ಸೈಫ್ ನ ಬಿಟ್ಟು ಅರ್ಜುನ್ ಕಪೂರ್ ನ ಮದುವೆ ಆಗಬೇಕೆನಿಸಿದೆ ಎಂದು ಸಂಚಲನ ಹೇಳಿಕೆ ನೀಡಿದ ಕರೀನಾ ಕಪೂರ್

ನಟ ಸೈಫ್ ಆಲಿ ಖಾನ್ ಹಾಗೂ ಕರೀನಾ ಕಪೂರ್ ದಂಪತಿಯ ಜೋಡಿಯು ಬಾಲಿವುಡ್ ನ ಮಾದರಿ ಜೋಡಿಯಾಗಿ ಹೆಸರನ್ನು ಪಡೆದುಕೊಂಡಿದೆ. ಬಾಲಿವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ಮಾದರಿ ಜೋಡಿ ಎನ್ನುವ ವಿಷಯ ಯಾವುದೇ ಸಂದರ್ಭದಲ್ಲಿ ಚರ್ಚೆಗೆ ಒಳಪಟ್ಟರೂ ಸಹಾ ಅಲ್ಲಿ ಮೊದಲು ಕೇಳಿ ಬರುವ ಹೆಸರು ಸೈಫ್ ಮತ್ತು ಕರೀನಾ ಜೋಡಿ ಯ ಹೆಸರೇ ಆಗಿರುತ್ತದೆ. ಅನೇಕ ಬಾಲಿವುಡ್ ಕಾರ್ಯಕ್ರಮಗಳ ಸಂದರ್ಭದಲ್ಲಿಯೂ ಸೈಫ್ ಮತ್ತು ಕರೀನಾ ಜೋಡಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವುದನ್ನು ನಾವು ನೋಡಬಹುದು. ಸೈಫ್ ಮತ್ತು ಕರೀನಾ ತಮ್ಮ ಸಂಬಂಧದ ಕುರಿತಾಗಿ ಬಹಳ ಮುಕ್ತವಾಗಿ ಮಾತನಾಡುವ ಜೋಡಿಯಾಗಿದ್ದಾರೆ. ನಾವಿಂದು ನಿಮಗೆ ಹೇಳಲು ಹೊರಟಿರುವುದು ಕರೀನಾ ಕಪೂರ್ ಸಂದರ್ಶನವೊಂದರಲ್ಲಿ ನೀಡಿದ ಒಂದು ಹೇಳಿಕೆಯ ಕುರಿತಾಗಿದೆ.. ಈ ಹೇಳಿಕೆ ಒಂದರ್ಥದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು ಎಂದು ನಾವು ಹೇಳಬಹುದು.

ನಟಿ ಕರೀನಾ ಸಂದರ್ಶನದಲ್ಲಿ ಭಾಗಿಯಾಗಿ, ಮಾತನಾಡುವ ವೇಳೆಯಲ್ಲಿ ನೀಡಿದಂತಹ ಒಂದು ಹೇಳಿಕೆ ಎಲ್ಲರನ್ನೂ ಕೂಡ ಆಶ್ಚರ್ಯದಲ್ಲಿ ಮುಳುಗುವಂತೆ ಮಾಡಿತ್ತು. ಹೌದು, ಕರೀನಾ ಸಂದರ್ಶನದಲ್ಲಿ ಮಾತನಾಡುತ್ತಾ ನನಗೆ ಸೈಫ್ ಅಲಿ ಖಾನ್ ಅವರನ್ನು ಬಿಟ್ಟು ಬಿಡಬೇಕು ಎನಿಸುತ್ತಿದೆ ಎಂದು ಹೇಳಿಬಿಟ್ಟಿದ್ದರು. ಹಾಗಾದರೆ ಕರೀನಾ ಇಂತಹ ಒಂದು ಹೇಳಿಕೆಯನ್ನು ನೀಡಿದ್ದಾದರೂ ಏಕೆ ? ಅದರ ಹಿಂದಿನ ಕಾರಣವೇನು?? ಎನ್ನುವ ವಿಷಯವನ್ನು ನಾವೀಗ ತಿಳಿಯೋಣ. ನಟಿ ಕರೀನಾ ಕಪೂರ್ ಚಿತ್ರ ಜಗತ್ತಿನಲ್ಲಿ ಸಾಕಷ್ಟು ಸಕ್ರಿಯವಾಗಿದ್ದ ವೇಳೆಯಲ್ಲಿ ಬಾಲಿವುಡ್ ನ ಯುವ ನಟ ಅರ್ಜುನ್ ಕಪೂರ್ ಅವರ ಜೊತೆಯಲ್ಲಿ ಫಿಲ್ಮ್ ಕಿ ಎಂಡ್ ಎನ್ನುವ ಸಿನಿಮಾದಲ್ಲಿ ನಟಿಸಿದ್ದಾರೆ.

