ಸೊಂಟ ಬಳುಕಿಸಿ ಬೆಲ್ಲಿ ಡಾನ್ಸ್ ಮಾಡಿದ ಜಾಹ್ನವಿ ಕಪೂರ್: ಡಾನ್ಸ್ ನೋಡಿ ಫಿದಾ ಆದ ಅಭಿಮಾನಿಗಳು
ಬಾಲಿವುಡ್ ನ ಯುವ ನಟಿಯರಲ್ಲಿ ಈಗಾಗಲೇ ಸ್ಟಾರ್ ನಟ ನಟಿಯರ ಮಕ್ಕಳು ಕೂಡಾ ತಮ್ಮದೇ ಆದ ಛಾಪನ್ನು ಮೂಡಿಸುವಲ್ಲಿ ಯಶಸ್ವಿಯಾಗುತ್ತಾ ಒಂದರ ನಂತರ ಮತ್ತೊಂದು ಎನ್ನುವಂತೆ ದೊಡ್ಡ ದೊಡ್ಡ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆ ಹೆಸರುಗಳನ್ನು ಹೇಳಲು ಹೊರಟರೆ ನಟ ಸೈಫ್ ಆಲಿ ಖಾನ್ ಪುತ್ರಿ ಸಾರಾ ಆಲಿ ಖಾನ್, ನಟ ಚಂಕಿ ಪಾಂಡೆಯ ಮಗಳು ಅನನ್ಯಾ ಪಾಂಡೆ ಹೀಗೆ ಹಲವು ನಟಿಯರು ಸ್ಟಾರ್ ಕುಟುಂಬಗಳಿಂದ ಬಂದು ಬಾಲಿವುಡ್ ಅಂಗಳದಲ್ಲಿ ತಮ್ಮ ಅಂದ ಹಾಗೂ ನಟನೆಯ ಮೂಲಕ ಅಭಿಮಾನಿಗಳ ಹೃದಯಕ್ಕೆ ಲಗ್ಗೆಯನ್ನು ಇಟ್ಟಿದ್ದಾರೆ. ಇಂತಹ ಸ್ಟಾರ್ ನಟಿ ನಟಿಯರ ಕುಟುಂಬದ ಕುಡಿಗಳ ಬಗ್ಗೆ ಹೇಳುವಾಗ ನಾವು ತಪ್ಪದೇ ಹೇಳಲೇಬೇಕಾದ ನಟಿಯೆಂದರೆ ದಕ್ಷಿಣ ಹಾಗೂ ಬಾಲಿವುಡ್ ಎರಡನ್ನೂ ಆಳಿದ ಸೂಪರ್ ಸ್ಟಾರ್ ನಟಿಯಾದ ಶ್ರೀದೇವಿ ಅವರ ಮಗಳು ಜಾಹ್ನವಿ ಕಪೂರ್ ಕೂಡಾ ಒಬ್ಬರಾಗಿದ್ದಾರೆ.
ಜಾಹ್ನಿವಿ ಕಪೂರ್ ಈಗಾಗಲೇ ಬಾಲಿವುಡ್ ಅಂಗಳದ ಯುವ ನಟಿಯಾಗಿ ಬಹು ಬೇಡಿಕೆಯ ನಟಿ ಕೂಡಾ ಆಗಿದ್ದಾರೆ. ಅಲ್ಲದೇ ತಂದೆ ಬೋನಿ ಕಪೂರ್ ಕೂಡಾ ಒಬ್ಬ ನಿರ್ಮಾಪಕ, ಚಿಕ್ಕಪ್ಪ ಅನಿಲ್ ಕಪೂರ್ ಕೂಡಾ ದೊಡ್ಡ ಸ್ಟಾರ್. ಒಂದು ರೀತಿ ಸುತ್ತ ಮುತ್ತಲೆಲ್ಲಾ ಸಿನಿಮಾ ವಾತಾವರಣದಲ್ಲೇ ಬೆಳೆದು ಬಂದಿರುವ ಜಾಹ್ನವಿ ಧಡಕ್ ಸಿನಿಮಾ ಮೂಲಕ ಬಾಲಿವುಡ್ ಅಂಗಳಕ್ಕೆ ಅಡಿಯಿಟ್ಟವರು. ಜಾಹ್ನವಿ ಅವರ ಅಂದಕ್ಕೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ ಎಂಬುದು ಕೂಡಾ ನಿಜ. ಸೋಶಿಯಲ್ ಮೀಡಿಯಾಗಳಲ್ಲಿ ಕೂಡಾ ಜಾಹ್ನವಿ ಅವರನ್ನು ಲಕ್ಷಗಳ ಸಂಖ್ಯೆಯಲ್ಲಿ ಹಿಂಬಾಲಿಸುವ ಅಭಿಮಾನಿಗಳಿರುವುದು ಕೂಡಾ ಆಕೆಯ ಜನಪ್ರಿಯತೆಗೆ ಸಾಕ್ಷಿಯಾಗಿದೆ.
