ಸೊಳ್ಳೆ ರಕ್ತ ಹೀರುವ ಮುನ್ನ ತನ್ನ ಮಿನಿ ಸೊಂಡಿಲ (Proboscis) ನ್ನು ಹರಿತ ಮಾಡುವ ರೀತಿ ನೋಡಿ ಈ ವಿಡಿಯೋದಲ್ಲಿ ನಿಜಕ್ಕೂ ಅದ್ಭುತ!

ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವ ವಿಡಿಯೋಗಳಿಂದ ಅನೇಕ ಸಲ ಜಗತ್ತಿನ ಅದ್ಭುತ ಮತ್ತು ಅಷ್ಟೇ ವಿಚಿತ್ರ ಹಾಗೂ ವಿಶೇಷವಾದ ಜ್ಞಾನ ಮನುಷ್ಯನಿಗೆ ಅಂಗೈಯಲ್ಲಿಯೇ ದೊರೆಯುತ್ತಿದೆ.

ನಿಸರ್ಗವು ಪ್ರತಿ ಹಂತದಲ್ಲಿ, ಪ್ರತಿ ಹೆಜ್ಜೆಯಲ್ಲೂ ಏನಾದರೂ ವಿಶೇಷತೆಯನ್ನು ತನ್ನ ಗರ್ಭದಲ್ಲಿ ಇಟ್ಟುಕೊಂಡಿದೆ. ಅದು ರೀಸರ್ಚ್ ಮಾಡುವವರ ಗಮನಕ್ಕೆ ಮಾತ್ರ ಬರುತ್ತದೆ ಎಂದರೆ ತಪ್ಪಲ್ಲ.

ಈಗಿನ ವಿಡಿಯೋದಲ್ಲಿಯೂ ಸಹ ಒಂದು ವಿಶೇಷತೆ ಇದೆ. ಇಲ್ಲಿ ಸೊಳ್ಳೆಯೊಂದು ವ್ಯಕ್ತಿಯ ಕೈ ಮೇಲೆ ಕುಳಿತು ರಕ್ತ ಹೀರುವ ಪ್ರಯತ್ನ ಮಾಡುತ್ತಿದೆ. ಆದರೆ ಆ ಸೊಳ್ಳೆಯ ಸೊಂಡಿಲು ಅಥವಾ ಅದು ರಕ್ತ ಹೀರಿಕೊಳ್ಳಲು ಉಪಯೋಗಿಸುವ ಉದ್ದನೆಯ ಮುಖದ ಸೂಜಿಯಂತಹ ಭಾಗ ವ್ಯಕ್ತಿಯ ತ್ವಚೆಯಲ್ಲಿ ಎಷ್ಟು ನೂಕಿದರೂ ಒಳಗೆ ಸೇರುತ್ತಿಲ್ಲ. ಆಗ ಅದು ತನ್ನ ನೀಡಲ್ ಅರ್ಥಾತ್ ಸೂಜಿಯನ್ನು ಇನ್ನಷ್ಟು ಮೊನಚು ಮಾಡುವ ದೃಶ್ಯ ಇಲ್ಲಿ ಕಾಣಬಹುದು. ಅದು ಮೇಲಿಂದ ಮೇಲೆ ತನ್ನ ಸೊಂಡಿಲನ್ನು ಮುಂದಿನ ಕಾಲುಗಳಿಂದ ಹರಿತ ಮಾಡುವ ಪ್ರಯತ್ನ ಮಾಡುತ್ತಿರುವದು ಸ್ಪಷ್ಟವಾಗಿ ಕಂಡು ಬರುತ್ತಿದೆ.

ನೋಡಿ ಈ ವಿಡಿಯೋ…

ಪ್ರಸ್ತುತ ವಿಡಿಯೋವನ್ನು ಐಎಫ್ಎಸ್ ಅಧಿಕಾರಿಯಾದ ಸುಶಾಂತ್ ನಂದಾ ಅವರು ತಮ್ಮ ಟ್ವೀಟರ್ ಹ್ಯಾಂಡಲ್ ಮುಖಾಂತರ ಶೇರ್ ಮಾಡಿದ್ದಾರೆ. ಈ ವೀಡಿಯೋವನ್ನು ಇಲ್ಲಿಯವರೆಗೆ 31 ಸಾವಿರ ಜನರು ನೋಡಿದ್ದಾರೆ. ಈ ವಿಡಿಯೋಗೆ ಕ್ಯಾಪ್ಶನ್ ನಲ್ಲಿ ‘ಇದು ನಿವೃತ್ತಿಯ ಅಂಚಿನಲ್ಲಿದೆ’ ಎಂದು ಬರೆದಿದ್ದಾರೆ.