ಸೆಲ್ಫಿ ಹಂಚಿಕೊಂಡು ನ್ಯಾಸಾಗೆ ಹುಟ್ಟುಹಬ್ಬದ ಶುಭಾಶಯ ಹೇಳಿದ ಅಜಯ್ ದೇವಗನ್! ಮಗಳು ಧರಿಸಿದ ಬಟ್ಟೆ ನೋಡಿ ‘ನೀವು ತಂದೆಯಾಗಲು ಲಾಯಕ್ಕಿಲ್ಲ’ ಎಂದ ಜನ!

ಬಾಲಿವುಡ್ ನ ಸ್ಟಾರ್ ಕಪಲ್ ಗಳಾಗಿ ಯಶಸ್ಸು ಪಡೆದಿರುವ ಜೋಡಿ ಅಜಯ್ ದೇವಗನ್ ಮತ್ತು ಕಾಜೋಲ್ ದಂಪತಿ. ವಿವಾಹವಾಗಿ ದಶಕಗಳೇ ಕಳೆದರೂ ಕೂಡಾ ಅವರ ನಡುವಿನ ಪ್ರೇಮ ಹಾಗೂ ಅವರ ಸಂಬಂಧದಲ್ಲಿನ ಆತ್ಮೀಯತೆ ಮಾತ್ರ ಕಡಿಮೆಯಾಗಿಲ್ಲ. ಈ ಜೋಡಿಯ ಬಗ್ಗೆ ಆಗಾಗ ಮಾದ್ಯಮಗಳಲ್ಲಿ ಸುದ್ದಿಯಾಗುತ್ತಲೇ ಇರುತ್ತದೆ. ಸಿನಿಮಾ, ಧಾರಾವಾಹಿಗಳಲ್ಲಿ ಸದಾ ಬ್ಯುಸಿಯಿರುವ ಅಜಯ್ ದೇವಗನ್ ಕಾಜೋಲ್ ದಂಪತಿ ಮೀಡಿಯಾಗಳ ಆಕರ್ಷಣೆ ಎಂಬುದರಲ್ಲಿ ಎರಡು ಮಾತು ಇಲ್ಲ. ಇಬ್ಬರೂ ಕೂಡಾ ಬಾಲಿವುಡ್ ನ ಸೂಪರ್ ಸ್ಟಾರ್ ಗಳು, ಕಾಜೋಲ್ ಸಿನಿನಾ ದಿಂದ ಸ್ವಲ್ಪ ದೂರದಲ್ಲಿ ಇದ್ದರೂ ಕೂಡಾ ತನ್ನ ಚಾರ್ಮ್ ಮಾತ್ರ ಕಳೆದುಕೊಂಡಿಲ್ಲ.‌

ಇತ್ತೀಚಿನ ದಿನಗಳಲ್ಲಿ ಅಜಯ್ ದೇವಗನ್ ಮತ್ತು ಕಾಜೋಲ್ ದಂಪತಿಯ ಮಗಳು ನ್ಯಾಸ ಬಗ್ಗೆ ಕೂಡಾ ಸುದ್ದಿಗಳು, ಟ್ರೋಲಿಂಗ್ ಗಳು ಬಹಳಷ್ಟು ನಡೆಯುತ್ತಿರುವ ವಿಷಯ ಎಲ್ಲರಿಗೂ ತಿಳಿದೇ ಇದೆ. ಅಂದರೆ ಆಕೆ ಬಾಲಿವುಡ್ ಗೆ ಎಂಟ್ರಿ ನೀಡುತ್ತಿದ್ದಾರೆ ಅಥವಾ ಮತ್ತಾವುದಾದರೂ ಶೋ ಮಾಡುತ್ತಿದ್ದಾರಾ ಎಂದರೆ ಖಂಡಿತವಾಗಿಯೂ ಇಲ್ಲ. ನ್ಯಾಸ ಬಹುತೇಕ ಸೋಶಿಯಲ್ ಮೀಡಿಯಾಗಳ ಹಾಗೂ ಟ್ರೋಲ್ ಪೇಜ್ ಗಳ ಆಹಾರವಾಗುತ್ತಿರುವುದು ತಾನು ಧರಿಸುವ ಭಿನ್ನ, ವಿಭಿನ್ನವಾದ ಡ್ರೆಸ್ ಗಳಿಂದ ಹಾಗೂ ಆಕೆಯ ಲುಕ್ಸ್ ಮತ್ತು ಆಟಿಟ್ಯೂಡ್ ಕಾರಣದಿಂದ ಎಂಬುದು ಕೂಡಾ ನಿಜ ಎನ್ನಬಹುದು.