ಕರೀನಾ ಮತ್ತು ಅರ್ಜುನ್ ಕಪೂರ್ ಗಂಡ ಹೆಂಡತಿಯಾಗಿ ನಟಿಸಿದ್ದ ಈ ಸಿನಿಮಾದಲ್ಲಿ ಕರೀನಾ ಉದ್ಯೋಗಸ್ಥ ಮಹಿಳೆಯ ಪಾತ್ರವನ್ನು ಮಾಡಿದ್ದರೆ, ಅರ್ಜುನ್ ಕಪೂರ್ ಮನೆಯ ಕೆಲಸಗಳನ್ನು ಮಾಡಿಕೊಂಡಿರುವ ಪತಿಯ ಪಾತ್ರವನ್ನು ನಿರ್ವಹಿಸಿದ್ದರು. ಈ ಸಿನಿಮಾದ ಬಿಡುಗಡೆಯಾದ ವೇಳೆಯಲ್ಲಿ ನಡೆದಂತಹ ಒಂದು ಸಂದರ್ಶನದಲ್ಲಿ ಕರೀನಾ ಅವರನ್ನು ಅವರ ಆನ್ ಸ್ಕ್ರೀನ್ ಪತಿ ಅರ್ಜುನ್ ಕಪೂರ್ ಮತ್ತು ಆಫ್ ಸ್ಕ್ರೀನ್ ಪತಿ ಸೈಫ್ ಅಲಿ ಖಾನ್ ಅವರನ್ನು ಹೋಲಿಕೆ ಮಾಡುತ್ತಾ ಒಂದು ಪ್ರಶ್ನೆಯನ್ನು ಕೇಳಿದಾಗ ಅದಕ್ಕೆ ಕರೀನಾ ನಗುತ್ತಾ ಉತ್ತರವನ್ನು ನೀಡಿದರು.

ಪ್ರಶ್ನೆಗೆ ಉತ್ತರಿಸುತ್ತಾ, ಅರ್ಜುನ್ ಕಪೂರ್ ಎಷ್ಟು ಶ್ರಮ ಪಡುತ್ತಾರೆ ಎಂದರೆ ಅದನ್ನು ನೋಡಿದ ಮೇಲೆ ನನಗೆ ಸೈಫ್ ಅಲಿಖಾನ್ ಅವರನ್ನು ಬಿಟ್ಟು ಅರ್ಜುನ್ ಕಪೂರ್ ನನ್ನ ಮದುವೆಯಾಗಬೇಕು ಎನಿಸಿದೆ ಎಂದಿದ್ದರು ಕರೀನಾ. ಅನಂತರ ಪ್ರಶ್ನೆ ಮಾಡಿದ್ದ ಪತ್ರಕರ್ತರಿಗೆ ಅರ್ಜುನ್ ಕಪೂರ್ ಮತ್ತು ಸೈಫ್ ಆಲಿಖಾನ್ ಅವರಿಗೆ ಹೋಲಿಕೆ ಮಾಡುವುದು ಸರಿಯಲ್ಲ, ಏಕೆಂದರೆ ಅವರಿಬ್ಬರ ನಡುವೆ ಹೋಲಿಕೆ ಮಾಡುವುದು ಸಹ ಸಾಧ್ಯವಿಲ್ಲ ಎನ್ನುವ ಕಿವಿಮಾತನ್ನು ಸಹ ಹೇಳಿದ್ದರು. ಇದಾದ ನಂತರ ಪತ್ರಕರ್ತ ನೀವು ಪತಿ-ಪತ್ನಿ ಮದುವೆಯ ನಂತರವೂ ಆನ್ ಸ್ಕ್ರೀನ್ ಕಿಸ್ ಮಾಡುವ ಪಾಲಿಸಿಯನ್ನು ತೆಗೆದುಕೊಂಡಿರುವಿರಾ?? ಎಂದು ಪ್ರಶ್ನೆ ಮಾಡಿದ್ದಾರೆ.

ಆ ಪ್ರಶ್ನೆಗೂ ಸಹ ನಗುತ್ತಾ ಉತ್ತರವನ್ನು ನೀಡಿದ ಕರೀನಾ ಕಪೂರ್, ಸೈಫ್ ಅವರಿಗೆ ಸಿನಿಮಾದಲ್ಲಿ ಕಿಸ್ಸಿಂಗ್ ಮಾಡುವುದಕ್ಕೆ ಯಾವುದೇ ರೀತಿಯ ಅಡ್ಡಿ ಆತಂಕವಿಲ್ಲ. ಏಕೆಂದರೆ ಸಿನಿಮಾದ ಕಥೆಗೆ ಅದು ಅವಶ್ಯಕತೆ ಇದೆ ಎಂದರೆ ಅದನ್ನು ಪೂರ್ತಿ ಮಾಡಲೇಬೇಕಾದದ್ದು ನಮ್ಮ ಜವಾಬ್ದಾರಿ. ಇನ್ನು ನಾನು ಅರ್ಜುನ್ ಕಪೂರ್ ಜೊತೆ ನಟಿಸಿದ್ದ ಸಿನಿಮಾದಲ್ಲಿ ನಾವಿಬ್ಬರೂ ಪತಿ-ಪತ್ನಿ ಆಗಿ ನಟಿಸಿದ್ದೆವು. ಆದ ಕಾರಣ ಕಿಸ್ಸಿಂಗ್ ದೃಶ್ಯವನ್ನು ನಿರಾಕರಿಸುವುದು ಸಾಧ್ಯವಿರಲಿಲ್ಲ. ಆದ್ದರಿಂದಲೇ ನಾನು ಆ ದೃಶ್ಯದಲ್ಲಿ ನಟಿಸಲು ಒಪ್ಪಿಕೊಂಡೆ ಎಂದು ಹೇಳಿದ್ದಾರೆ.