವರು. ಹಸುವಿನ ಬಗ್ಗೆ ಎಷ್ಟೇ ಹೇಳಿದರು ಅದು ಸಾಲದು. ನಾವು ಹಸುವನ್ನು ದೈವವೆಂದು ಪೂಜೆ ಮಾಡಿ ಅದರ ಆಶೀರ್ವಾದ ಸಹ ಪಡೆಯುತ್ತೇವೆ. ದಿನನಿತ್ಯದ ಮುಂಜಾನೆಯ ಸಮಯದಲ್ಲಿ ಹಸುವನ್ನು ಮುಟ್ಟಿ ನಮಸ್ಕರಿಸುವದು ತುಂಬಾ ಶುಭವಾಗುತ್ತೆ ಅಂತ ನಮ್ಮ ಸಂಪ್ರದಾಯ ಹೇಳುತ್ತೆ.

ಸದ್ಯಕ್ಕೆ ಸೋಶಿಯಲ್ ಮಿಡಿಯಾದಲ್ಲಿ ಒಂದು ವಿಡಿಯೋ ತುಂಬಾ ಹರಡುತ್ತಿದೆ. ಈ ವಿಡಿಯೋದಲ್ಲಿ ಇಬ್ಬರು ಯುವತಿಯರು ಹಸುವಿನ ಹಿಂಡು ಇರುವ ಸ್ಥಳದಲ್ಲಿ ತಿರುಗಾಡುವ ಸಲುವಾಗಿ ಹೋಗಿರುತ್ತಾರೆ. ಆಗ ಅಲ್ಲಿ ಬಹಳಷ್ಟು ಹಸುಗಳು ತಮ್ಮಷ್ಟಕ್ಕೆ ತಾವು ಹುಲ್ಲು ಮೆಯುತ್ತ ನಿಂತಿರುತ್ತವೆ. ಯುವತಿಯರು ತಾವು ಸಹ ಈ ಹಚ್ಚು ಹಸಿರು ಪ್ರದೇಶದಲ್ಲಿ ಮೋಜು ಮಸ್ತಿ ಮಾಡಬೇಕೆಂದು ನಿರ್ಧರಿಸಿ ಫುಟ್ಬಾಲ್ ಆಡಲು ನಿಶ್ಚಯ ಮಾಡುತ್ತಾರೆ. ಫುಟ್ಬಾಲ್ ಆಡುತ್ತಿದ್ದಂತೆಯೇ ಆ ಚೆಂಡು ನೇರವಾಗಿ ಹಸುಗಳು ಮೆಯುತ್ತಿದ್ದ ಸ್ಥಳಕ್ಕೆ ಹೋಗುತ್ತದೆ. ಅಲ್ಲಿ ನಮೂರು ಹಸುಗಳು ತಮ್ಮ ಮುಖ ಕೆಳಗಡೆ ಮಾಡಿ ಹುಲ್ಲು ತಿನ್ನುತ್ತಿರುತ್ತವೆ. ಆ ಫುಟ್ಬಾಲ್ ಬಂದದ್ದು ಸಹ ಅವುಗಳಿಗೆ ಗೊತ್ತೇ ಆಗುವದಿಲ್ಲ . ಆದರೆ ಈ ಯುವತಿಯರು ಫುಟ್ಬಾಲ ಮರಳಿ ಹೇಗೆ ತರಬೇಕು ಎಂದು ಯೋಚನೆ ಮಾಡುತ್ತ ಕೊನೆಗೆ ಅವರಲ್ಲಿಯ ಒಬ್ಬ ಯುವತಿ ಧೈರ್ಯ ಮಾಡಿ ಹಸುಗಳ ಕಡೆಗೆ ಸಾವಕಾಶವಾಗಿ ಹೋಗುತ್ತಾಳೆ.

ಸಾವಕಾಶವಾಗಿ ಹೋಗುತ್ತಿದ್ದಂತೆಯೇ ಕೈಯಲ್ಲಿ ಒಂದು ಕಟ್ಟಿಗೆಯನ್ನು ತಗೆದುಕೊಂಡು, ಹಸುವಿಗೆ ಹೆದರಸಿ ಅವುಗಳ ಮುಂದಿದ್ದ ಬಾಲನ್ನು ತಗೆದುಕೊಳ್ಳುವ ಪ್ರಯತ್ನ ಮಾಡುತ್ತಾಳೆ. ಹಸುಗಳು ಇವಳನ್ನು ನೋಡುತ್ತವೆ ಆಗ ಅಲ್ಲಿದ್ದ ಮೂರು ಹಸುಗಳು ಹೆದರಿ ಓಡಿ ಹೋಗುತ್ತವೆ. ಇನ್ನೇನು ಬಾಲ್ ತಗೆದುಕೊಳ್ಳಬೇಕು ಅನ್ನೋವಷ್ಟರಲ್ಲಿ ಅಲ್ಲಿದ್ದ ಒಂದು ಹಸು ಈ ಯುವತಿಯ ಬೆನ್ನು ಹತ್ತುತ್ತದೆ. ಬೆನ್ನು ಹತ್ತಿದ್ದಾಗ ಯುವತಿಯ ಧೈರ್ಯ ನುಚ್ಚು ನೀರಾಗಿ ಅಲ್ಲಿಂದ ಓಡಿ ಹೋಗುತ್ತಾಳೆ. ಆದರೆ ಹಸು ಸಹ ಆಕೆಯ ಬೆನ್ನು ಹಿಂದೆಯೇ ಓಡೋಡಿ ಬರುತ್ತದೆ. ಒಂದು ಸೆಕೆಂಡ್ ನಲ್ಲಿ ಬಾಯಿಗೆ ಜೀವ ಬಂದ ಹಾಗೆ ಆಗಿತ್ತು ಆ ಯುವತಿಯ ಪರಸ್ಥಿತಿ. ಹೇಗಾದರೂ ಮಾಡಿ ಹಸುವಿನಿಂದ ಬಚಾವ್ ಆದ ಯುವತಿ ಇಲ್ಲದಿದ್ದರೆ ಆಕೆಯ ಯಾವ ಮೂಳೆ ಮುರಿಯುತ್ತಿತ್ತು ಅಂತ ಹೇಳಲು ಸಾಧ್ಯವಿರಲಿಲ್ಲ. ನೋಡಿ ಈ ಅದ್ಭುತವಾದ ವಿಡಿಯೋ

ವಿಡಿಯೋ ನೋಡಿ.

ಪ್ರಸ್ತುತ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ frases_parati_16 ಎಂಬ ಹೆಸರಿನ ಖಾತೆಯ ಮೂಲಕ ಶೇರ್ ಮಾಡಲಾಗಿದೆ. ಇದುವರೆಗೆ ಈ ವಿಡಿಯೋವನ್ನು ಸುಮಾರು ಐದು ಮಿಲಿಯನ್ ಗಿಂತಲೂ ಹೆಚ್ಚು ನೆಟ್ಟಿಗರು ವೀಕ್ಷಣೆ ಮಾಡಿದ್ದಾರೆ. ಅಲ್ಲದೆ ಸುಮಾರು ಐವತ್ತು ಸವಿರಕ್ಕೂ ಹೆಚ್ಚು ಲೈಕ್ಸ್ ಸಹ ಬಂದಿವೆ.