ಜಾಹ್ನವಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ತಮ್ಮ ಅಂದವಾದ ಪೋಟೋಗಳು ಮತ್ತು ವೀಡಿಯೋಗಳನ್ನು ಶೇರ್ ಮಾಡುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಾರೆ. ಈ ಮೂಲಕ ಜಾಹ್ನವಿ ಸೋಶಿಯಲ್ ಮೀಡಿಯಾಗಳಲ್ಲಿ ಸಕ್ರಿಯವಾಗಿರುತ್ತಾರೆ. ಪ್ರಸ್ತುತ ಜಾಹ್ನವಿ ಒಂದು ಬಾಲಿವುಡ್ ಸೂಪರ್ ಹಿಟ್ ಹಾಡಿಗೆ ಹಾಕಿರುವ ಹೆಜ್ಜೆಗಳು, ವಿಶೇಷವಾಗಿ ಬಾಲಿವುಡ್ ಸಾಂಗ್ ಗೆ ನೋಡುಗನು ದಂಗಾಗುವಂತೆ ಮಾಡುವ ಬೆಲ್ಲಿ ಡಾನ್ಸ್ ಮಾಡಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ ಭರ್ಜರಿ ವೈರಲ್ ಆಗುತ್ತಿದ್ದು ಅಭಿಮಾನಿಗಳ ಮೆಚ್ಚುಗೆ ಹರಿದು ಬರುತ್ತಿದೆ.
ಜಾಹ್ನವಿ ಅವರ ಬೆಲ್ಲಿ ಡಾನ್ಸ್ ವೀಡಿಯೋವನ್ನು ಒಂದು ಸಿನಿಮಾಗಳ ಮಾಹಿತಿ ನೀಡುವ ಇನ್ಸ್ಟಾಗ್ರಾಂ ಖಾತೆ ತನ್ನ ರೀಲ್ಸ್ ನಲ್ಲಿ ಒಂದು ಸೂಪರ್ ಹಿಟ್ ಹಾಡಿಗೆ ಬೆಲ್ಲಿ ಡಾನ್ಸ್ ಮಾಡಿರುವ ವೀಡಿಯೋ ಶೇರ್ ಮಾಡಿದ್ದಾರೆ. ವೀಡಿಯೋದಲ್ಲಿ ನೋಡಿದಾಗ ಶಾರೂಖ್ ಖಾನ್ ಹಾಗೂ ಕರೀನಾ ಕಪೂರ್ ದಶಕಗಳ ಹಿಂದೆ ನಟಿಸಿದ್ದ ಅಶೋಕ ಸಿನಿಮಾದ ಬಹಳ ಸುಂದರವಾದ ಹಾಡು ಸನ್ ಸನನ ಸನ್ ಹಾಡು ಆಗ ಬಹಳ ಸದ್ದು ಮಾಡಿತ್ತು. ಅಲ್ಲದೇ ಆ ಹಾಡು ಇಂಪಾಗಿರುವ ಕಾರಣದಿಂದಾಗಿ ಈ ಹಾಡು ಇಂದಿಗೂ ಕೂಡಾ ಹಲವರ ಫೇವರಿಟ್ ಕೂಡಾ ಆಗಿದೆ. ಇದೇ ಹಾಡಿಗೆ ಜಾಹ್ನವಿ ಕಪೂರ್ ಅವರು ವಿಭಿನ್ನ ಎನ್ನುವಂತೆ ಬೆಲ್ಲಿ ಡಾನ್ಸ್ ಮಾಡಿದ್ದು ಅಭಿಮಾನಿಗಳ ಭರ್ಜರಿಯಾಗಿ ಖುಷಿ ಪಟ್ಟಿದ್ದಾರೆ.
ವಿಡಿಯೋ ನೋಡಿ
ಜಾಹ್ನವಿ ಸೊಂಟ ಬಳುಕಿಸುತ್ತಾ ಹಾಕಿರುವ ಬೆಲ್ಲಿ ಡಾನ್ಸ್ ಸ್ಟೆಪ್ ಗಳು ಅಭಿಮಾನಿಗಳಿಗೆ ಹೃದಯಕ್ಕೆ ಕಿಚ್ಚು ಇಟ್ಟಿದೆ. ಈಗಾಗಲೇ ಈ ವೀಡಿಯೋವನ್ನು ಮೂರು ಲಕ್ಷಕ್ಕಿಂತ ಅಧಿಕ ಜನರು ವೀಕ್ಷಣೆಯನ್ನು ಮಾಡಿದ್ದರೆ ಸಾವಿರಾರು ಲೈಕ್ ಗಳು ಹರಿದು ಬಂದಿದ್ದು, ಅಭಿಮಾನಿಗಳು ಡಾನ್ಸ್ ಸೂಪರ್ ಎಂದು ಕಾಮೆಂಟ್ ಗಳನ್ನು ಮಾಡಿದ್ದಾರೆ. ಇನ್ನು ಜಾಹ್ನವಿಯ ವೃತ್ತಿ ಕಡೆ ನೋಡಿದರೆ ಜಾಹ್ನವಿ ಈಗಾಗಲೇ ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರ ಹೊಸ ಸಿನಿಮಾ ರೂಹಿ ಅಫ್ಜಾನಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ದೋಸ್ತಾನಾ ಹಾಗೂ ಗುಡ್ ಲಕ್ ಜೆರ್ರಿ ಚಿತ್ರೀಕರಣ ಹಂತದಲ್ಲಿದೆ.