ಸೈಫ್ ಗೂ ಮುಂಚೆ ಅಮೃತಾ ಸಿಂಗ್’ ರ ನಿಶ್ಚಿತಾರ್ಥ ಈ ಕ್ರಿಕೆಟಿಗನೊಂದಿಗೆ ಆಗಿತ್ತಂತೆ!

ಅಮೃತಾ ಮತ್ತು ಸೈಫ್ ಅವರ ಸಂಬಂಧದ ಕುರಿತು ಎಲ್ಲರಿಗೂ ತಿಳಿದ ಸಂಗತಿಯಾಗಿದೆ. ಸೈಫ್ ಮತ್ತು ಅಮೃತಾ ಅವರಿಗೆ ಎರಡು ಮಕ್ಕಳು ಇರುವದು ಸಹ ಎಲ್ಲರಿಗೂಗೊತ್ತಿದೆ ಆದರೆ ಅಮೃತಾ ಅವರು ಸೈಫ್ ಅವರಕ್ಕಿಂತ ಮೊದಲು ಒಬ್ಬ ಕ್ರಿಕೆಟಿಗನೊಂದಿಗೆ ಡೇಟ್ ಮಾಡುತ್ತಿದ್ದರು ಅಲ್ಲದೆ ಅವರೊಂದಿಗೆ ನಿಶ್ಚಿತಾರ್ಥವು ಸಹ ಆಗಿತ್ತು. ಈ ವಿಷಯ ಎಷ್ಟೋ ಜನರಿಗೆ ಗೊತ್ತಿರದ ಸಂಗತಿಯಾಗಿದೆ. ಹಾಗಿದ್ದರೆ ಅಷ್ಟಕ್ಕೂ ಆ ಕ್ರಿಕೆಟಿಗ ಯಾರು ಎಂಬುದು ತಿಳಿದುಕೊಳ್ಳೋಣ ಬನ್ನಿ.

ಸೈಫ್ ಅವರಿಗಿಂತ ಮುಂಚೆ ಅಮೃತಾ ರವರ ಹೆಸರು ಈ ಕ್ರಿಕೆಟಿಗನೊಂದಿಗೆ ಜೋಡಿಸಲಾಗುತ್ತಿತ್ತು. ನಮಗೆಲ್ಲತಿಳಿದ ಹಾಗೆ ಬಾಲಿವುಡ್ ಮತ್ತು ಕ್ರಿಕೆಟ್ ತುಂಬಾ ಹತ್ತಿರದ ಸಂಬಂಧ ಹೊಂದಿವೆ ಆದುದರಿಂದಲೇ ಇದುವರೆಗೆ ಎಷ್ಟೋ ಕ್ರಿಕೇಟಿಗರು ಬಾಲಿವುಡ್ ನ ನಟಿಯರ ಜೊತೆಗೆ ವಿವಾಹ ವಾಗಿದ್ದು ಅದಕ್ಕೆ ಸಾಕ್ಷಿಯಾಗಿದೆ. ಶರ್ಮಿಳಾ ಟಾಗೋರ್ ಮತ್ತು ಮನ್ಸೂರ ಖಾನ್, ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾ , ಹರಭಜನ್ಸಿಂಗ್ ಗೀತಾ ಬಸರಾ ಮತ್ತು ಯುವರಾಜ್ ಸಿಂಗ ಹಝಲ್ ಹೀಗೆ ಹಲವಾರು ಉದಾಹರಣೆಗಳಿವೆ.

ಅಮೃತಸಿಂಗ್ ಹೆಸರು ಆ ಕಾಲದಲ್ಲಿ ಸುಪ್ರಸಿದ್ಧ ಆಟಗಾರರಾದ ರವಿ ಶಾಸ್ತ್ರೀ ಯವರೊಂದಿಗೆ ಜೋಡಿಸಲಾಗುತ್ತಿತ್ತು. ಕಳೆದ ಕೆಲವು ವರ್ಷಗಳಹಿಂದೆ ಅವರಿಬ್ಬರ ನಡುವಿನ ಸಂಬಂಧ ಬಗ್ಗೆ ಚರ್ಚೆ ನಡೆಯುತ್ತಿತ್ತಂತೆ. 80 ನೆ ದಶಮಾನದಲ್ಲಿ ಇವರಿಬ್ಬರ ನಡುವಿನ ಸಂಬಂಧ ಬಗ್ಗೆ ತುಂಬಾ ಚರ್ಚೆಯಲ್ಲಿತ್ತು ಆದರೆ ಯಾವಾಗ ಇವರಿಬ್ಬರು ಕೂಡಿ ಒಂದು ಮ್ಯಾಗಜಿನ್ ಸಲುವಾಗಿ ಫೋಸ್ ಕೊಟ್ಟರು ಅಂದು ಜನರ ಎದುರಿಗೆ ಇವರ ಸಂಬಂಧ ಹೊರಗಡೆ ಬಂತು.