ಈಗ ಮತ್ತೊಮ್ಮೆ ನ್ಯಾಸ ಮತ್ತು ಆಕೆಯ ತಂದೆ ಅಜಯ್ ದೇವಗನ್ ನೆಟ್ಟಿಗರ ಅಸಮಾಧಾನಕ್ಕೆ ಕಾರಣವಾಗಿದ್ದಾರೆ‌. ಈ ಬಾರಿ ಖುದ್ದು ಅಜಯ್ ದೇವಗನ್ ಸೋಶಿಯಲ್ ಮೀಡಿಯಾದ ತಮ್ಮ ಖಾತೆಯಲ್ಲಿ ಹಂಚಿಕೊಂಡ ಫೋಟೋ ಒಂದು ಅನೇಕರ ಅಸಮಾಧಾನ ಹಾಗೂ ಸಿಟ್ಟಿಗೆ ಕಾರಣವಾಗಿದೆ. ಹಾಗಾದರೆ ಈ ಫೋಟೋದ ಹಿನ್ನಲೆಯೇನು? ಅದನ್ನು ನೋಡಿ ನೆಟ್ಟಿಗರು ಸಿಟ್ಟಾಗಿದ್ದು ಏಕೆ? ಎನ್ನುವುದಾದರೆ ಇಲ್ಲಿದೆ ವಿವರ. ಅಜಯ್ ದೇವಗನ್ ತಮ್ಮ ಮಗಳ ಹುಟ್ಟುಹಬ್ಬದ ಸಂದರ್ಭದಲ್ಲಿ ಮಗಳ ಜೊತೆಗೆ ತಾನೂ ಇರುವ ಒಂದು ಫೋಟೋ ವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡು, ಮಗಳಿಗೆ ವಿಶ್ ಮಾಡಿದ್ದಾರೆ.

ಈ ಫೋಟೊ ನೋಡಿದವರು ನ್ಯಾಸಾಗೆ ಜನ್ಮದಿನದ ಶುಭಾಶಯವನ್ನು ಕೂಡಾ ತಿಳಿಸುತ್ತಿದ್ದಾರೆ. ಆದರೆ ಆಕೆ ತನ್ನ ತಂದೆಯ ಜೊತೆ ಕುಳಿತಿರುವಾಗ ಧರಿಸಿರುವ ಡ್ರೆಸ್ ಈಗ ಮತ್ತೊಮ್ಮೆ ಕೆಲವರ ಅಸಮಾಧಾನಕ್ಕೆ ಕಾರಣವಾಗಿದೆ. ಇನ್ಸ್ಟಾ ಬಳಕೆದಾರರೊಬ್ಬರು ಏನಿದು ಆಕೆ ತನ್ನ ತಂದೆಯ ಜೊತೆ ಕುಳಿತಿರುವಾಗ ಎಂತಹ ವಸ್ತ್ರ ಧರಿಸಿಬೇಕೆಂಬುದರ ಅರಿವೂ ಇಲ್ಲದೆ ಕುಳಿತಿದ್ದಾಳೆ, ಇಂದಿನ ಯುವಪೀಳಿಗೆಗೆ ನಾಚಿಕೆ ಎನ್ನುವುದು ಇಲ್ಲವೇ? ಇವರೆಂತ ತಂದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಖಂಡಿತ ಈಕೆ ಮುಂದೆ ನಟಿಯಾಗುವುದಿಲ್ಲ ಎಂದು ಟೀಕೆ ಮಾಡಿದ್ದಾರೆ. ಇನ್ನೊಬ್ಬರು ಈಕೆ ಏನು ಬಿ ಗ್ರೇಡ್ ಸಿನಿಮಾ ಮಾಡುವಳಾ? ಎಂದಿದ್ದಾರೆ.

ಆದರೆ ಅದೇ ಸಮಯದಲ್ಲಿ ಕೆಲವರು ನೀವೊಬ್ಬ ನಾಲಾಯಕ್ ತಂದೆ ಎಂದರೆ ಅನೇಕರು ಅಜಯ್ ದೇವಗನ್ ಬೆಸ್ಟ್ ಅಪ್ಪ ಎಂದು ಹೊಗಳಿದ್ದಾರೆ‌. ನ್ಯಾಸಾ ಫೋಟೋ ಗೆ ಇಂತಹ ನೆಗೆಟಿವ್ ಕಾಮೆಂಟ್ ಗಳು ಬಂದಿರುವುದು ಇದೇ ಮೊದಲಲ್ಲ. ಈ ಹಿಂದೆ ಕೂಡಾ ಏರ್ಪೋರ್ಟ್ ಇಂದ ಹೊರ ಬರುವಾಗ ನ್ಯಾಸ ತೊಟ್ಟಿದ್ದ ಡ್ರೆಸ್ ನ ಫೋಟೋ ಒಂದು ವೈರಲ್ ಆಗಿ ಸಾಕಷ್ಟು ಟ್ರೋಲ್ ಆದಾಗ ಕಾಜೋಲ್ ಮತ್ತು ಅಜಯ್ ಇಬ್ಬರೂ ಕೂಡಾ ಅದರ ಬಗ್ಗೆ ಸ್ವಲ್ಪ ಖಡಕ್ಕಾಗಿಯೇ ತಮ್ಮ ಉತ್ತರವನ್ನು ನೀಡುವ ಮೂಲಕ ಟೀಕೆ ಮಾಡುವವರನ್ನು ಖಂಡನೆ ಮಾಡಿದ್ದರು.