ಸೂಪರ್ ಆಂಡ್ ಸಾಲಿಡ್! ಜಿಂಕೆಯ ಈ ಅದ್ಭುತವಾದ ಜಿಗಿತದ ಮುಂದೆ ಚಿರತೆ ಮತ್ತು ಇನ್ನಿತರ ಪ್ರಾಣಿಗಳು ಝೀರೋ! ವೈರಲ್ ವಿಡಿಯೋ…

ಪ್ರಸ್ತುತ ವಿಡಿಯೋ ದೃಶ್ಯವು ಮಹಾರಾಷ್ಟ್ರದ ಚಂದ್ರಪುರದಲ್ಲಿ ಸೆರೆ ಹಿಡಿಯಲಾಗಿದೆ. ಇಲ್ಲಿ ಜಿಂಕೆಯೊಂದು ಅಕ್ಷರಶಃ ಹಕ್ಕಿಯ ಹಾಗೆ ಹವೆಯಲ್ಲಿ ಜಂಪ್ ಮಾಡಿದೆ. ಈ ವಿಡಿಯೋ ನೋಡುವಾಗ ನಿಜಕ್ಕೂ ಇದು ಜಿಂಕೆಯೋ ಅಥವಾ ಬೇರೆ ಯಾವುದಾದರೂ ಪಕ್ಷಿ ಇದೆ ಏನೋ ಎಂಬಂತೆ ಸಂಶಯ ಹುಟ್ಟುತ್ತೆ. ಜಿಂಕೆಯು ನೀರು ಕುಡಿಯುವಾಗ ಹಠಾತ್ತನೆ ತನ್ನನ್ನು ಯಾರಾದರೂ ಫಾಲೋ ಮಾಡುತ್ತಿದ್ದಾರೆಂಬ ಭಾವನೆ ಬಂದು ಜಾಗ ಖಾಲಿ ಮಾಡಲು ಪ್ರಯತ್ನಿಸಿದೆ. ಆಗ ಅಲ್ಲಿಯೇ ರಸ್ತೆಯ ಮೇಲೆ ಕೆಲವು ನಾಯಿಗಳು ಬರುವುದನ್ನು ನೋಡಿದಾಗ ರಸ್ತೆಯನ್ನು ಕ್ರಾಸ್ ಮಾಡುವ ಸಮಯದಲ್ಲಿ ಜಿಂಕೆಯು ನೆಗೆದ ದೃಶ್ಯವನ್ನು ಅಲ್ಲಿಯೇ ಇದ್ದ ಯಾರೋ ಒಬ್ಬರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಜಿಂಕೆಯ ಈ ಫಿನಿಕ್ಸ್ ಜಿಗಿತವನ್ನು ನೋಡಿ ನೇಟಿಜನ್ಸ್ ಗಳು ಆಶ್ಚರ್ಯವನ್ನು ವ್ಯಕ್ತ ಮಾಡಿದ್ದಾರೆ. ತನ್ನ ಪ್ರಾಣವನ್ನು ಉಳಿಸಿಕೊಳ್ಳುವ ಸಲುವಾಗಿ ಜಿಂಕೆಯು ಈ ರೀತಿಯಾಗಿ ಜಿಗಿದದ್ದನ್ನು ನೋಡಿದ ಅದ್ಭುತ ದೃಶ್ಯ ನಿಜಕ್ಕೂ ಅವರ್ಣನೀಯವಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಈ ಜಿಂಕೆಯ ಸೂಪರ್ ಅಂಡ್ ಸಾಲಿಡ್ ಜಿಗಿತ ವೈರಲ್ ಆಗುತ್ತಿದೆ. ಗಾಬರಿಯಾದ ಜಿಂಕೆಯು ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಯಾವ ರೀತಿಯಾಗಿ ರಸ್ತೆಯನ್ನು ದಾಟಿದೆ ಆ ದೃಶ್ಯ ನೋಡಲು ನಿಜಕ್ಕೂ ಅದ್ಭುತವಾಗಿದೆ. ಈ ಜಿಗಿತ ನೋಡಿ ಪಕ್ಷಿಗಳು ಸಹ ನಾಚಬೇಕು ಹಾಗಿತ್ತು ಆ ಜಂಪ್.

ಜಿಂಕೆಗಳು ವೇಗವಾಗಿ ಓಡುವ ದೃಶ್ಯದ ಅನೇಕ ವಿಡಿಯೋಗಳನ್ನು ನೀವು ನೋಡಿರಬಹುದು. ಆದರೆ ಈ ರೀತಿಯ ಜಿಂಕೆಯ ಜಂಪ್ ಮಾಡಿದ ವಿಡಿಯೋ ಮೊದಲ ಸಲ ನೋಡಿರಬೇಕೆಂದು ಚಾಲೆಂಜ್ ಮಾಡಿ ಹೇಳುತ್ತೇನೆ.

ನೋಡಿ ಈ ವೈರಲ್ ವಿಡಿಯೋ…