ಈ ಫೋಟೋಶೂಟ್ ನಂತರ ಇಬ್ಬರು ತಮ್ಮ ನಡುವಿನ ಸಂಬಂಧ ಬಗ್ಗೆ ಒಪ್ಪಿಗೆ ನೀಡಿದರು. ಇಂಡಿಯಾ ಟುಡೇ ಯ ರಿಪೋರ್ಟ್ಪ್ರಕಾರ , ಇಬ್ಬರು ತಮ್ಮ ನಡುವಿನ ಪ್ರೀತಿ ವಿಷಯವನ್ನು ಮುಚ್ಚಿಡಲು ತುಂಬಾ ಪ್ರಯತ್ನ ಪಟ್ಟಿದ್ದರಂತೆ ಆದರೆ ಆ ನಿಶ್ಚಿತಾರ್ಥವು ಮದುವೆಯಲ್ಲಿ ರೂಪಾಂತರ ವಾಗಲಿಲ್ಲ. .

ರವಿ ಶಾಸ್ತ್ರೀಯವರ ಪ್ರಕಾರ, ಅವರಿಗೆ ಒಬ್ಬ ನಾಯಕಿಯನ್ನು ತಮ್ಮ ಪತ್ನಿಯಾಗಿ ಸ್ವೀಕರಿಸಲು ಅವರ ಮನಸ್ಸು ಇರಲಿಲ್ಲ ವಂತೆ, ಅಲ್ಲದೆ ಅವರ ಪ್ರಕಾರ ಮನೆಯೇ ಪ್ರಾಧಾನ್ಯತೆ ಪಡೆದಿರುವ ಪತ್ನಿ ಅವರಿಗೆ ಬೇಕಾಗಿತ್ತಂತೆ. ಇದನ್ನು ತಿಳಿದ ಅಮೃತಾ ಸಿಂಗ್ ಅವರ ಅದರ ಪ್ರತ್ಯುತ್ತರವಾಗಿ, ‘ ನಾನು ಈ ಸಮಯದಲ್ಲಿ ನನ್ನ ಕರಿಯರ್ ಮಾಡುವ ಸಲುವಾಗಿ ತುಂಬಾ ಬ್ಯುಸಿ ಯಾಗಿದ್ದೇನೆ ಅಲ್ಲದೆ ಇದನ್ನು ನಾನು ಯಾವುದೇ ಕಾರಣಕ್ಕೂ ಬಿಟ್ಟು ಕೊಡುವದಕ್ಕೆ ಆಗುವದಿಲ್ಲ, ಆದರೆ ನಾನು ಮುಂದೊಂದು ದಿನ ಒಬ್ಬ ಒಳ್ಳೆಯ ಗೃಹಿಣಿಯಾಗುವದರೆ ಜೊತೆಗೆ ಪೂರ್ಣವೇಳೆಯನ್ನು ಮನೆಯಲ್ಲಿ ಕಳೆಯುವ ವ್ಯಕ್ತಿ ಯಾಗುವೆ ಎಂಬ ಭರವಸೆ ಇದೆ’ ಅವರು ರವಿ ಶಾಸ್ತ್ರಿಯವರಿಗೆ ಉತ್ತರಿಸಿದರು.

ಈ ಒಂದು ಕಾರಣಕ್ಕಾಗಿ ಇವರ ಪ್ರೇಮಕಥೆ ಬಹಳ ದಿನಗಳ ವರೆಗೆ ಉಳಿಯಲಿಲ್ಲ. 1990 ರಲ್ಲಿ ರವಿ ಶಾಸ್ತ್ರಿ ಯವರು ರೀತು ಸಿಂಗ್ ಅವರನ್ನು ಮದುವೆಯಾದರು, ಅಮೃತ ಅವರು 1991 ರಲ್ಲಿ ಸೈಫ್ ಅಲಿ ಖಾನ್ ಅವರನ್ನು ಮದುವೆ ಯಾದರು.

ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ ಅವರ ಮದುವೆ 1991 ರಲ್ಲಿ ಆಯಿತು. ಆ ವೇಳೆಗೆ ಸೈಫ್ ಅವರು ಕೇವಲ 20 ವಯಸ್ಸಿನವರಾಗಿದ್ದರು ಆದರೆ ಅಮೃತಾ ಅವರು ಅವರಕ್ಕಿಂತ 12 ವರ್ಷ ದೊಡ್ಡವರಿದ್ದರು ಅಂದರೆ ಅವರ ವಯಸ್ಸು 32 ಇತ್ತು. ಇವರಿಬ್ಬರ ಮದುವೆ 12 ವರ್ಷಗಳ ಕಾಲದ ವರೆಗೆ ಉಳಿಯಿತು. ಮುಂದೆ ಕೆಲವೊಂದು ಕಾರಣಗಳಿಂದ 2004 ರಲ್ಲಿ ಇವರಿಬ್ಬರ ನಡುವೆ ಬಿರುಕು ಉಂಟಾಗಿ ಡೈವರ್ಸ್ ತಗೆದುಕೊಂಡರು. ಡೈವರ್ಸ್ ತಗೆದುಕೊಂಡು 8 ವರ್ಷಗಳ ನಂತರ ಸೈಫ್ ಅಲಿ ಖಾನ್ ಅವರು ಕರೀನಾಕಪೂರ್ ಅವರನ್ನು ವಿವಾಹ ವಾದರು.